
ಬಾಗಲಕೋಟೆ, ಏಪ್ರಿಲ್ 09: ಉಪ ಚುನಾವಣೆ ಗೆಲ್ಲಲು ಕಾಂಗ್ರೆಸಿಗರು ಕೋಟ್ಯಾಂತರ ರೂಪಾಯಿ ಹಣವನ್ನು ಹಂಚಿಕೆ ಮಾಡಿದ್ದಾರೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ದೂರಿದ್ದ ಬೆನ್ನಲ್ಲೇ ಮತದಾರರಿಗೆ ಕಾಂಗ್ರೆಸಿಗರು 500 ರೂಪಾಯಿ ಹಂಚಿರುವ ಆರೋಪ ಕೇಳಿಬಂದಿದೆ. ನವನಗರದ ವಾಂಬೆ ಕಾಲೋನಿಯಲ್ಲಿ ಕಾರಲ್ಲಿ ಬಂದವರು ಮತದಾರರಿಗೆ ಹಣ ನೀಡಿ ಆಮಿಷವೊಡ್ಡಿದ್ದು, ಕಾಂಗ್ರೆಸಿಗರು ಕೇವಲ ಐದುನೂರು ಕೊಟ್ಟರು ಎಂದು ಮಹಿಳೆಯೋರ್ವರು ಅಲವತ್ತುಕೊಂಡ ಪ್ರಸಂಗ ನಡೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.