Headlines

ಭಾರತಕ್ಕೆ ಪೆಟ್ರೋಲ್, ಡೀಸಲ್ ಸಮಸ್ಯೆ ವಕ್ಕರಿಸಲಿಲ್ಲ ಯಾಕೆ? ಸರ್ಕಾರದ ಈ ಕೆಲ ಕ್ರಮಗಳೇ ಕಾರಣವಾ?

ಭಾರತಕ್ಕೆ ಪೆಟ್ರೋಲ್, ಡೀಸಲ್ ಸಮಸ್ಯೆ ವಕ್ಕರಿಸಲಿಲ್ಲ ಯಾಕೆ? ಸರ್ಕಾರದ ಈ ಕೆಲ ಕ್ರಮಗಳೇ ಕಾರಣವಾ?


ಭಾರತಕ್ಕೆ ಪೆಟ್ರೋಲ್, ಡೀಸಲ್ ಸಮಸ್ಯೆ ವಕ್ಕರಿಸಲಿಲ್ಲ ಯಾಕೆ? ಸರ್ಕಾರದ ಈ ಕೆಲ ಕ್ರಮಗಳೇ ಕಾರಣವಾ?

ಜನವರಿ, ಏಪ್ರಿಲ್ 9: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವು ಜಾಗತಿಕವಾಗಿ ದೊಡ್ಡ ಬಿಕ್ಕಟ್ಟನ್ನೇ ಸೃಷ್ಟಿಸಿದೆ. ಶೇ. 20ರಷ್ಟು ತೈಲ ಸರಬರಾಜು ಆಗುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದ ಅನೇಕ ದೇಶಗಳಿಗೆ ಪೆಟ್ರೋಲ್, ಡೀಸಲ್ ಪೂರೈಕೆ ಕಡಿಮೆಯಾಗಿದೆ. ಅದರಲ್ಲೂ ಏಷ್ಯನ್ ರಾಷ್ಟ್ರಗಳು ತತ್ತರಿಸಿವೆ. ಇಂತಹ ಕೆಲ ದೇಶಗಳು ಈ ಬಿಕ್ಕಟ್ಟನ್ನು (ಒಯಿಲ್ ಬಿಕ್ಕಟ್ಟು) ತಕ್ಕಮಟ್ಟಿಗೆ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಭಾರತ ಈ ಬಿಕ್ಕಟ್ಟನ್ನು ನಿಭಾಯಿಸಲು ಹೇಗೆ ಸಾಧ್ಯವಾಯಿತು? ಇಲ್ಲಿದೆ ಮಾಹಿತಿ.

ಏಳು ವರ್ಷಗಳ ನಂತರ ಇರಾನ್ ನಿಂದ ತೈಲ ಆಮದು

ಇರಾನ್ ಜೊತೆ ಭಾರತಕ್ಕೆ ಮೊದಲಿನಿಂದಲೂ ಉತ್ತಮ ಸಂಬಂಧವಿದೆ. ಆದರೆ, ಅಮೆರಿಕದ ನಿಷೇಧ ಕ್ರಮದ ಕಾರಣ 2019ರಿಂದ ಇರಾನ್ ನಿಂದ ಭಾರತ ತೈಲ ಪಡೆದಿಲ್ಲ. ಈಗ ಯುದ್ಧ ಶುರುವಾದ ಬಳಿಕ ಅಮೆರಿಕವು ತೈಲ ನಿಷೇಧವನ್ನು ತಾತ್ಕಾಲಿಕವಾಗಿ ಹಿಂಪಡೆದ ಇರಾನ್ ನಿಂದ ಸಾಕಷ್ಟು ತೈಲ ಪೂರೈಕೆ ಪಡೆಯಿತು.

ತೈಲ ಪೂರೈಕೆ ಜಾಲ ವಿಸ್ತಾರ

ಭಾರತ ತೈಲ ಪೂರೈಕೆ ವಿಚಾರದಲ್ಲಿ ನಾಲ್ಕೈದು ದೇಶಗಳನ್ನು ನಂಬಿ ಕುಳಿತುಕೊಳ್ಳಲಿಲ್ಲ. ಇರಾನ್, ರಷ್ಯಾ, ಗಲ್ಫ್ ರಾಷ್ಟ್ರಗಳು, ಆಫ್ರಿಕನ್ ದೇಶಗಳು, ಅಮೆರಿಕನ್ ದೇಶಗಳು ಹೀಗೆ ಬೇರೆ ಬೇರೆ ಮೂಲಗಳಿಂದ ಭಾರತವು ಕಚ್ಚಾ ತೈಲ ಪೂರೈಕೆಯನ್ನು ಪಡೆಯುತ್ತಿದೆ. ಹೀಗಾಗಿ, ಭಾರತಕ್ಕೆ ಪೆಟ್ರೋಲ್, ಡೀಸಲ್ ಬಿಕ್ಕಟ್ಟು ಸೃಷ್ಟಿಯಾಗಲಿಲ್ಲ.

ಇದನ್ನೂ ಓದಿ: ಮೂರು ತಿಂಗಳಿನಲ್ಲಿ 80,000 ಟೆಕ್ಕಿಗಳ ಲೇ ಆಫ್; ಮುಂದೈತೆ ಇನ್ನೂ ದೊಡ್ಡ ಬಲಿ

ಪೆಟ್ರೋಲಿಯಂ ಸಂಗ್ರಹದಲ್ಲಿ ಒಟ್ಟು

ಭಾರತವು ಕಚ್ಛಾ ತೈಲವನ್ನು ಆಮದು ಮಾಡಿಕೊಂಡು ಅದನ್ನು ಸಂಸ್ಕರಿಸಿ, ತನಗೆ ಬೇಕಾದ ಪೆಟ್ರೋಲ್, ಡೀಸಲ್ ಇತ್ಯಾದಿ ಪೆಟ್ರೋಲಿಯಂ ಉತ್ಪಾದನೆಯಾಗುತ್ತದೆ. ಇವನ್ನು ಬೇರೆ ದೇಶಗಳಿಗೆ ರಫ್ತುಮಾಡುತ್ತದೆ. ಹಾಗೆಯೇ, ಅಂಡರ್ ಗ್ರೌಂಡ್ ಸಂಗ್ರಹಗಾರದಲ್ಲಿ ತೈಲ ಮತ್ತು ಪೆಟ್ರೋಲಿಯಂ ಸಂಗ್ರಹಿಸುತ್ತದೆ. ಈ ರೀತಿಯ ಪೆಟ್ರೋಲಿಯಂ ಸಂಗ್ರಹವು ಭಾರತಕ್ಕೆ ಹಲವು ವಾರಗಳಲ್ಲಿ ಆಗುವಷ್ಟು ಇದೆ. ತೈಲ ಪೂರೈಕೆ ತೀರಾ ನಿಂತುಬಿಟ್ಟರೂ ಒಂದಷ್ಟು ದಿನಗಳ ಬಳಕೆಗೆ ಸಾಕಾಗುವಷ್ಟು ಪೆಟ್ರೋಲ್ ಸಂಗ್ರಹವಿದೆ.

ನೌಕಾದಳ ಬಳಸಿ ಹಡಗುಗಳಿಗೆ ಭದ್ರತೆ

ಇರಾನ್ ಯುದ್ಧದ ವೇಳೆ ಹಾರ್ಮುಜ್ ಜಲಸಂಧಿ ಬಂದ್ ಆಗುತ್ತಿದೆ. ಇರಾನ್ ಈ ಜಲಮಾರ್ಗವನ್ನು ತಡೆದು ನಿಲ್ಲಿಸಿತ್ತು. ಭಾರತದ ಪ್ರಯತ್ನಗಳ ಫಲವಾಗಿ ಕೆಲ ಭಾರತೀಯ ಗ್ಯಾಸ್ ಹಡಗುಗಳಿಗೆ ಹೊರಹೋಗಲು ಅವಕಾಶ ನೀಡಲಾಯಿತು. ಭಾರತದ ನೌಕಾದಳದ ಹಡಗುಗಳ ಬೆಂಗಾವಲಿನಲ್ಲಿ ಈ ಎಲ್ಪಿಜಿ ಟ್ಯಾಂಕರ್ಗಳು ಭಾರತವನ್ನು ತಲುಪಿದವು.

ಪರ್ಯಾಯ ಇಂಧನಕ್ಕೆ ಪ್ರಯತ್ನ

ಎಲ್ಪಿಜಿ ಬಿಕ್ಕಟ್ಟನ್ನು ಕಡಿಮೆ ಮಾಡಲು ಭಾರತ ನ್ಯಾಚುರಲ್ ಗ್ಯಾಸ್ ಬಳಕೆಗಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ದೇಶೀಯವಾಗಿ ನೈಸರ್ಗಿಕ ಅನಿಲ ಉತ್ಪಾದನೆ ಹೆಚ್ಚಿಸಿ, ಪಿಎನ್‌ಜಿ ಪೂರೈಕೆ ಮಾಡಲಾಗುತ್ತಿದೆ. ಬೇರೆ ಬೇರೆ ದೇಶಗಳಿಂದ ಎಲ್‌ಎನ್‌ಜಿ ಪೂರೈಕೆಯನ್ನು ಪಡೆದು ಅದನ್ನು ಪಿಎನ್‌ಜಿಯಾಗಿ ಸರಬರಾಜು ಮಾಡುತ್ತಿದೆ.

ಇದನ್ನೂ ಓದಿ: ಧೋಬಿ ಎಲ್ಲಿ ಡೈಮಂಡ್ ಡೀಲ್ಸ್ ಎಲ್ಲಿ? ಬಟ್ಟೆ ಒಗೆಯುವವನಿಗೆ 598 ಕೋಟಿ ರೂ ಟ್ಯಾಕ್ಸ್ ನೋಟೀಸ್ ಬಂದಿದ್ದು ಯಾಕೆ?

ಬೆಲೆ ಕಡಿಮೆ ಇದ್ದಾಗ ಹೆಚ್ಚಿನ ಖರೀದಿ…

ಅಮೆರಿಕ ಇರಾನ್ ಮಧ್ಯೆ ಕದನ ವಿರಾಮ ಏರ್ಪಟ್ಟಾಗ ತೈಲ ಬೆಲೆ ನಿನ್ನೆ ದಿಢೀರನೇ ಕುಸಿದಿದೆ. ಈ ಸಂದರ್ಭದಲ್ಲಿ ಭಾರತ ಹೆಚ್ಚಿನ ಮೊತ್ತದ ತೈಲವನ್ನು ಖರೀದಿಸಿದೆ. ಇದು ಮುಂದೆ ಸಹಾಯಕ್ಕೆ ಬರುವ ನಿರೀಕ್ಷೆ ಇದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *