
ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರ (ಸನ್ಯಾ ಮಲ್ಹೋತ್ರಾ) ಈಗ ವೈಯಕ್ತಿಕ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಅವರು ಸಿತಾರ್ ವಾದಕ ರಿಷಬ್ ರಿಖಿರಾಮ್ ಶರ್ಮಾ ಜೊತೆ ಕಳೆದು ಒಂದು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಈಗ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ. ಇದರಿಂದ ಇಬ್ಬರೂ ಬೇರೆ ಆಗಿದ್ದಾರೆ ಎಂಬ ವದಂತಿ ದಟ್ಟವಾಗಿದೆ.
ಸಾನ್ಯಾ ಮಲ್ಹೋತ್ರ ಅವರು ‘ದಂಗಲ್’ ಸಿನಿಮಾ ಮೂಲಕ ಫೇಮಸ್ ಆದರು. ಅವರ ನಟನೆಗೆ ಭಾರೀ ಮೆಚ್ಚುಗೆ ಬಂತು. ಆ ಬಳಿಕ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. ಹೀಗಿರುವಾಗಲೇ ಸಾನ್ಯಾ ಅವರ ವಿಚ್ಛೇದನದ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸಾನ್ಯಾ ಹಾಗೂ ರಿಷಬ್ ಅವರು ತಮ್ಮ ರಿಲೇಶನ್ ಶಿಪ್ ಬಗ್ಗೆ ಎಲ್ಲಿಯೂ ಓಪನ್ ಆಗಿ ಮಾತನಾಡಿಲ್ಲ. ಒಂದು ವರ್ಷಕ್ಕೂ ಅಧಿಕ ಕಾಲ ಇವರು ಸುತ್ತಾಡಿದರು. ಆ ಬಳಿಕ ಇವರು ಬೇರೆ ಆಗುವ ನಿರ್ಧಾರ ಕೈಗೊಂಡಿದ್ದಾರೆ. ಈ ವಿಷಯವನ್ನು ಕೂಡ ಇವರು ಎಲ್ಲಿಯೂ ರಿವೀಲ್ ಮಾಡಿಲ್ಲ. ಇವರ ಬ್ರೇಕಪ್‌ಗೆ ಕಾರಣವೂ ರಿವೀಲ್ ಆಗಿಲ್ಲ.
ಇದನ್ನೂ ಓದಿ: sbech ಪಕ್ಕ ದುಬಾರಿ ಮನೆ ಖರೀದಿಸಿದ ‘ದಂಗಲ್’ ಸಿನಿಮಾ ನಟಿ ಸಾನ್ಯಾ ಮಲ್ಹೋತ್ರ
2024 ಡಿಸೆಂಬರ್ ಒಂದರ ಈವೆಂಟ್ ಅಲ್ಲಿ ರಿಷಬ್ ಹಾಗೂ ಸಾನ್ಯಾ ಒಟ್ಟಾಗಿ ಕಾಣಿಸಿಕೊಂಡರು. ಈ ವೇಳೆ ಇಬ್ಬರ ಮಧ್ಯೆ ಪರಿಚಯ ಬೆಳೆಯಿತು. 2025ರ ಆರಂಭದಲ್ಲಿ ಸಾನ್ಯಾ ಹಾಗೂ ರಿಷಬ್ ಒಟ್ಟಿಗೆ ಇರುವ ಫೋಟೋಗಳು ವೈರಲ್ ಆದವು. ಅಭಿಮಾನಿಯೋರ್ವ ರಿಷಬ್ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಆ ಸಂದರ್ಭದಲ್ಲಿ ಸಾನ್ಯಾ ಕೂಡ ಅಲ್ಲಿಯೇ ಇಬ್ಬರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಆ ಬಳಿಕ ಕೆಲವು ಈವೆಂಟ್‌ಗಳಲ್ಲಿ ಇವರು ಒಟ್ಟಿಗೆ ಕಾಣಿಸಿಕೊಂಡರೂ, ಪ್ರತ್ಯೇಕವಾಗಿ ತೆರಳುವ ಮೂಲಕ ವದಂತಿ ಮತ್ತಷ್ಟು ಹರಡದಂತೆ ನೋಡಿಕೊಂಡಿದ್ದಾರೆ.
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
ಸಿನಿಮಾ ವಿಷಯಕ್ಕೆ ಬರೋದಾದರೆ, ಸಾನ್ಯಾ ಅವರು 2025ರ ‘ಸನ್ ಸ್ಕಾರಿ ಕಿ ತುಳಸಿ ಕುಮಾರಿ’ ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿದ್ದರು. ‘ಟೋಸ್ಟರ್’ ಹೆಸರಿನ ಸಿನಿಮಾ ಮಾಡುತ್ತಿರುವ ರಾಜ್ ಕುಮಾರ್ ರಾವ್ ಇದಕ್ಕೆ ಹೀರೋ. ಈ ಚಿತ್ರ ಏಪ್ರಿಲ್ 15 ರಂದು ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಆಗಲಿದೆ. ರಿಷಬ್ ರಿಖಿರಾಮ್ ಅವರು ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.