
ಕ್ರಿಕೆಟರ್ ವಿರಾಟ್ ಕೊಹ್ಲಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಅವರು ಏನೇ ಮಾಡಿದರೂ ಆ ಬಗ್ಗೆ ಚರ್ಚೆಗಳು ನಡೆಯುತ್ತವೆ. ಇತ್ತೀಚೆಗೆ ಅವರು ‘ಧುರಂಧರ 2’ ಚಿತ್ರವನ್ನು ನೋಡಿ ಹಾಡಿ ಹೊಗಳಿದ್ದರು. ಆದಿತ್ಯ ಧಾರ್ ನಿರ್ದೇಶನ, ರಣವೀರ್ ಸಿಂಗ್ ನಟನೆ ಸೇರಿ ಎಲ್ಲದಕ್ಕೂ ಮೆಚ್ಚುಗೆ ಸೂಚಿಸಿದ್ದರು. ಸಿನಿಮಾ ಅದ್ಭುತ ಎಂದಿದ್ದರು. ಇದಾದ ಬಳಿಕ ಸಿನಿಮಾ ಹೌಸ್ ಫುಲ್ ಕಾಣುತ್ತಿದೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾದರೆ, ಸಿನಿಮಾದ ಕಲೆಕ್ಷನ್ ಹೆಚ್ಚಿದೆಯೇ? ಆ ಬಗ್ಗೆ ಇಲ್ಲಿದೆ ವಿವರ.
‘ಧುರಂಧರ 2’ ಸಿನಿಮಾ ವಿಶ್ವ ಮಟ್ಟದಲ್ಲಿ 1652 ಕೋಟಿ ರೂಪಾಯಿ ಗಳಿಸಿದೆ. ಭಾರತದಲ್ಲಿ ಗ್ರಾಸ್ ಕಲೆಕ್ಷನ್ 1653 ರೂಪಾಯಿ ಚಿತ್ರ. ಈ ನೆಟ್ ಕಲೆಕ್ಷನ್ 1,041 ಕೋಟಿ ರೂಪಾಯಿ ಚಿತ್ರದ. ಈವರೆಗೆ ಸಿನಿಮಾ ಸುಮಾರು 4 ಲಕ್ಷ ಶೋಗಳನ್ನು ಓಡಿಸಿದೆ. ಈ ಸಿನಿಮಾ ಕಳೆದ ಭಾನುವಾರ 30 ಕೋಟಿ ರೂಪಾಯಿಗಳಿಗೆ ಮಾಡಿತ್ತು.
ವಿರಾಟ್ ಕೊಹ್ಲಿಯವರ ಒಂದು ಕಥೆಯ ನಂತರ ಧುರಂಧರ 2 ಚಿತ್ರಮಂದಿರಗಳಲ್ಲಿ ಹುಚ್ಚು ದೃಶ್ಯಗಳು!
ನಿಜವಾಗಿಯೂ ಏಷ್ಯಾದ ದೊಡ್ಡ ಸೂಪರ್ಸ್ಟಾರ್
pic.twitter.com/WnWuefx7Ht
— ಸುಪರ್ವಿರಾಟ್ (@Mostlykohli) ಏಪ್ರಿಲ್ 7, 2026
ಕೊಹ್ಲಿ ಸಿನಿಮಾ ಬಗ್ಗೆ ಪೋಸ್ಟ್ ಮಾಡಿದ್ದು ಸೋಮವಾರ ಸಂಜೆ. ಸೋಮವಾರ ಗಳಿಗೆ 12 ಕೋಟಿ ರೂಪಾಯಿ ಇತ್ತು. ಮಂಗಳವಾರ ಚಿತ್ರದ ಕಲೆಕ್ಷನ್ ತಗ್ಗಿಲ್ಲ. ಬದಲಾಗಿ 12 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಬುಧವಾರ ಸಿನಿಮಾದ ಕಲೆಕ್ಷನ್ 9.46 ಕೋಟಿ ರೂಪಾಯಿಗೆ ಇಳಿದಿದೆ. ಇದನ್ನು ಹೋಲಿಕೆ ಮಾಡಿದರೆ ಮಂಗಳವಾರ ಸ್ವಲ್ಪ ಮಟ್ಟಿಗೆ ಅಭಿಮಾನಿಗಳು ಸಿನಿಮಾ ನೋಡಬಹುದು ಎನ್ನಬಹುದು. ಆದರೆ, ಗಳಿಕೆಯಲ್ಲಿ ಗಮನಾರ್ಹ ಏರಿಕೆ ಏನೂ ಆಗಿಲ್ಲ.
ಇದನ್ನೂ ಓದಿ: ‘ಧುರಂಧರ 2’ ಕಥೆ ನಂದು ಎಂದ ವ್ಯಕ್ತಿಯ ಮೈಚಳಿ ಬಿಡಿಸಲು ಮುಂದಾದ ಆದಿತ್ಯ ಧಾರ್
ಸದ್ಯ ವೈರಲ್ ಆಗಿರೋ ವಿಡಿಯೋದಲ್ಲಿ ಕೊಹ್ಲಿ ಅಭಿಮಾನಿಗಳು ಥಿಯೇಟರ್ ನಲ್ಲಿ ಸಿನಿಮಾ ನೋಡಲು ನೂಕು ನುಗ್ಗಲು ಮಾಡುತ್ತಿರುವ ರೀತಿಯಲ್ಲಿ ಇದೆ. ಆದರೆ, ಅಸಲಿಗೆ ಆ ರೀತಿ ಇಲ್ಲ ಎಂದು ಹೇಳಲಾಗದು. ಕೆಲವು ವಿಡಿಯೋವನ್ನು ಈಗ ವೈರಲ್ ಮಾಡಲಾಗಿದೆ ಎಂದು ಹಳೆಯದಾಗಿದೆ. ವೈರಲ್ ಆಗಿರೋ ವಿಡಿಯೋದ ಸತ್ಯಾ ಸತ್ಯತೆ ಇನ್ನೂ ಬಹಿರಂಗವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.