Laundry tips Kannada: ಕೇವಲ ಎರಡು ಬಾರಿ ಧರಿಸಿದರೂ ಸಾಕು, ಬೆಳ್ಳಗಿದ್ದ ಶರ್ಟ್ ಅಥವಾ ಕುರ್ತಾಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ನಿಮ್ಮ ಮನೆಯ ಕಿಚನ್‌ನಲ್ಲಿರುವ ಮೂರೇ ಪದಾರ್ಥಗಳನ್ನು ಬಳಸಿದರೆ ಸಾಕು, ಬಿಳಿ ಬಟ್ಟೆಗಳು ಮತ್ತೆ ಹೊಚ್ಚ ಹೊಸತರಂತೆ ಹೊಳೆಯುತ್ತವೆ.

ನಮಗೆಲ್ಲರಿಗೂ ಬೆಳ್ಳಗೆ ಪಳಪಳ ಹೊಳೆಯುವ ಬಟ್ಟೆಗಳನ್ನು ಧರಿಸುವುದೆಂದರೆ ಇಷ್ಟ. ಆದರೆ ಕೆಲವೇ ದಿನಗಳಲ್ಲಿ ಬಿಳಿ ಶರ್ಟ್ ಅಥವಾ ಕುರ್ತಾಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇಂತಹ ಹಠಮಾರಿ ಹಳದಿ ಕಲೆಗಳನ್ನು ಮತ್ತು ಗುರುತುಗಳನ್ನು ಹೋಗಲಾಡಿಸಲು ಅಜ್ಜಿ ಕಾಲದ ಕೆಲವು ಅದ್ಭುತ ಮನೆಮದ್ದುಗಳು ಇಲ್ಲಿವೆ.

ಕೇವಲ ಡಿಟರ್ಜೆಂಟ್ ಪೌಡರ್‌ನಿಂದ ಬಿಳಿ ಬಟ್ಟೆಯ ಹಳದಿ ಬಣ್ಣ ಹೋಗುವುದಿಲ್ಲ. ಅದಕ್ಕಾಗಿ ಈ ಹ್ಯಾಕ್ ಬಳಸಿ..*ಒಂದು ಬಕೆಟ್‌ನಲ್ಲಿ ಬಿಸಿ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ನಿಮ್ಮ ರೆಗ್ಯುಲರ್ ಡಿಟರ್ಜೆಂಟ್ ಪುಡಿ, ಒಂದು ಚಮಚ ಅಡುಗೆ ಸೋಡಾ ಮತ್ತು ಒಂದು ನಿಂಬೆ ಹಣ್ಣಿನ ರಸವನ್ನು ಬೆರೆಸಿ.*ಈ ಮಿಶ್ರಣದಲ್ಲಿ ಬಟ್ಟೆಗಳನ್ನು 1-2 ಗಂಟೆ ಅಥವಾ ಇಡೀ ರಾತ್ರಿ ನೆನೆಸಿಡಿ. ನಂತರ ಮಾಮೂಲಿ ತೊಳೆಯಿರಿ. ಇದರಿಂದ ಬಟ್ಟೆಯ ಹಳದಿ ಬಣ್ಣ ಮಾಯವಾಗಿ, ಬಟ್ಟೆಗಳು ಮತ್ತೆ ಬೆಳ್ಳಗಾಗುತ್ತವೆ.

ಒಮ್ಮೊಮ್ಮೆ ಒಟ್ಟಿಗೆ ಬಟ್ಟೆ ಒಗೆಯುವಾಗ ಬೇರೆ ಬಣ್ಣದ ಬಟ್ಟೆಯ ಬಣ್ಣ ಬಿಳಿ ಬಟ್ಟೆಗೆ ಅಂಟಿಕೊಳ್ಳುತ್ತದೆ. ಇದನ್ನು ತೆಗೆಯುವುದು ಸಹ ಸುಲಭ..*ಉಗುರು ಬೆಚ್ಚಗಿನ ನೀರಿಗೆ ಒಂದು ಪ್ಯಾಕೆಟ್ ಈನೋ (Eno), ಒಂದು ನಿಂಬೆ ಹಣ್ಣಿನ ರಸ ಮತ್ತು ಸ್ವಲ್ಪ ಡಿಟರ್ಜೆಂಟ್ ಸೇರಿಸಿ.*ಇದರಲ್ಲಿ ಬಣ್ಣ ಅಂಟಿದ ಬಿಳಿ ಬಟ್ಟೆಯನ್ನು ಒಂದೂವರೆ ಗಂಟೆ ನೆನೆಸಿಡಿ. ನಂತರ ಕೈಯಿಂದ ಲಘುವಾಗಿ ಹಿಂಡಿದರೆ ಅಂಟಿಕೊಂಡ ಬಣ್ಣ ತಾನಾಗಿಯೇ ಹೊರಬರುತ್ತದೆ.

ಕಾಲರ್ ಅಥವಾ ತೋಳುಗಳ ಮೇಲೆ ಅಂಟಿಕೊಂಡಿರುವ ಜಿಡ್ಡು ಮತ್ತು ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಈ ಪೇಸ್ಟ್ ತಯಾರಿಸಿ..*ಒಂದು ಬಟ್ಟಲಿನಲ್ಲಿ ಸ್ವಲ್ಪ ಅಡುಗೆ ಸೋಡಾ, ನಿಂಬೆ ರಸ, ಬಿಳಿ ವಿನೆಗರ್ ಮತ್ತು ಸ್ವಲ್ಪ ಡಿಟರ್ಜೆಂಟ್ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. *ಈ ಪೇಸ್ಟ್ ಅನ್ನು ಕಲೆ ಇರುವ ಜಾಗಕ್ಕೆ ಹಚ್ಚಿ 1-2 ಗಂಟೆ ಬಿಡಿ. ನಂತರ ಬ್ರಷ್‌ನಿಂದ ಲಘುವಾಗಿ ಉಜ್ಜಿದರೆ ಕಲೆಗಳು ಪೂರ್ತಿಯಾಗಿ ಮಾಯವಾಗುತ್ತವೆ.

ಬಿಳಿ ಬಟ್ಟೆಗಳನ್ನು ತೊಳೆದ ನಂತರ ನೇರ ಸೂರ್ಯನ ಬಿಸಿಲಿನಲ್ಲಿ ಒಣಗಿಸುವುದರಿಂದ ಅವುಗಳ ಬಿಳುಪು ಹಾಗೆಯೇ ಉಳಿಯುತ್ತದೆ.

Source link
ಉಜ್ಜೋದು ಬೇಡ, ಇವೆರೆಡನ್ನು ಡಿಟರ್ಜೆಂಟ್ ಪೌಡರ್ ಜೊತೆ ಬೆರೆಸಿ ಹಿಂಡಿ ಹಠಮಾರಿ ಕೊಳೆ ಬಿಟ್ಟು ಹೋಗುತ್ತೆ!