Set back for TVK ಚುನಾವಣೆಗೂ ಮೊದಲೇ ಒಂದು ಕ್ಷೇತ್ರದಲ್ಲಿ ಸೋಲು ಕಂಡ ವಿಜಯ್ ನೇತೃತ್ವದ ಟಿವಿಕೆ ಪಾರ್ಟಿ | Setback For Tvk Debut Election Commission Rejects Vijay Candidate In Key Battle

Set back for TVK ಚುನಾವಣೆಗೂ ಮೊದಲೇ ಒಂದು ಕ್ಷೇತ್ರದಲ್ಲಿ ಸೋಲು ಕಂಡ ವಿಜಯ್ ನೇತೃತ್ವದ ಟಿವಿಕೆ ಪಾರ್ಟಿ | Setback For Tvk Debut Election Commission Rejects Vijay Candidate In Key Battle



Set back for TVK ಚುನಾವಣೆಗೂ ಮೊದಲೇ ಒಂದು ಕ್ಷೇತ್ರದಲ್ಲಿ ಸೋಲು ಕಂಡ ವಿಜಯ್ ನೇತೃತ್ವದ ಟಿವಿಕೆ ಪಾರ್ಟಿ | Setback For Tvk Debut Election Commission Rejects Vijay Candidate In Key Battle

ಚುನಾವಣೆಗೂ ಮೊದಲೇ ಒಂದು ಕ್ಷೇತ್ರದಲ್ಲಿ ಸೋಲು ಕಂಡ ವಿಜಯ್ ನೇತೃತ್ವದ ಟಿವಿಕೆ ಪಾರ್ಟಿ, 234 ಸ್ಥಾನಗಳ ಪೈಕಿ ಇದೀಗ ಚುನನಾವಣೆ, ಫಲಿತಾಂಶಕ್ಕೂ ಮೊದಲೇ ಟಿವಿಕೆ ಒಂದು ಸ್ಥಾನ ಕಳೆದುಕೊಂಡಿದೆ. 

ಚೆನ್ನೈ (ಏ.08) ಪಂಚ ರಾಜ್ಯಗಳ ಚುನಾವಣೆ ಕಾವು ಜೋರಾಗುತ್ತಿದೆ. ನಾಳೆ (ಏ.09) ಕರ್ನಾಟಕದಲ್ಲಿ ಎರಡು ಕ್ಷೇತ್ರಗಳ ಉಪಚುನಾವಣೆ ಹಾಗೂ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದೆ. ಈ ಪೈಕಿ ತಮಿಳುನಾಡು ವಿಧನಾಸಭೆ ಚುನಾವಣೆ ತೀವ್ರ ಪೈಪೋಟಿಯಿಂದ ಕೂಡಿದೆ. ಇಲ್ಲೀವೆಗೆ ಡಿಎಂಕೆ, ಎಐಡಿಎಂಕೆ ಸೇರಿದಂತೆ ಕೆಲ ಪಕ್ಷಗಳ ನಡುವಿನ ಹೋರಾಟ ಇದೀಗ ವಿಸ್ತರಣೆಗೊಂಡಿದೆ. ಒಂದೆಡೆ ಬಿಜೆಪಿ ಶೇಕಡಾವಾರು ಮತದಲ್ಲಿ ಕೆಲ ಬದಲಾವಣೆ ತರಲಿದೆ. ಆದರೆ ನಟ ವಿಜಯ್ ಜೊಸೆಫ್ ನೇತೃತ್ವದ ಟಿವಿಕೆ ಪಕ್ಷ ಭಾರಿ ಬದಲಾವಣೆಯ ನಿರೀಕ್ಷೆಯಲ್ಲಿದೆ. ಚುನಾವಣೆ ಕಾವು ಏರುತ್ತಿದ್ದಂತೆ ಟಿವಿಕೆ ಪಕ್ಷಕ್ಕೆ ಹಿನ್ನಡೆಯಾಗಿದೆ. ತಮಿಳುನಾಡು ಚುನಾವಣೆ ನಡೆದಿಲ್ಲ, ಆದರೆ ಚುನಾವಣೆಗೂ ಮೊದಲೇ ಟಿವಿಕೆ ಒಂದು ಸ್ಥಾನ ಕಳೆದುಕೊಂಡಿದೆ.

ನಟ ಜೊಸೆಫ್ ವಿಜಯ್ ನೇತೃತ್ವದ ಟಿವಿಕೆ ಪಾರ್ಟಿ ತಮಿಳುನಾಡು ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಹಿನ್ನಡೆ ಎದುರಿಸಿದೆ. ತಮಿಶುನಾಡಿನ ಎಡಪ್ಪಾಡಿ ವಿಧಾನಸಭಾ ಕ್ಷೇತ್ರವನ್ನು ಟಿವಿಕೆ ಪಕ್ಷ ಕಳೆದುಕೊಂಡಿದೆ. ಈ ಕ್ಷೇತ್ರದಲ್ಲಿ ಟಿವಿಕೆ ಪಕ್ಷದಿಂದ ಅರುಣ್ ಕುಮಾರ್ ಎಂ ನಾಪತ್ರ ಸಲ್ಲಿಸಿದ್ದರು. ಆದರೆ ಈ ನಾಮಪತ್ರ ತಿರಸ್ಕೃತಗೊಂಡಿದೆ. ಸಹಿ ವಿಚಾರದಲ್ಲಿ ಅರುಣ್ ಕುಮಾರ್ ಎಂ ನಾಪತ್ರ ತಿರಸ್ಕೃತವಾಗಿದೆ. ಮುಖ್ಯ ಅಭ್ಯರ್ಥಿ ನಾಮಪತ್ರದಲ್ಲಿ ಸಮಸ್ಯೆಗಳು ಎದುರಾಗದೆ ಎಂದು ಎರಡನೇ ಅಭ್ಯರ್ಥಿಯಾಗಿ ನಿತ್ಯಾ ಅವರನ್ನು ಟಿವಿಕೆ ಕಳಣಕ್ಕಿಳಿಸಿತ್ತು. ಆದರೆ ನಿತ್ಯಾ ಅವರ ನಾಮಪತ್ರವೂ ತಿರಸ್ಕೃತಗೊಂಡಿದೆ.

ಚುನಾವಣೆಗೂ ಮೊದಲೇ ಎಡಪ್ಪಾಡಿಯಲ್ಲಿ ಟಿವಿಕೆಗೆ ಸೋಲು

ಚುನಾವಣೆ ನಡೆದಿಲ್ಲ. ಪ್ರಚಾರ ನಡೆಯುತ್ತಿರವಾಗಲೇ ಟಿವಿಕೆ ಪಕ್ಷ ಎಡಪ್ಪಾಡಿ ಕ್ಷೇತ್ರದಲ್ಲಿ ಸೋಲು ಕಂಡಿದೆ. ಟಿವಿಕೆ ಪಕ್ಷದ ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದೆ. ಪ್ರತಿ ನಾಮಪತ್ರದಲ್ಲಿ ಕನಿಷ್ಠ 10 ಮಂದಿ ಸಹಿ ಹಾಕಿರಬೇಕು. ಆದರೆ ಅರುಣ್ ಕುಮಾರ್ ನಾಪತ್ರದಲ್ಲಿ 7 ಮಂದಿ ಹಾಗೂ ನಿತ್ಯ ನಾಮಪತ್ರದಲ್ಲಿ 7 ಮಂದಿ ಸಹಿ ಹಾಕಿದ್ದಾರೆ. ಕೆಲ ಪ್ರಮುಖ ಮಾಹಿತಿ ಭರ್ತಿ ಮಾಡದ ಕಾರಣ ಚುನಾವಣಾ ಆಯೋಗ ನಾಮಪತ್ರವನ್ನು ತಿರಸ್ಕೃತಗೊಳಿಸಿದೆ.

ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಕ್ಷೇತ್ರ

ಎಜಪ್ಪಾಡಿ ವಿಧಾನಸಭಾ ಕ್ಷೇತ್ರ ತಮಿಳುನಾಡು ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಪ್ರಮುಖ ನಾಯಕ ಎಡಪ್ಪಾಡಿ ಕೆ ಪಳನಿ ಅವರ ಭದ್ರಕೋಟೆ ಎಂದೇ ಗುರುತಿಸಿಕೊಂಡಿದೆ. ಈ ಬಾರಿ ತ್ರಿಕೋನ ಸ್ಪರ್ಧೆಯಿಂದ ಮತಗಳು ಹಂಚಿಕೆಯಾಗಲಿದೆ. ಇದರಿಂದ ಎಡಪ್ಪಾಡಿ ಕ್ಷೇತ್ರ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಚುನಾವಣೆಗೂ ಮೊದಲೆ ಟಿಕೆಟ್ ಪಕ್ಷದ ಒಂದು ವಿಕೆಟ್ ಉರುಳಿದೆ.

ಅಭ್ಯರ್ಥಿಗಳು ಮಿಸ್ಸಿಂಗ್

ಇತ್ತ ನಾಮಪತ್ರ ತಿರಸ್ಕೃತಗೊಂಡ ಶಾಕ್‌ನಿಂದ ಟಿವಿಕೆ ಪಕ್ಷ ಚೇತರಿಸಿಕೊಳ್ಳುವ ಮೊದಲೇ ಇದೀಗ ಟಿವಿಕೆಯ ಇಬ್ಬರು ಅಭ್ಯರ್ಥಿಗಳಾದ ಅರುಣ್ ಕುಮಾರ್ ಹಾಗೂ ನಿತ್ಯ ನಾಪತ್ತೆಯಾಗಿದ್ದಾರೆ. ಟಿವಿಕೆ ಪಕ್ಷದ ಅಭ್ಯರ್ಥಿಗಳು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.



Source link

Leave a Reply

Your email address will not be published. Required fields are marked *