
ಕೆಲಸದ ಸ್ಥಳಗಳಲ್ಲಿ ಕೆಲವು ಉದ್ಯೋಗಿಗಳು (ನೌಕರರು) ಅನುಭವಿಸುವ ಒತ್ತಡ ಹೇಳಲಾಗದು. ಆದರೆ ಏನ್ ಮಾಡೋದು, ಕೆಲಸ ಮಾಡದೇ ಇದ್ದರೆ ವಿಧಿಯಿಲ್ಲ. ಅದರಲ್ಲೂ ಈ ಕಾರ್ಪೊರೇಟ್ ಮೇಲೆ ಒತ್ತಡ ಡಬಲ್ ಆಗಿರುತ್ತದೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಒಬ್ಬ ವ್ಯಕ್ತಿ ರಾತ್ರಿ 12 ಗಂಟೆಯಾದ್ರು ಮನೆಗೆ ಹೋಗದೇ ಬೈಕ್ನಲ್ಲಿ ಲ್ಯಾಪ್ ಟಾಪ್ ಹಿಡಿದು ಕುಳಿತು ಆಫೀಸ್ ಕೆಲಸ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ವಿಡಿಯೋ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.
@ravi_bhojane ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನಗರದ ಹೆಚ್ಚಿನ ಜನರು ನಿದ್ರಿಸುತ್ತಿರುವ ಸಮಯದಲ್ಲಿ ಅಂದರೆ ತಡರಾತ್ರಿ 12:15 ಕ್ಕೆ ವ್ಯಕ್ತಿಯೊಬ್ಬ ಬೈಕ್ನಲ್ಲಿ ಲ್ಯಾಪ್ ಟಾಪ್ ತೆರೆದು ಕುಳಿತು ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ವ್ಯಕ್ತಿಯೊಬ್ಬ ಸೆರೆ ಹಿಡಿದಿದ್ದು, ಕೆಲಸದಲ್ಲಿ ಬ್ಯೂಸಿಯಾಗಿರುವ ವ್ಯಕ್ತಿಯನ್ನು ಮಾತನಾಡಿಸಿದ್ದಾರೆ. ಕೆಲಸ ಮಾಡುತ್ತಿರುವ ಬಗ್ಗೆ ವಿಚಾರಿಸಿದಾಗ ಲ್ಯಾಪ್ ಟಾಪ್ ಹಿಡಿದು ಕುಳಿತ ವ್ಯಕ್ತಿಯೂ ಏನು ಮಾತನಾಡದೇ ನಕ್ಕಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
ಇದನ್ನೂ ಓದಿ: ಕಾರ್ಪೋರೇಟ್ ಕೆಲಸ ತೊರೆದು ಕ್ಲೌಡ್ ಕಿಚನ್ ಶುರು ಮಾಡಿದ ಯುವ ಉದ್ಯಮಿ!
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಮಾಡಲಾಗಿದೆ. ಒಬ್ಬ ಬಳಕೆದಾರ, ಇದು ಕಾರ್ಪೊರೆಟ್ ಜಗತ್ತು ಎಂದು ಹೇಳಿದ್ದಾರೆ. ಇತರರು, ಅಣ್ಣ ಮನೆಗೆ ಹೋಗಿ ಮಲಗು. ಮತ್ತೊಬ್ಬರು, ಕಳೆದ ವಾರ ನನ್ನ ಪರಿಸ್ಥಿತಿ ಇದೆ ಎಂದು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ