Headlines

ಮಧ್ಯಪ್ರಾಚ್ಯ ಯುದ್ಧದಿಂದ ಕರಾವಳಿ ಜಿಲ್ಲೆಯಲ್ಲಿ ಮದುವೆಗಳೇ ಕ್ಯಾನ್ಸಲ್‌! ಮದುವೆ ನಿಶ್ಚಯ ಆದವರಿಗೆ ಆತಂಕ | Middle East Conflict Impacts Weddings In Coastal Karnataka Several Events Postponed Gdp

ಮಧ್ಯಪ್ರಾಚ್ಯ ಯುದ್ಧದಿಂದ ಕರಾವಳಿ ಜಿಲ್ಲೆಯಲ್ಲಿ ಮದುವೆಗಳೇ ಕ್ಯಾನ್ಸಲ್‌! ಮದುವೆ ನಿಶ್ಚಯ ಆದವರಿಗೆ ಆತಂಕ | Middle East Conflict Impacts Weddings In Coastal Karnataka Several Events Postponed Gdp



ಮಧ್ಯಪ್ರಾಚ್ಯ ಯುದ್ಧದಿಂದ ಕರಾವಳಿ ಜಿಲ್ಲೆಯಲ್ಲಿ ಮದುವೆಗಳೇ ಕ್ಯಾನ್ಸಲ್‌! ಮದುವೆ ನಿಶ್ಚಯ ಆದವರಿಗೆ ಆತಂಕ | Middle East Conflict Impacts Weddings In Coastal Karnataka Several Events Postponed Gdp

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ದಕ್ಷಿಣ ಕನ್ನಡದಲ್ಲಿ ನಡೆಯಬೇಕಿದ್ದ ಹಲವು ಮದುವೆಗಳು ಮುಂದೂಡಿಕೆಯಾಗಿವೆ. ವಿದೇಶದಲ್ಲಿರುವ ಕುಟುಂಬ ಸದಸ್ಯರಿಗೆ ಭಾರತಕ್ಕೆ ಬರಲು ಸಾಧ್ಯವಾಗದಿರುವುದು ಮತ್ತು ಆರ್ಥಿಕ ಅನಿಶ್ಚಿತತೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಬೆಳವಣಿಗೆಯು ಕ್ಯಾಟರಿಂಗ್, ಡೆಕೋರೇಷನ್ ಸೇರಿದಂತೆ ಹಲವು ಸ್ಥಳೀಯ ಉದ್ಯಮಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.

ವರದಿ: ಮೌನೇಶ ವಿಶ್ವಕರ್ಮ

ದಕ್ಷಿಣ ಕನ್ನಡ: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಉದ್ವಿಗ್ನ ಪರಿಸ್ಥಿತಿ ಮದುವೆ ಹಾಗೂ ಶುಭ ಸಮಾರಂಭಗಳ ಮೇಲೆ ಗಂಭೀರ ಪರಿಣಾಮ ಬೀರಿವೆ. ತುಳುನಾಡಿನ ಅನೇಕ ಕುಟುಂಬಗಳು ಮಧ್ಯಪ್ರಾಚ್ಯ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಸದಸ್ಯರ ಮೇಲೆ ಅವಲಂಬಿತವಾಗಿವೆ. ಯುದ್ಧದ ಪರಿಣಾಮವಾಗಿ ಮದುವೆಗಳು ಮುಂದೂಡುವುದು, ಸರಳೀಕರಣ ಮಾಡುವುದು ಅಥವಾ ಕೆಲವೊಮ್ಮೆ ರದ್ದಾಗುವ ಪರಿಸ್ಥಿತಿ ಎದುರಾಗುತ್ತಿದೆ.

ಮದುವೆಗಳು ಮುಂದೂಡಿಕೆ:

ಕಳೆದ‌ ಒಂದು ತಿಂಗಳ‌ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆಯಬೇಕಿದ್ದ ಹದಿನೈದಕ್ಕೂ ಅಧಿಕ ಮದುವೆಗಳು ಯುದ್ಧದ ಕಾರಣಕ್ಕೆ ಮುಂದೂಡಲ್ಪಟ್ಟಿದೆ. ಇದರಲ್ಲಿ ಹೆಚ್ಚಿನ ಮದುವೆಗಳು ಕ್ರೈಸ್ತ ಸಮುದಾಯಕ್ಕೆ ಸೇರಿದ್ದು ಎನ್ನುವುದು ಇಲ್ಲಿ ಉಲ್ಲೇಖನೀಯ.

ಮದುವೆಗಳು ಮುಂದೂಡಲು ಪ್ರಮುಖ ಕಾರಣ:

ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡುತ್ತಿರುವ ವರನಿಗೆ ಸಮಯಕ್ಕೆ ಸರಿಯಾಗಿ ಭಾರತಕ್ಕೆ ಬರಲಾಗದ ಪರಿಸ್ಥಿತಿ ಉಂಟಾಗಿದೆ. ವಿಮಾನ ಸೇವೆಗಳ ಅಸ್ತವ್ಯಸ್ತತೆ, ವೀಸಾ ಸಮಸ್ಯೆ ಮದುವೆಯನ್ನು ಮುಂದೂಡಲು ಕಾರಣವಾಗಿದೆ. ಮತ್ತೊಂದೆಡೆ ಕುಟುಂಬದ ಪ್ರಮುಖ ಸದಸ್ಯರು ವಿದೇಶದಲ್ಲಿದ್ದು, ಅವರು ಬರದೇ ಮದುವೆ ಮಾಡುವುದನ್ನು ಹಲವರು ಒಪ್ಪಿಕೊಳ್ಳುತ್ತಿಲ್ಲ. ವಿಮಾನ ಟಿಕೆಟ್ ದರಗಳ ಏರಿಕೆಯೂ ಸಾಮಾನ್ಯ ಕುಟುಂಬಗಳಿಗೆ ಇದು ದೊಡ್ಡ ಭಾರವಾಗಿ ಪರಿಣಮಿಸಿದೆ. ಮದುವೆಗಾಗಿ ಭಾರತಕ್ಕೆ ಬಂದರೆ, ಮರಳಿ ಹಿಂದಿರುಗಲು ಆಗುತ್ತದೆಯೇ? ಎಂಬ ಭಯ ವಿದೇಶದಲ್ಲಿರುವವರಲ್ಲೂ, ಅವರ ಕುಟುಂಬಗಳಲ್ಲೂ ಇದೆ. ಕೆಲವರು ರಜೆ ತೆಗೆದುಕೊಂಡು ಭಾರತಕ್ಕೆ ಬಂದರೆ, ಮತ್ತೆ ಹೋಗಲು ಸಾಧ್ಯವಾಗದೆ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಮದುವೆಗೆ ಬರುವುದನ್ನು ಬಿಟ್ಟು ಉದ್ಯೋಗವನ್ನು ಉಳಿಸಿಕೊಳ್ಳಲು ಆದ್ಯತೆ ಕೊಡುತ್ತಿದ್ದಾರೆ. ಕೆಲವೊಂದು ಕ್ಷೇತ್ರಗಳಲ್ಲಿ ವೇತನ ತಡವಾಗುವುದು ಅಥವಾ ಕಡಿಮೆಯಾಗುವುದು ಕಂಡುಬರುತ್ತಿದೆ. ಇದರಿಂದ ಮದುವೆ ಖರ್ಚು ನಿರ್ವಹಣೆ ಕಷ್ಟಕರವಾಗಿದೆ. ಈ ಎಲ್ಲ ಅನಿಶ್ಚಿತತೆ ಮದುವೆ ಸಹಿತ ಹುಟ್ಟುಹಬ್ಬ ಆಚರಣೆ, ವಿವಾಹ ವಾರ್ಷಿಕೋತ್ಸವದಂತಹ ಕಾರ್ಯಗಳಿಗೆ ತಡೆಯಾಗುತ್ತಿದೆ.

ಹಲವು ಉದ್ಯಮಗಳ ಮೇಲೆ ಪರಿಣಾಮ:

ಮದುವೆ ಎಂದರೆ ಒಂದು ದೊಡ್ಡ ಆರ್ಥಿಕ ಚಕ್ರ. ಆದರೆ ಮದುವೆಗಳು ಮುಂದೂಡುವುದು ಮತ್ತು ಸಣ್ಣಮಟ್ಟಕ್ಕೆ ಇಳಿಯುವುದರಿಂದ ಅನೇಕ ವಲಯಗಳಿಗೆ ಹೊಡೆತ ಬಿದ್ದಿದೆ. ಡೆಕೋರೇಷನ್‌ ಉದ್ಯಮ ಮಾಡುವವರಿಗೆ ಭಾರೀ ಅಲಂಕಾರ, ಥೀಮ್ ಸೆಟ್‌ಗಳು ಕಡಿಮೆಯಾಗುತ್ತಿವೆ. ಇದರಿಂದ ಡೆಕೋರೇಟರ್‌ಗಳಿಗೆ ಆದಾಯ ಕುಸಿತವಾಗಿದೆ. ಹೂವಿನ ಬಳಕೆ ಕಡಿಮೆಯಾಗುವುದರಿಂದ ಹೂವಿನ ವ್ಯಾಪಾರಿಗಳಿಗೆ ನಷ್ಟ. ಸಣ್ಣ ಕಾರ್ಯಕ್ರಮಗಳಲ್ಲಿ ಎಂಸಿ ಅಗತ್ಯವಿಲ್ಲವೆಂದು ಕೆಲವರು ನಿರ್ಧರಿಸುತ್ತಿರುವುದರಿಂದ ಅವಕಾಶಗಳು ಕಡಿಮೆಯಾಗಿವೆ. ಡಿಜೆ ಮತ್ತು ಸಂಗೀತ ತಂಡಗಳು ಸಂಗೀತ ಕಾರ್ಯಕ್ರಮಗಳನ್ನು ಕೈಬಿಡುವುದರಿಂದ ಕಲಾವಿದರಿಗೆ ಕೆಲಸದ ಕೊರತೆ. ಅಡುಗೆ ಅನಿಲದ‌ ಸಿಲಿಂಡರ್ ಗಳ‌ ಕೊರತೆ, ಬೆಲೆಏರಿಕೆ ಬಿಸಿಯ‌ ನಡುವೆ ಅತಿಥಿಗಳ ಸಂಖ್ಯೆ ಕಡಿಮೆಯಾಗುವುದರಿಂದ ಊಟದ ವ್ಯವಸ್ಥೆಯ ಪ್ರಮಾಣ ಕಡಿಮೆಯಾಗಿ, ಕ್ಯಾಟರಿಂಗ್‌ ಸೇವೆಗಳಿಗೂ ಹೊಡೆತ ಬಿದ್ದಿದೆ. ಫೋಟೋಗ್ರಫಿ, ವೀಡಿಯೋಗ್ರಫಿಯಲ್ಲಿಯೂ ಗ್ರಾಹಕರು, ದೊಡ್ಡ ಪ್ಯಾಕೇಜ್‌ಗಳ ಬದಲು ಸಣ್ಣ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಮೇಕಪ್‌, ಇವೆಂಟ್‌ ಪ್ಲ್ಯಾನರ್‌ಗಳು ಪೂರ್ಣ ಮದುವೆ ಪ್ಲ್ಯಾನಿಂಗ್‌ ಸೇವೆಗಳನ್ನು ಕೆಲವರು ಕೈಬಿಡುತ್ತಿದ್ದು, ಸರಳತೆಗೆ ಜೈ ಎನ್ನುವ ಅನಿವಾರ್ಯ ಸ್ಥಿತಿ ಎದುರಾಗಿದೆ.

ಏಪ್ರಿಲ್ ಮೇ ತಿಂಗಳು ಕ್ರೈಸ್ತ ಸಮುದಾಯದ ಅತೀ ಹೆಚ್ಚು ಮದುವೆ ಸಮಾರಂಭಗಳು ನಡೆಯುತ್ತವೆ. ಆದರೆ ಈ ಬಾರಿ ನನ್ನ ಆ್ಯಂಕರಿಂಗ್ ನಿಗದಿಯಾಗಿದ್ದ 8 ಮದುವೆ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿದೆ. ಇದೆಲ್ಲವೂ ಯುದ್ಧ ತಂದಿರುವ ಸಂಕಷ್ಟ

ವಿಜೆ ಡಿಕ್ಸನ್ ಖ್ಯಾತ ನಿರೂಪಕರು



Source link

Leave a Reply

Your email address will not be published. Required fields are marked *