IPL 2026: ಪ್ಲೇಆಫ್‌ಗೆ ಈ 4 ತಂಡಗಳು ಫಿಕ್ಸ್! ಸಿಎಸ್‌ಕೆ, ಕೆಕೆಆರ್, ಸನ್‌ರೈಸರ್ಸ್‌ ಕಥೆ ಏನು?

IPL 2026: ಪ್ಲೇಆಫ್‌ಗೆ ಈ 4 ತಂಡಗಳು ಫಿಕ್ಸ್! ಸಿಎಸ್‌ಕೆ, ಕೆಕೆಆರ್, ಸನ್‌ರೈಸರ್ಸ್‌ ಕಥೆ ಏನು?

IPL 2026: ಪ್ಲೇಆಫ್‌ಗೆ ಈ 4 ತಂಡಗಳು ಫಿಕ್ಸ್! ಸಿಎಸ್‌ಕೆ, ಕೆಕೆಆರ್, ಸನ್‌ರೈಸರ್ಸ್‌ ಕಥೆ ಏನು?

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದ್ದು, ಮೊದಲ ವಾರವೇ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಕ್ಕಿದೆ. ಈಗಾಗಲೇ ನಾಲ್ಕು ತಂಡಗಳು ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿವೆ.
ಐಪಿಎಲ್ 2026 ಸೀಸನ್ ಆರಂಭದಿಂದಲೇ ರೋಚಕವಾಗಿ ಸಾಗುತ್ತಿದೆ. ಇಲ್ಲಿಯವರೆಗೆ ನಡೆದ 12 ಪಂದ್ಯಗಳ ಪ್ರದರ್ಶನವನ್ನು ಗಮನಿಸಿದರೆ, ಯಾವ ತಂಡಗಳು ಪ್ಲೇಆಫ್‌ಗೆ ಹತ್ತಿರದಲ್ಲಿವೆ ಮತ್ತು ಯಾವ ತಂಡಗಳು ಹಿಂದುಳಿದಿವೆ ಎಂಬ ಸ್ಪಷ್ಟ ಚಿತ್ರಣ ಸಿಗುತ್ತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಮತೋಲನ ಹೊಂದಿರುವ ತಂಡಗಳು ಈ ಬಾರಿ ಮೇಲುಗೈ ಸಾಧಿಸುವ ಲಕ್ಷಣಗಳು ಕಾಣುತ್ತಿವೆ.
ಸದ್ಯದ ಅಂಕಿ-ಅಂಶಗಳ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್, ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪ್ಲೇಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ.

ದೆಹಲಿ ಕ್ಯಾಪಿಟಲ್ಸ್ ಅದ್ಭುತ ಪ್ರದರ್ಶನ ನೀಡುತ್ತಿದೆ. ಆದರೆ, ಸಮೀರ್ ರಿಜ್ವಿ ಮೇಲೆ ಅತಿಯಾಗಿ ಅವಲಂಬಿತವಾಗಿರುವುದು ತಂಡಕ್ಕೆ ಮೈನಸ್ ಆಗಬಹುದು. ಒಂದು ವೇಳೆ ರಿಜ್ವಿ ವಿಫಲವಾದರೆ, ದೆಹಲಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಆಡಿದ ಎರಡೂ ಪಂದ್ಯ ಗೆದ್ದು ಬೀಗಿದೆ.

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರನ್ನರ್ ಅಪ್‌ ಪಂಜಾಬ್ ಕಿಂಗ್ಸ್ ತಂಡಗಳು ಸಾಕಷ್ಟು ಸಮತೋಲಿತವಾಗಿ ಗುರುತಿಸಿಕೊಂಡಿದ್ದು, ಮತ್ತೊಮ್ಮೆ ಪ್ಲೇ ಆಫ್ ಪ್ರವೇಶಿಸಬಲ್ಲ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿವೆ.

ಅಚ್ಚರಿ ಎನ್ನುವಂತೆ ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಸಿಎಸ್‌ಕೆ ಈ ಬಾರಿ ಪ್ಲೇಆಫ್ ತಲುಪುವುದು ಕಷ್ಟ ಎನಿಸುತ್ತಿದೆ. ಆಡಿದ ಮೂರೂ ಪಂದ್ಯಗಳಲ್ಲಿ ಸೋಲು, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವೈಫಲ್ಯ ತಂಡವನ್ನು ಸಂಕಷ್ಟಕ್ಕೆ ದೂಡಿದೆ. ಹಾಗೆಯೇ, 25 ಕೋಟಿ ಕೊಟ್ಟು ಖರೀದಿಸಿದ ಆಟಗಾರನ ವೈಫಲ್ಯ ಮತ್ತು ಸ್ಪಿನ್ ವಿಭಾಗ ದುರ್ಬಲವಾಗಿರುವುದರಿಂದ ಕೆಕೆಆರ್ ಸ್ಥಿತಿಯೂ ಚಿಂತಾಜನಕವಾಗಿದೆ. ಗುಜರಾತ್ ಟೈಟಾನ್ಸ್ ಕೂಡ ಫಾರ್ಮ್ ಕೊರತೆಯಿಂದ ಬಳಲುತ್ತಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳ ಪ್ರದರ್ಶನ ಸ್ಥಿರವಾಗಿಲ್ಲ. ಈ ತಂಡಗಳು ಕೇವಲ ಬ್ಯಾಟಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿವೆ. ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಪ್ಲೇಆಫ್ ಅವಕಾಶಗಳು ಹೆಚ್ಚಾಗುತ್ತವೆ. ಇನ್ನು ಮುಂಬೈ ಇಂಡಿಯನ್ಸ್‌ನ ಅಸ್ಥಿರ ಪ್ರದರ್ಶನ ಮತ್ತೊಮ್ಮೆ ಅಭಿಮಾನಿಗಳನ್ನು ಚಿಂತೆಗೀಡಾಗುವಂತೆ ಮಾಡಿದೆ. ಲೀಗ್ ಇನ್ನೂ ಆರಂಭಿಕ ಹಂತದಲ್ಲಿದ್ದರೂ, ಸದ್ಯದ ಲೆಕ್ಕಾಚಾರದ ಪ್ರಕಾರ ಮೇಲೆ ತಿಳಿಸಿದ ನಾಲ್ಕು ತಂಡಗಳು ಪ್ಲೇಆಫ್‌ನತ್ತ ಹೆಜ್ಜೆ ಹಾಕುತ್ತಿವೆ.

Source link

Leave a Reply

Your email address will not be published. Required fields are marked *