ಟಿ20 ಕ್ರಿಕೆಟಲ್ಲಿ 600 ಸಿಕ್ಸರ್‌ ಬಾರಿಸಿದ ಜೋಸ್‌ ಬಟ್ಲರ್‌! ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 5 ಬ್ಯಾಟರ್‌ಗಳಿವರು

ಟಿ20 ಕ್ರಿಕೆಟಲ್ಲಿ 600 ಸಿಕ್ಸರ್‌ ಬಾರಿಸಿದ ಜೋಸ್‌ ಬಟ್ಲರ್‌! ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 5 ಬ್ಯಾಟರ್‌ಗಳಿವರು

ಟಿ20 ಕ್ರಿಕೆಟಲ್ಲಿ 600 ಸಿಕ್ಸರ್‌ ಬಾರಿಸಿದ ಜೋಸ್‌ ಬಟ್ಲರ್‌! ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 5 ಬ್ಯಾಟರ್‌ಗಳಿವರು

ನವದೆಹಲಿ: ಇಂಗ್ಲೆಂಡ್‌ನ ಜೋಸ್‌ ಬಟ್ಲರ್‌ ಟಿ20 ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ ಸಿಡಿಸಿದ್ದು, ಈ ಸಾಧನೆ ಮಾಡಿದ ವಿಶ್ವದ 5ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಈ ಮೊದಲು 600 ಸಿಕ್ಸರ್‌ ಸಾಧನೆ ಮಾಡಿದ ನಾಲ್ವರು ಕೂಡಾ ವಿಂಡೀಸ್‌ ಕ್ರಿಕೆಟಿಗರು.

ಐಪಿಎಲ್‌ನಲ್ಲಿ ಗುಜರಾತ್‌ ಪರ ಆಡುತ್ತಿರುವ ಬಟ್ಲರ್‌, ಬುಧವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 5 ಸಿಕ್ಸರ್‌ ಬಾರಿಸಿದರು. ಇದರೊಂದಿಗೆ ತಮ್ಮ ಸಿಕ್ಸರ್‌ ಗಳಿಕೆಯನ್ನು 600ಕ್ಕೆ ಹೆಚ್ಚಿಸಿದರು. ಅವರು 496 ಪಂದ್ಯಗಳನ್ನಾಡಿದ್ದಾರೆ. 463 ಪಂದ್ಯಗಳಲ್ಲಿ 1056 ಸಿಕ್ಸರ್‌ ಸಿಡಿಸಿರುವ ಕ್ರಿಸ್‌ ಗೇಲ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ 463 ಟಿ20 ಪಂದ್ಯಗಳನ್ನಾಡಿ 1056 ಸಿಕ್ಸರ್ ಸಿಡಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಈ ದಾಖಲೆ ಬ್ರೇಕ್ ಆಗೋದು ಸದ್ಯಕ್ಕಂತೂ ಅನುಮಾನ.

ಕೆರಿಬಿಯನ್ ದೈತ್ಯ ಪ್ರತಿಭೆ ಕೀರನ್ ಪೊಲ್ಲಾರ್ಡ್‌ 735 ಟಿ20 ಪಂದ್ಯಗಳನ್ನಾಡಿ 982 ಸಿಕ್ಸರ್ ಸಿಡಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ವೆಸ್ಟ್‌ ಇಂಡೀಸ್ ದಿಗ್ಗಜ ಆಲ್ರೌಂಡರ್ ಆಂಡ್ರೆ ರಸೆಲ್ ಕೇವಲ 590 ಟಿ20 ಪಂದ್ಯಗಳನ್ನಾಡಿ 784 ಸಿಕ್ಸರ್ ಸಿಡಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

ಪಾಕೆಟ್ ಡೈನಮೋ ಖ್ಯಾತಿಯ ಬಿಗ್ ಹಿಟ್ಟರ್ ನಿಕೋಲಸ್ ಪೂರನ್ ಇದುವರೆಗೂ 444 ಟಿ20 ಪಂದ್ಯಗಳನ್ನಾಡಿ 712 ಸಿಕ್ಸರ್ ಸಿಡಿಸುವ ಮೂಲಕ ಸದ್ಯ ಐದನೇ ಸ್ಥಾನದಲ್ಲಿದ್ದಾರೆ. ಇನ್ನು ಕೆಲವು ವರ್ಷ ಪೂರನ್ ಇದೇ ಫಾರ್ಮ್ ಮುಂದುವರೆಸಿದರೆ ಅಗ್ರಸ್ಥಾನಕ್ಕೇರಿದರೂ ಅಚ್ಚರಿಯಿಲ್ಲ.

ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 5 ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ವೆಸ್ಟ್‌ ಇಂಡೀಸ್‌ಯೇತರ ಬ್ಯಾಟರ್ ಎಂದರೆ ಅದು ಇಂಗ್ಲೆಂಡ್‌ನ ಜೋಸ್ ಬಟ್ಲರ್. ಬಟ್ಲರ್ 495 ಪಂದ್ಯಗಳನ್ನಾಡಿ 600 ಸಿಕ್ಸರ್ ಸಿಡಿಸಿದ್ದಾರೆ.

Source link

Leave a Reply

Your email address will not be published. Required fields are marked *