Headlines

ಪುದುಚೇರಿ: ವೋಟಿಂಗ್‌ ಮಷಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ಬೈಕ್‌ನಲ್ಲಿ ಬಂದು ವೋಟ್‌ ಮಾಡಿದ ಸಿಎಂ ರಂಗಸ್ವಾಮಿ! | Puducherry Election Vvpat Smoke Karaikal Cm Rangasamy Bike Voting San

ಪುದುಚೇರಿ: ವೋಟಿಂಗ್‌ ಮಷಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ಬೈಕ್‌ನಲ್ಲಿ ಬಂದು ವೋಟ್‌ ಮಾಡಿದ ಸಿಎಂ ರಂಗಸ್ವಾಮಿ! | Puducherry Election Vvpat Smoke Karaikal Cm Rangasamy Bike Voting San



ಪುದುಚೇರಿ: ವೋಟಿಂಗ್‌ ಮಷಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ಬೈಕ್‌ನಲ್ಲಿ ಬಂದು ವೋಟ್‌ ಮಾಡಿದ ಸಿಎಂ ರಂಗಸ್ವಾಮಿ! | Puducherry Election Vvpat Smoke Karaikal Cm Rangasamy Bike Voting San

ಪುದುಚೇರಿ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ಕರೈಕಲ್‌ನ ಮತಗಟ್ಟೆಯೊಂದರಲ್ಲಿ ವಿವಿಪ್ಯಾಟ್ ಯಂತ್ರದಿಂದ ಹೊಗೆ ಬಂದ ಕಾರಣ ಮತದಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಮುಖ್ಯಮಂತ್ರಿ ಎನ್. ರಂಗಸ್ವಾಮಿ ದ್ವಿಚಕ್ರ ವಾಹನದಲ್ಲಿ ಬಂದು ಮತ ಚಲಾಯಿಸಿ, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಪುದುಚೇರಿ (ಏ.9): ಪುದುಚೇರಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಕರೈಕಲ್‌ನಲ್ಲಿ ಆತಂಕಕಾರಿ ಘಟನೆಯೊಂದು ಸಂಭವಿಸಿದೆ. ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಹೊಗೆ ಬಂದ ಹಿನ್ನೆಲೆಯಲ್ಲಿ ಮತದಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕರೈಕಲ್‌ನ ಕೊತ್ತುಕುಲಂ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದ್ದಾಗ, ಮತದಾನ ದೃಢೀಕರಣ ಯಂತ್ರದಿಂದ (VVPAT) ಏಕಾಏಕಿ ಹೊಗೆ ಬರಲಾರಂಭಿಸಿತು. ಇದು ಮತದಾರರು ಮತ್ತು ಸಿಬ್ಬಂದಿಯಲ್ಲಿ ತೀವ್ರ ಆತಂಕ ಮೂಡಿಸಿತು. ಬ್ಯಾಟರಿ ಅತಿಯಾಗಿ ಬಿಸಿ ಆಗಿದ್ದರಿಂದ ಈ ಅವಘಡ ಸಂಭವಿಸಿರಬಹುದು ಎಂದು ವರದಿಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಮತಗಟ್ಟೆಯಲ್ಲಿ ಮತದಾನವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಬೈಕ್‌ನಲ್ಲಿ ಬಂದು ಹಕ್ಕು ಚಲಾಯಿಸಿದ ಮುಖ್ಯಮಂತ್ರಿ

ಪುದುಚೇರಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅವರು ಎಂದಿನಂತೆ ತಮ್ಮ ಸರಳತೆಯನ್ನು ಮೆರೆದಿದ್ದಾರೆ. ಯಾವುದೇ ಆಡಂಬರವಿಲ್ಲದೆ ತಮ್ಮ ದ್ವಿಚಕ್ರ ವಾಹನದಲ್ಲೇ ಮತಗಟ್ಟೆಗೆ ಆಗಮಿಸಿದ ಅವರು ಸಾಮಾನ್ಯರಂತೆ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಮತದಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ರಂಗಸ್ವಾಮಿ, “ನಾನು ಸ್ಪರ್ಧಿಸಿರುವ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ನನಗೆ ಸ್ಥಾನಗಳ ಸಂಖ್ಯೆಗಿಂತ ಸರ್ಕಾರ ರಚಿಸುವುದು ಮುಖ್ಯ. ನಾವು ಯಾವಾಗಲೂ ಜನರಿಗಾಗಿ ಇದ್ದೇವೆ ಮತ್ತು ಜನರೊಂದಿಗೇ ಇರುತ್ತೇವೆ” ಎಂದು ವಿಶ್ವಾಸದಿಂದ ಹೇಳಿದ್ದಾರೆ.

ಪುದುಚೇರಿಯಲ್ಲಿ ಚತುಷ್ಕೋನ ಸ್ಪರ್ಧೆ

ಒಟ್ಟು 30 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪುದುಚೇರಿಯಲ್ಲಿ ಈ ಬಾರಿ ಭಾರಿ ಪೈಪೋಟಿ ಏರ್ಪಟ್ಟಿದೆ. ಒಟ್ಟು 294 ಅಭ್ಯರ್ಥಿಗಳು ಕಣದಲ್ಲಿದ್ದು, ನಾಲ್ಕು ಪ್ರಮುಖ ಬಣಗಳ ನಡುವೆ ಹಣಾಹಣಿ ನಡೆಯುತ್ತಿದೆ. ಆಡಳಿತಾರೂಢ ಎನ್ಆರ್ ಕಾಂಗ್ರೆಸ್ – ಬಿಜೆಪಿ ಮೈತ್ರಿಕೂಟ, ಕಾಂಗ್ರೆಸ್ – ಡಿಎಂಕೆ ಮೈತ್ರಿಕೂಟ, ನಾಮ್ ತಮಿಳರ್ ಕಚ್ಚಿ (NTK), ಟಿ.ವಿ.ಕೆ (TVK) – ನೇಯಂ ಮಕ್ಕಳ ಕಳಗಂ ಮೈತ್ರಿಕೂಟ ನಡುವೆ ಸ್ಪರ್ಧೆ ಇದೆ. ಈ ಪ್ರಬಲ ಪೈಪೋಟಿಯಿಂದಾಗಿ ಪುದುಚೇರಿ ರಾಜಕೀಯ ಕಣ ಕಳೆಗಟ್ಟಿದ್ದು, ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬ ಕುತೂಹಲ ಮೂಡಿಸಿದೆ.



Source link

Leave a Reply

Your email address will not be published. Required fields are marked *