
ಜನವರಿ, ಏಪ್ರಿಲ್ 9: ಎಐ ಬೆಳವಣಿಗೆ ಮತ್ತು ಅಳವಡಿಕೆಯ ಫಲ ಪೂರ್ಣವಾಗಿ ಸಿಗಬೇಕಾದರೆ ಬಹಳ ದಿನಗಳು ಬೇಕು. ಆದರೆ, ಈಗಲೇ ಹಲವು ಟೆಕ್ ಕಂಪನಿಗಳು ಲೇ ಆಫ್ಗೆ ತೊಡಗಿವೆ. ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಸಂಸ್ಥೆಗಳು ಈ ವರ್ಷದ ಮೊದಲ ಕ್ವಾರ್ಟರ್ನಲ್ಲಿ (ಜನವರಿ-ಮಾರ್ಚ್) 80,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆ. ನ್ಯಾಷನಲ್ ಎಫ್ಎಕ್ಸ್ (RationalFX) ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಜನವರಿ 1 ರಿಂದ ಏಪ್ರಿಲ್ 1 ರವರೆಗೆ 78,557 ಮಂದಿಯನ್ನು ಲೇ ಆಫ್ (ಲೇ ಆಫ್ಸ್) ಮಾಡಲಾಗಿದೆ. ಇದು ಅಧಿಕೃತವಾಗಿ ಲೇ ಆಫ್ ಆಗಿರುವಂಥದ್ದು. ಹೆಚ್ಚಿನ ಪರಿಣಾಮ ಬಿದ್ದಿರುವುದು ಅಮೆರಿಕದ ಮೇಲೆ.
ಕುತೂಹಲದ ಸಂಗತಿ ಎಂದರೆ ಈ ಹತ್ತಿರಹತ್ತಿರ 80,000 ಲೇಆಫ್ ಪ್ರಕರಣಗಳಲ್ಲಿ ಅರ್ಧದಷ್ಟು ಉದ್ಯೋಗಗಳು ಎಐ ಮತ್ತು ಆಟೋಮೆಶನ್ ಅಳವಡಿಕೆಯ ಪರಿಣಾಮದಿಂದ ಆಗಿರುವಂಥದ್ದು. ಆದರೆ, ಉದ್ಯೋಗ ಕ್ಷೇತ್ರದಲ್ಲಿನ ನಿಜವಾದ ಪರಿಣಾಮ ಇನ್ನೂ ಹೆಚ್ಚಿನ ಮಟ್ಟದಲ್ಲಿರುತ್ತದೆ. ಈಗ ಲೇ ಆಫ್ ಆಗಿರುವುದು ಒಂದು ಸಣ್ಣ ಸ್ಯಾಂಪಲ್ ಮಾತ್ರ. ಮುಂಬರುವ ದಿನಗಳಲ್ಲಿ ಉದ್ಯೋಗ ದೊಡ್ಡ ಸಂಚಲನವೇ ಸೃಷ್ಟಿಯಾಗಬಹುದು ಎಂದು ಪರಿಣಿತರು ಎಚ್ಚರಿಸುತ್ತಿದ್ದಾರೆ.
ಇದನ್ನೂ ಓದಿ: ಧೋಬಿ ಎಲ್ಲಿ ಡೈಮಂಡ್ ಡೀಲ್ಸ್ ಎಲ್ಲಿ? ಬಟ್ಟೆ ಒಗೆಯುವವನಿಗೆ 598 ಕೋಟಿ ರೂ ಟ್ಯಾಕ್ಸ್ ನೋಟೀಸ್ ಬಂದಿದ್ದು ಯಾಕೆ?
ಎಐ ನೆಪದಲ್ಲಿ ಲೇ ಆಫ್ ಮಾಡಲಾಗುತ್ತಿದೆಯಾ?
ಲೇ ಆಫ್ ಟ್ರೆಂಡ್ ಕೋವಿಡ್ ಕಾಲಘಟ್ಟದಿಂದ ಹೆಚ್ಚಾಗುತ್ತಿದೆ. ಟೆಕ್ ಕಂಪನಿಗಳು ಉದ್ಯೋಗಿಗಳ ಸಂಖ್ಯೆ ಇಳಿಸುತ್ತಿದೆ. ಈಗ ಎಐ ನೆಪವೊಡ್ಡಿ ಲೇ ಆಫ್ ಮಾಡಲಾಗುತ್ತಿದೆಯಾ? ಕಾಗ್ನೈಸೆಂಟ್ನಲ್ಲಿ ಮುಖ್ಯ ಎಐ ಆಫೀಸರ್ ಆಗಿರುವ ಬಾಬಕ್ ಹಾಡ್ಜಾಟ್ ಅವರು ಹೀಗೊಂದು ಅನುಮಾನಪಟ್ಟಿದ್ದಾರೆ.
ಈಗಷ್ಟೇ ಅಳವಡಿಕೆ ಆಗುತ್ತಿದೆ. ಅದರಿಂದ ಉತ್ಪಾದನೆ ಶುರುವಾಗಲು ಹಲವು ತಿಂಗಳುಗಳೇ ಬೇಕು. ಕಂಪನಿಗಳು ಈ ಐ ಮತ್ತು ಆಟೋಮೇಶನ್ ನೆಪವೊಡ್ಡಿ ಈಗಲೇ ಉದ್ಯೋಗಿಗಳನ್ನು ತೆಗೆಯುತ್ತಿದ್ದಾರೆ ಎಂದು ಅವರು ಶಂಕಿಸಿದ್ದಾರೆ.
ಕಾಗ್ನೈಸೆಂಟ್ ಕಂಪನಿಯ ಶೇ. 70ರಷ್ಟು ಉದ್ಯೋಗಿಗಳು ಭಾರತದಲ್ಲಿದ್ದಾರೆ. ಬೆಮಗಳೂರಿನಲ್ಲಿ ಇದರ ಎಐ ಲ್ಯಾಬೊರೇಟರಿಗಳನ್ನು ತೆರೆಯಲಾಗಿದೆ. ಇಲ್ಲಿ ಐ ಏಜೆಂಟ್ಗಳು ಸೇರಿದಂತೆ ಹೊಸ ಅಡ್ವಾನ್ಸ್ಡ್ ಟೂಲ್ಗಳನ್ನು ತಯಾರಿಸುವ ಕಾರ್ಯವಾಗುತ್ತಿದೆ. ವಿವಿಧ ಉದ್ದಿಮೆಗಳಿಗೆ ಉತ್ಪನ್ನಶೀಲತೆ ಹೆಚ್ಚಿಸಲು ಈ ಎಐ ಪರಿಕರಗಳು ನೆರವಾಗಲಿವೆ.
ಇದನ್ನೂ ಓದಿ: ಬೇರೆಯವರ ಪ್ಯಾನ್ ಕಾರ್ಡ್ ದಾಖಲೆ ಬಳಸಿ ಸಾಲ ಸೂರೆಗೊಂಡ ವಂಚಕರು; ನಿಮ್ಮ ಪ್ಯಾನ್ ದುರ್ಬಳಕೆ ಗುರುತಿಸುವುದು ಹೇಗೆ?
ಆಟೋಮೇಶನ್ನಿಂದ ಉದ್ಯೋಗ ನಾಶವಾಗುವುದಿಲ್ಲ, ಬದಲಾಗಿ ಕೆಲಸದ ಬದಲಾವಣೆ ಆಗಬಹುದು. ಇದು ಕಾಗ್ನೈಸೆಂಟ್ ನ ಚೀಫ್ ಎಐ ಆಫೀಸರ್ ಹೇಳುವ ಮಾತು. ಎಐ ಅಳವಡಿಕೆಯಲ್ಲಿ ಸಕ್ರಿಯವಾಗಿ ತೊಡಗಿರುವ ಕಂಪನಿಯು ತನ್ನ ಉದ್ಯೋಗಿಗಳನ್ನು ಲೇ ಆಫ್ ಮಾಡುವ ಆಲೋಚನೆಯಲ್ಲಿ ಕಂಡುಬಂದಿಲ್ಲ. ಉದ್ಯೋಗಿಗಳಿಗೆ ಅಗತ್ಯ ಎಐ ಕೌಶಲ್ಯಗಳನ್ನು ನೀಡಿ ಅವರಿಗೆ ಹೆಚ್ಚಿನ ಸಂಕೀರ್ಣ ಕೆಲಸಗಳನ್ನು ಬಳಸಿಕೊಳ್ಳುವುದು ಕಂಪನಿಯ ಗುರಿ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ