
ಜನವರಿ, ಏಪ್ರಿಲ್ 8: ಚೀನಾ (ಚೀನಾ) 2025-26ರ ಹಣಕಾಸು ವರ್ಷದಲ್ಲಿ ಭಾರತದ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಆಗಿದೆ. ಈ ವಿಚಾರದಲ್ಲಿ ಅಮೆರಿಕವನ್ನು ಚೀನಾ ಹಿಂದಿಕ್ಕಿದೆ ಎಂದು ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ ಶು ಫೇಹೋಂಗ್ ದಿನಾಂಕ. ಕಳೆದ ಹಣಕಾಸು ವರ್ಷದ ಮೊದಲ 11 ತಿಂಗಳ ದತ್ತಾಂಶವನ್ನು ಆಧಾರವಾಗಿಟ್ಟುಕೊಂಡು ಅವರು ಈ ಟ್ವೀಟ್ ಮಾಡಿದ್ದಾರೆ.
2025ರ ಏಪ್ರಿಲ್‌ನಿಂದ 2026ರ ಫೆಬ್ರುವರಿಯಿಂದ 11 ತಿಂಗಳಿನಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ 127.8 ಬಿಲಿಯನ್ ಡಾಲರ್‌ನಷ್ಟು ಇತ್ತು. ಅದೇ ಸಮಯದಲ್ಲಿ ಭಾರತ ಮತ್ತು ಚೀನಾ ನಡುವೆ 137 ಬಿಲಿಯನ್ ವ್ಯಾಪಾರ ನಡೆದಿದೆ. ಸತತ 11 ತಿಂಗಳ ಭಾರತಕ್ಕೆ ಚೀನಾವೇ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಆಗಿರುವುದು ಸಂತೋಷದ ಸಂಗತಿ ಎಂದು ಚೀನಾ ರಾಯಭಾರ ವಕ್ತಾರರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಂದ ಟೋಲ್ ವಸೂಲಿಗೆ ಇರಾನ್ ಯೋಜನೆ; ಅಂತಾರಾಷ್ಟ್ರೀಯ ನಿಯಮಗಳು ಏನು ಹೇಳುತ್ತವೆ?
ಎರಡು ತಿಂಗಳ ಹಿಂದೆ, ಇರಾನ್ ಯುದ್ಧಕ್ಕೆ ಮೊದಲು ಮುಂಬೈನಲ್ಲಿರುವ ಚೀನಾದ ಕಾನ್ಸುಲ್ ಜನರಲ್ ಆದ ಖಿನ್ ಜೀ ಅವರು ಭಾರತ ಹಾಗೂ ಚೀನಾ ದೇಶಗಳ ಆರ್ಥಿಕ ಬೆಳವಣಿಗೆ ಕುರಿತು ಮಾತನಾಡಿದ್ದರು. ಈ ಎರಡು ದೇಶಗಳು ದೊಡ್ಡ ಆರ್ಥಿಕತೆಯನ್ನು ಹೊಂದಿವೆ. ಬಹುಪಕ್ಷೀಯ ವ್ಯಾಪಾರ ವಹಿವಾಟುಗಳನ್ನು ಬೆಂಬಲಿಸುತ್ತದೆ. ಹೀಗಾಗಿ, ಬಾಹ್ಯ ಪರಿಣಾಮಗಳಿಂದ ಭಾರತ ಮತ್ತು ಚೀನಾ ವ್ಯಾಪಾರ ಕುಂಠಿತಗೊಳ್ಳುವುದಿಲ್ಲ ಎಂದು ಹೇಳಿದರು.
ಶು ಫೆಹೋಂಗ್ ಅವರ ಟ್ವೀಟ್
FY2026 ರಲ್ಲಿ – 11 ನೇ ಸತತ ತಿಂಗಳಿಗೆ ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಮಾರ್ಪಟ್ಟಿದೆ ಎಂದು ತಿಳಿದುಕೊಳ್ಳಲು ಸಂತೋಷವಾಗಿದೆ.
pic.twitter.com/2jz2mppJAF
— ಕ್ಸು ಫೀಹಾಂಗ್ (@China_Amb_India) ಏಪ್ರಿಲ್ 7, 2026
ಚೀನಾ ಭಾರತದ ಅತಿದೊಡ್ಡ ಟ್ರೇಡಿಂಗ್ ಪಾಲುದಾರ ಎನಿಸಿದರೂ, ಎರಡು ದೇಶಗಳ ನಡುವಿನ ವ್ಯಾಪಾರದ ಅಂತರ ಬಹಳ ಅಗಾಧವಾಗಿದೆ. ಚೀನಾ ಎದುರು ಭಾರತ ವಿಪರೀತ ಟ್ರೆಡ್ ಡೆಫಿಸಿಟ್ ಹೊಂದಿದೆ. ಆದರೆ, ಅಮೆರಿಕ ಎದುರು ಭಾರತ ಟ್ರೆಡ್ ಸರ್ಪ್ಲಾಸ್ ಸ್ಥಿತಿ ಇದೆ.
ಇದನ್ನೂ ಓದಿ: ಯುಎಇಗೆ ಸಾಲ ವಾಪಸ್ ಕೊಟ್ಟರೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಏನಾಗಬಹುದು? ಇಲ್ಲಿದೆ ಇಂಟರೆಸ್ಟಿಂಗ್ ಲೆಕ್ಕಾಚಾರ
2025-26ರ ಹಣಕಾಸು ವರ್ಷದ ಏಪ್ರಿಲ್ ನಿಂದ ಜನವರಿವರೆಗೆ ಚೀನಾಕ್ಕೆ ಭಾರತ ರಫ್ತು ಮಾಡಿದ್ದು 15.88 ಬಿಲಿಯನ್ ಡಾಲರ್. ಆದರೆ, ಆಮದು ಮಾಡಿಕೊಂಡಿದ್ದು 108.18 ಬಿಲಿಯನ್ ಡಾಲರ್. ಈ ಅವಧಿಯಲ್ಲಿ ಅಮೆರಿಕಕ್ಕೆ ಭಾರತ 73.7 ಬಿಲಿಯನ್ ಡಾಲರ್ ರಫ್ತು ಮಾಡಿದರೆ, 44.1 ಬಿಲಿಯನ್ ಡಾಲರ್ ಮಾತ್ರವೇ ಆಮದು ಮಾಡಿಕೊಂಡಿರುವುದು. ಹೀಗಾಗಿ, ಭಾರತಕ್ಕೆ ಅಮೆರಿಕ ಮುಖ್ಯವಾದ ಟ್ರೇಡಿಂಗ್ ಪಾರ್ಟ್ನರ್ ಆಗಿದೆ, ಅತಿದೊಡ್ಡ ರಫ್ತು ಮಾರುಕಟ್ಟೆಯೂ ಆಗಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ