‘ಏನಾಗುತ್ತಿದೆ?’: ಕಣ್ಣೀರು ಹಾಕಿದ ನೀಲಿ ಚಿತ್ರತಾರೆ ಮಿಯಾ ಖಲೀಫಾ

‘ಏನಾಗುತ್ತಿದೆ?’: ಕಣ್ಣೀರು ಹಾಕಿದ ನೀಲಿ ಚಿತ್ರತಾರೆ ಮಿಯಾ ಖಲೀಫಾ


'ಏನಾಗುತ್ತಿದೆ?': ಕಣ್ಣೀರು ಹಾಕಿದ ನೀಲಿ ಚಿತ್ರತಾರೆ ಮಿಯಾ ಖಲೀಫಾ

ಮಿಯಾ ಖಲೀಫಾ (ಮಿಯಾ ಖಲೀಫಾ), ವಿಶ್ವದ ಬಲು ಜನಪ್ರಿಯ ನೀಲಿ ಚಿತ್ರತಾರೆಯರಲ್ಲಿ ಒಬ್ಬರು. ಬಹು ಬೇಗನೇ ನಿವೃತ್ತಿ ಪಡೆದರಾದರೂ ಅವರ ಜನಪ್ರಿಯತೆ ತಗ್ಗಿಲ್ಲ. ನೀಲಿ ಚಿತ್ರಗಳಲ್ಲಿ ನಟಿಸುವುದು ಬಿಟ್ಟ ಬಳಿಕ ಮಿಯಾ ಖಲೀಫಾ, ಇನ್ಸ್ಟಾಗ್ರಾಮ್ ಇನ್ ಫ್ಲಾಯುಯೆನ್ಸರ್ ಆಗಿ, ವೆಬ್ ಕ್ಯಾಮ್ ಮಾಡೆಲ್ ಹಾಗೂ ಸ್ಪೋರ್ಟ್ ಕಮೆಂಟೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ವೆಬ್ ಕ್ಯಾಮ್ ಮಾಡೆಲಿಂಗ್ ಮೂಲಕ ದೊಡ್ಡ ಗಳಿಕೆಯನ್ನೇ ಮಾಡುತ್ತಿರುವ ಮಿಯಾ ಖಲೀಫಾ, ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಕಣ್ಣೀರು ಹಾಕಿದ್ದಾರೆ.

ಮಿಯಾ ಖಲೀಫಾ, ನೆಲೆಸಿರುವುದು ಅಮೆರಿಕದಲ್ಲಿ ಆದರೆ ಅವರು ಮೂಲತಃ ಲೆಬನಾನ್ ನವರು. ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ಹಲವು ದಿನಗಳಿಂದ ನಡೆಯುತ್ತಿದ್ದ ಯುದ್ಧಕ್ಕೆ ಇದೀಗ ವಿರಾಮ ಬಿದ್ದಿದೆ. ಆದರೆ ಈ ಕದನ ವಿರಾಮದ ಬಳಿಕ ಇಸ್ರೇಲ್, ಲೆಬನಾನ್ ಮೇಲೆ ಭಾರಿ ಪ್ರಮಾಣದ ಬಾಂಬ್ ದಾಳಿ ಮಾಡಿದ್ದು, 250ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಇದನ್ನು ನಟಿ ಮಿಯಾ ಖಲೀಫಾ ಖಂಡಿಸಿದ್ದು, ತಮ್ಮ ಮಾತೃಭೂಮಿ ಮೇಲೆ ನಡೆದ ದಾಳಿಯಿಂದ ತೀವ್ರಗೊಂಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅಳುತ್ತಲೇ ಮಾತನಾಡುತ್ತಿರುವ ಮಿಯಾ ಖಲೀಫಾ, ‘ಇದು ಬಹಳ ನೋವಿನ ದಿನ. ನಾವು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿರುವುದನ್ನು ಇಷ್ಟು ನೋಡಿಯೇ ಇಲ್ಲ. ನರಮೇಧವನ್ನೇ ನಡೆಸಲಾಗುತ್ತಿದೆ. ಕಳೆದೊಂದು ಕಣ್ಣಲ್ಲಿ ಇಂಥಹ ನರಮೇಧ ಯಾರೂ ನೋಡಿಲ್ಲ. ಕೇವಲ 10 ನಿಮಿಷದಲ್ಲಿ 160 ವಾಯುದಾಳಿಗಳನ್ನು ಲೆಬನಾನ್ ಮೇಲೆ ಮಾಡಲಾಗಿದೆ. ಸ್ಕೂಲು, ಆಸ್ಪತ್ರೆ, ಸಾರ್ವಜನಿಕರು ವಾಸಿಸುವ ಪ್ರದೇಶಗಳು, ಸ್ಮಶಾನಗಳನ್ನು ಗುರಿಯಾಗಿಟ್ಟುಕೊಂಡು ಈ ದಾಳಿಯನ್ನು ಇಸ್ರೇಲ್ ನಡೆಸಿದೆ, ಅದೂ ಕದನ ವಿರಾಮದ ಅವಧಿಯಲ್ಲಿ’ ಮಿಯಾ ಖಲೀಫಾ.

ಇದನ್ನೂ ಓದಿ:ಇಸ್ರೇಲ್ ದಾಳಿಗೆ ಲೆಬನಾನ್ ನಲ್ಲಿ 300 ಮಂದಿ ಬಲಿ

ಮುಂದುವರೆದು ಮಾತನಾಡಿ, ‘ನನ್ನ ತೆರಿಗೆ ಹಣವನ್ನು ನನ್ನ ಮಾತೃಭೂಮಿಯ ಧ್ವಂಸ ಮಾಡಲು ಬಳಸಲಾಗುತ್ತಿದೆ. ಇದಕ್ಕೆ ನಾನು ಹೇಳಬೇಕು ಅರ್ಥವಾಗುತ್ತಿಲ್ಲ. ನನಗೆ ಏನು ಹೇಳಲು ಸಹ ತೋಚುತ್ತಿಲ್ಲ. ನನಗೆ ಪದಗಳೇ ಹೊಳೆಯುತ್ತಿಲ್ಲ. ಇಷ್ಟು ದಿನ ನನಗೆ ಸರಿ ಎನಿಸುವ ಬೇರೆಯವರ ಅಭಿಪ್ರಾಯಗಳನ್ನು ನಾನು ಹಂಚಿಕೊಂಡಿದ್ದೇನೆ. ಆದರೆ ಈಗ ನಾನೇ ಮಾತನಾಡುತ್ತಿದ್ದೇನೆ’ ನಟಿ.

‘ಏನಾಗುತ್ತಿದೆ? ನಾವು ಮಂಗಳ ಗ್ರಹಕ್ಕೆ ಜನರನ್ನು ಕಳಿಸಿ ಜೀವ ಇರಬಹುದೇನೋ ಎಂದು ಹುಡುಕಬಹುದು, ಆದರೆ ಇಲ್ಲಿ ಭೂಮಿಯ ಮೇಲೆ ಇರುವ ವ್ಯಕ್ತಿಯನ್ನು ಕೊಲ್ಲಲಾಗುತ್ತಿದೆ. ಇದು ಅನಾಗರೀಕತೆ. ಇದೇ ರೀತಿಯ ದೌರ್ಜನ್ಯಕ್ಕೆ ತುತ್ತಾದ ದೇಶವನ್ನು ನಾವು ನೋಡಿದ್ದೇವೆ, ಈಗ ಮತ್ತೊಂದು ದೇಶದ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಆದರೆ ಇದು ನಿಲ್ಲುವುದು ಯಾವಾಗ? ಎಂದು ಮಿಯಾ ಖಲೀಫಾ ಪ್ರಶ್ನೆ ಮಾಡಿದ್ದಾರೆ. ಮಿಯಾ ಖಲೀಫಾ ಅಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *