ಬೇರೆಯವರ ಪ್ಯಾನ್ ಕಾರ್ಡ್ ದಾಖಲೆ ಬಳಸಿ ಸಾಲ ಸೂರೆಗೊಂಡ ವಂಚಕರು; ನಿಮ್ಮ ಪ್ಯಾನ್ ದುರ್ಬಳಕೆ ಗುರುತಿಸುವುದು ಹೇಗೆ?

ಬೇರೆಯವರ ಪ್ಯಾನ್ ಕಾರ್ಡ್ ದಾಖಲೆ ಬಳಸಿ ಸಾಲ ಸೂರೆಗೊಂಡ ವಂಚಕರು; ನಿಮ್ಮ ಪ್ಯಾನ್ ದುರ್ಬಳಕೆ ಗುರುತಿಸುವುದು ಹೇಗೆ?


ಬೇರೆಯವರ ಪ್ಯಾನ್ ಕಾರ್ಡ್ ದಾಖಲೆ ಬಳಸಿ ಸಾಲ ಸೂರೆಗೊಂಡ ವಂಚಕರು; ನಿಮ್ಮ ಪ್ಯಾನ್ ದುರ್ಬಳಕೆ ಗುರುತಿಸುವುದು ಹೇಗೆ?

ಬೆಂಗಳೂರು, ಏಪ್ರಿಲ್ 8: ಆಧಾರ್, ಪ್ಯಾನ್ ಇತ್ಯಾದಿ ವೈಯಕ್ತಿಕ ದಾಖಲೆಗಳನ್ನು ಎಲ್ಲೆಂದರಲ್ಲಿ ನೀಡಬಾರದು ಎಂದು ಸರ್ಕಾರ ಪದೇ ಪದೇ ಹೇಳುತ್ತಿರುತ್ತದೆ. ವಂಚಕರು ಈ ದಾಖಲೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾದ ಘಟನೆಯೊಂದು ಈ ಎಚ್ಚರಿಕೆಯನ್ನು ಪುಷ್ಟೀಕರಿಸುತ್ತದೆ. ಒಬ್ಬ ವ್ಯಕ್ತಿಯ ಪ್ಯಾನ್ ಕಾರ್ಡ್ (PAN) ಅನ್ನು ಪಡೆದು, ದುರುಳರು 22 ಲಕ್ಷ ರೂ ಮೊತ್ತದ ಐದು ವಿವಿಧಗಳನ್ನು ಮಾಡಲಾಗಿದೆ. ಉತ್ತಮವಾಗಿತ್ತು ಆ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಒಮ್ಮೆಗೇ ಕುಸಿದಿದೆ. ಈ ಘಟನೆಯನ್ನು ಟ್ಯಾಕ್ಸ್ ಅಡ್ವೈಸರಿ ಸಂಸ್ಥೆಯಾದ ಟ್ಯಾಕ್ಸ್ಬಡ್ಡಿ ಎಕ್ಸ್ನಲ್ಲಿ ಪೋಸ್ಟ್ ಮಾಡಿ ವಿವರಿಸಲಾಗಿದೆ.

ಪ್ಯಾನ್ ದುರ್ಬಳಕೆ ಪತ್ತೆ ಮಾಡುವುದು ಹೇಗೆ?

ನೀವು ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುವ ಅಭ್ಯಾಸಗಳನ್ನು ತೆಗೆದುಕೊಳ್ಳಿ. ಕ್ರೆಡಿಟ್ ಬ್ಯೂರೋಗಳಾದ ಸಿಬಿಲ್, ಎಕ್ಸ್ ಪೀರಿಯನ್, ಈಕ್ವಿಫ್ಯಾಕಸ್ ಅಥವಾ ಸಿಆರ್ ಐಎಫ್, ಯಾವುದಾದರೂ ಒಂದರಲ್ಲಿ ನೀವು ಕ್ರೆಡಿಟ್ ಸ್ಕೋರ್ ಮತ್ತು ರಿಪೋರ್ಟ್ ಪಡೆಯಬಹುದು. ನಿಮ್ಮ ಪ್ಯಾನ್ ಮತ್ತು ಮೊಬೈಲ್ ನಂಬರ್ ಇದ್ದರೆ ಸಾಕು.

ಇದನ್ನೂ ಓದಿ: ಸೀಸ್ಫೈರ್, ಭಾರತದ ಷೇರು ಮಾರುಕಟ್ಟೆ ಗರಿಗೆದರಲು ಇಲ್ಲಿವೆ 7 ಕಾರಣಗಳು

ಕ್ರೆಡಿಟ್ ಸ್ಕೋರ್ ಅನ್ನು ಎಷ್ಟು ಬಾರಿ ಬೇಕಾದರೂ ನೋಡಬಹುದು. ಕ್ರೆಡಿಟ್ ರಿಪೋರ್ಟ್ ಅನ್ನು ವರ್ಷಕ್ಕೆ ಒಮ್ಮೆ ಉಚಿತವಾಗಿ ಪಡೆಯಬಹುದು. ಹೆಚ್ಚು ಬೇಕೆಂದರೆ ಒಂದಿಷ್ಟು ಶುಲ್ಕ ಕೊಡಬೇಕು.

ದುರ್ಬಳಕೆ ಪತ್ತೆ ಸಾಧ್ಯತೆ

ನೀವು ಕ್ರೆಡಿಟ್ ಸ್ಕೋರ್ ಮೊದಲು ಪರಿಶೀಲಿಸಬಹುದು. ಸ್ಕೋರ್ ಅಸಹಜವಾಗಿ ವ್ಯತ್ಯಾಸಗೊಂಡಿದ್ದರೆ ಅಲರ್ಟ್ ಆಗಿರಿ. ಕೂಡಲೇ ಕ್ರೆಡಿಟ್ ರಿಪೋರ್ಟ್ ಪಡೆಯಿರಿ. ಈ ವರದಿಯಲ್ಲಿ ನಿಮ್ಮ ಪ್ಯಾನ್ ಅಡಿಯಲ್ಲಿ ದಾಖಲಾದ ಎಲ್ಲಾ ಲೋನ್ ದಾಖಲೆಗಳು, ಕ್ರೆಡಿಟ್ ಕಾರ್ಡ್ ದಾಖಲೆಗಳ ಮಾಹಿತಿ ಇರುತ್ತದೆ. ನೀವು ಹೊಂದಿರುವ ಚಟುವಟಿಕೆ ಯಾವುದಾದರೂ ಇದ್ದರೆ ತತ್ ಕ್ಷಣವೇ ಕ್ರೆಡಿಟ್ ಬ್ಯೂರೋಗೆ ದೂರು ಕೊಡಿ.

ನಿಮ್ಮ ಪ್ಯಾನ್ ಬಳಸಿ ಯಾರಾದರೂ ಸಾಲ ಪಡೆದಿದ್ದರೆ, ಬ್ಯಾಂಕ್ ಗೆ ಹೋಗಿಯೂ ದೂರು ಕೊಡಬಹುದು. ಇದರಿಂದ ನಿಮ್ಮದಲ್ಲದ ತಪ್ಪಿಗೆ ನೀವು ಬಲಿಯಾಗುವುದನ್ನು ತಪ್ಪಿಸಬಹುದು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಂದ ಟೋಲ್ ವಸೂಲಿಗೆ ಇರಾನ್ ಯೋಜನೆ; ಅಂತಾರಾಷ್ಟ್ರೀಯ ನಿಯಮಗಳು ಏನು ಹೇಳುತ್ತವೆ?

ಪ್ಯಾನ್ ದುರ್ಬಳಕೆ ಮಾಡಿದರೆ ನಿಮಗೆ ಆಗುವ ಹಾನಿಗಳು…

ಪ್ಯಾನ್ ದುರ್ಬಳಕೆ ಮಾಡಿಕೊಳ್ಳುವವರು ಉದ್ದೇಶಪೂರ್ವಕವಾಗಿ ವಂಚನೆ ಮಾಡುವಂಥವರೇ ಆಗಿರುತ್ತಾರೆ. ಸಾಲ ಪಡೆದು ಮರುಪಾವತಿಸದೆ ಹೋಗಬಹುದು. ಆಗ ಪ್ಯಾನ್ ನಂಬರ್ ನಿಮ್ಮದಾಗಿರುವುದರಿಂದ ಬ್ಯಾಂಕ್ ನವರು ನಿಮ್ಮ ಬೆನ್ನು ಬೀಳಬಹುದು. ಕ್ರೆಡಿಟ್ ಏಜೆನ್ಸಿಗಳು ನಿಮ್ಮ ಸ್ಕೋರ್ ಅನ್ನು ತಗ್ಗಿಸಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *