ಇರಾನ್‌ಗಿಲ್ಲ ಶುದ್ದ ಯುರೇನಿಯಂ, ಸುಂಕ ಕಡಿತ ಹಾಗೂ ನಿರ್ಬಂಧ ಸಡಿಲಿಕೆಯ ಭರವಸೆ ನೀಡಿದ ಟ್ರಂಪ್! | Trump Iran Deal No Uranium Enrichment Sanctions Relief Talks San

ಇರಾನ್‌ಗಿಲ್ಲ ಶುದ್ದ ಯುರೇನಿಯಂ, ಸುಂಕ ಕಡಿತ ಹಾಗೂ ನಿರ್ಬಂಧ ಸಡಿಲಿಕೆಯ ಭರವಸೆ ನೀಡಿದ ಟ್ರಂಪ್! | Trump Iran Deal No Uranium Enrichment Sanctions Relief Talks San



ಇರಾನ್‌ಗಿಲ್ಲ ಶುದ್ದ ಯುರೇನಿಯಂ, ಸುಂಕ ಕಡಿತ ಹಾಗೂ ನಿರ್ಬಂಧ ಸಡಿಲಿಕೆಯ ಭರವಸೆ ನೀಡಿದ ಟ್ರಂಪ್! | Trump Iran Deal No Uranium Enrichment Sanctions Relief Talks San

ಇರಾನ್ ಜೊತೆಗಿನ ಕದನ ವಿರಾಮದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಸಂಧಾನದ ಹಂತಗಳನ್ನು ಘೋಷಿಸಿದ್ದಾರೆ. ಯುರೇನಿಯಂ ಶುದ್ದೀಕರಣವನ್ನು ಸಂಪೂರ್ಣವಾಗಿ ನಿಲ್ಲಿಸಿದರೆ, ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಸಡಿಲಗೊಳಿಸಿ ಸುಂಕ ಕಡಿತ ಮಾಡುವುದಾಗಿ ಟ್ರಂಪ್ ತಿಳಿಸಿದ್ದಾರೆ.

ವಾಷಿಂಗ್ಟನ್ (ಏ.8): ಇರಾನ್ ಜೊತೆಗಿನ ಕದನ ವಿರಾಮದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಧಾನದ ಮುಂದಿನ ಹಂತಗಳನ್ನು ಘೋಷಿಸಿದ್ದಾರೆ. ಇರಾನ್ ಸಂಪೂರ್ಣವಾಗಿ ಶುದ್ಧ ಯುರೇನಿಯಂ ಪಡೆಯುವುದನ್ನು (Uranium Enrichment) ನಿಲ್ಲಿಸಬೇಕು ಎಂದು ಅಮೆರಿಕ ಪಟ್ಟು ಹಿಡಿದಿದ್ದು, ಇದಕ್ಕೆ ಪ್ರತಿಯಾಗಿ ಆ ದೇಶದ ಮೇಲಿನ ಸುಂಕ ಕಡಿತ ಹಾಗೂ ಆರ್ಥಿಕ ನಿರ್ಬಂಧಗಳನ್ನು ಸಡಿಲಗೊಳಿಸುವ ಕುರಿತು ಮಾತುಕತೆ ನಡೆಸುವುದಾಗಿ ಟ್ರಂಪ್ ಬುಧವಾರ ತಿಳಿಸಿದ್ದಾರೆ.

ತಮ್ಮ ‘ಟ್ರುತ್ ಸೋಷಿಯಲ್’ (Truth Social) ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಈ ಕದನ ವಿರಾಮವು ಅತ್ಯಂತ “ಫಲಪ್ರದ ಆಡಳಿತ ಬದಲಾವಣೆಯ” (productive regime change) ಸಂಕೇತವಾಗಿದೆ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಬೃಹತ್ ಒಪ್ಪಂದದ ಪ್ರಮುಖ ಅಂಶಗಳನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

“ಇನ್ಮುಂದೆ ಇರಾನ್‌ನಲ್ಲಿ ಯಾವುದೇ ರೀತಿಯ ಯುರೇನಿಯಂ ಶುದ್ದೀಕರಣ ನಡೆಯುವುದಿಲ್ಲ. ಅಮೆರಿಕವು ಇರಾನ್‌ನೊಂದಿಗೆ ಕೆಲಸ ಮಾಡಲಿದ್ದು, ಭೂಮಿಯ ಆಳದಲ್ಲಿ ಅಡಗಿರುವ ಎಲ್ಲಾ ಪರಮಾಣು ಕಸವನ್ನು (Nuclear Dust) ಅಗೆದು ಹೊರತೆಗೆಯಲಿದೆ,” ಎಂದು ಟ್ರಂಪ್ ತಿಳಿಸಿದ್ದಾರೆ.

ಪರಮಾಣು ಕೇಂದ್ರಗಳ ಮೇಲೆ ಕಣ್ಗಾವಲು

ಇರಾನ್‌ನ ಪರಮಾಣು ಸ್ಥಾವರಗಳು ಅಮೆರಿಕದ ಉಪಗ್ರಹಗಳ (Satellite Surveillance) ಕಣ್ಗಾವಲಿನಲ್ಲಿವೆ. ಅಮೆರಿಕ ದಾಳಿ ಮಾಡಿದ ದಿನದಿಂದ ಈವರೆಗೂ ಅಲ್ಲಿ ಯಾವುದನ್ನೂ ಮುಟ್ಟಲಾಗಿಲ್ಲ ಎಂದು ಅವರು ಹೇಳಿದ್ದಾರೆ. ಯುದ್ಧದ ನಂತರದ ಪರಿಸ್ಥಿತಿಯಲ್ಲಿ ಅಮೆರಿಕವು ಇರಾನ್‌ನೊಂದಿಗೆ ನಿಕಟವಾಗಿ ಕೆಲಸ ಮಾಡಲಿದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುಂಕ ಮತ್ತು ನಿರ್ಬಂಧಗಳ ಸಡಿಲಿಕೆ

ಇರಾನ್ ತನ್ನ ಪರಮಾಣು ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಲ್ಲಿಸಿದರೆ, ಅಮೆರಿಕವು ಆ ದೇಶದ ಮೇಲೆ ಹೇರಿರುವ ಕಠಿಣ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕಲು ಮತ್ತು ವ್ಯಾಪಾರ ಸುಂಕಗಳನ್ನು ಕಡಿಮೆ ಮಾಡಲು ಸಿದ್ಧವಿದೆ ಎಂದು ಟ್ರಂಪ್ ಸೂಚನೆ ನೀಡಿದ್ದಾರೆ. ಈ ಬೆಳವಣಿಗೆಯು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಅಮೆರಿಕವು ಇರಾನ್ ಅನ್ನು ಪರಮಾಣು ಮುಕ್ತ ದೇಶವನ್ನಾಗಿ ಮಾಡಲು ಪಣತೊಟ್ಟಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.



Source link

Leave a Reply

Your email address will not be published. Required fields are marked *