MNC scandal ಮದ್ವೆ ಭರವಸೆ ನೀಡಿ 7 ಮಹಿಳಾ ಉದ್ಯೋಗಿಗಳ ಬಳಸಿಕೊಂಡ ಮ್ಯಾನೇಜರ್, MNC ಕಂಪನಿ ಕಾಮಕಾಂಡ | Scandal Hits Nashik Mnc Manager Held For Exploiting 7 Female Employees

MNC scandal ಮದ್ವೆ ಭರವಸೆ ನೀಡಿ 7 ಮಹಿಳಾ ಉದ್ಯೋಗಿಗಳ ಬಳಸಿಕೊಂಡ ಮ್ಯಾನೇಜರ್, MNC ಕಂಪನಿ ಕಾಮಕಾಂಡ | Scandal Hits Nashik Mnc Manager Held For Exploiting 7 Female Employees



MNC scandal ಮದ್ವೆ ಭರವಸೆ ನೀಡಿ 7 ಮಹಿಳಾ ಉದ್ಯೋಗಿಗಳ ಬಳಸಿಕೊಂಡ ಮ್ಯಾನೇಜರ್, MNC ಕಂಪನಿ ಕಾಮಕಾಂಡ | Scandal Hits Nashik Mnc Manager Held For Exploiting 7 Female Employees

ಮದ್ವೆ ಭರವಸೆ ನೀಡಿ 7 ಮಹಿಳಾ ಉದ್ಯೋಗಿಗಳ ಬಳಸಿಕೊಂಡ ಮ್ಯಾನೇಜರ್, MNC ಕಂಪನಿ ಕಾಮಕಾಂಡ, ಪ್ರತಿಷ್ಠಿತ ಕಂಪನಿಯಲ್ಲಿನ 7 ಮಹಿಳಾ ಉದ್ಯೋಗಿಗಳು ಹಾಗೂ ಒರ್ವ ಪುರುಷ ಉದ್ಯೋಗಿ ದೂರು ನೀಡಿದ್ದು ಕೋಲಾಹಲ ಸೃಷ್ಟಿಯಾಗಿದೆ.

ನಾಸಿಕ್ (ಏ.09) ಪ್ರತಿಷ್ಠಿತಿ ಐಟಿ (ಬಿಪಿಒ) ಕಂಪನಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಮ್ಯಾನೇಜರ್ ತನ್ನ ಕೆಳಗಿನ 7 ಮಹಿಳಾ ಉದ್ಯೋಗಿಗಳಿಗೆ ಮದುವೆ ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಕಚೇರಿಯಲ್ಲಿ ಪ್ರಮೋಶನ್ ಹಾಗೂ ಮದುವೆ ಆಫರ್ ನೀಡಿ 7 ಉದ್ಯೋಗಿಗಳ ಮೇಲೆ ಅತ್ಯಾ**ರ ನಡೆಸಿರುವುದು ಬೆಳಕಿಗೆ ಬಂದಿದೆ. ಕಂಪನಿಯ 7 ಮಹಿಳಾ ಉದ್ಯೋಗಿ ಹಾಗೂ ಓರ್ವ ಪುರುಷ ಉದ್ಯೋಗಿ ನೀಡಿದ ದೂರು ಇದೀಗ ಕೋಲಾಹಲ ಸೃಷ್ಟಿಸಿದ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದೆ.

ಏನಿದು ಘಟನೆ?

ಮಾರ್ಚ್ 26 ರಂದು ನಾಸಿಕ್‌ನ ದೇವಲಾಯಿ ಪೊಲೀಸ್ ಠಾಣೆಯಲ್ಲಿ ಎಂಎನ್‌ಸಿ ಕಂಪನಿಯ ಮಹಿಳಾ ಉದ್ಯೋಗಿ ದೂರು ನೀಡಿದ್ದರು. ದೂರಿನಲ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಪ್ರಮುಖವಾಗಿ ಕಂಪನಿಯ ತನ್ನ ಟೀಮ್ ಲೀಡರ್ ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಪ್ರೀತಿ ಹೆಸರಿನಲ್ಲಿ ಮೋಸ ಮಾಡಿದ್ದಾರೆ. ಲೈಂಗಿಕ ಬಳಸಿಕೊಂಡು ಇದೀಗ ತನ್ನಂತೆ ಬೇರೆ ಯುವತಿಯರಿಗೂ ಮೋಸ ಮಾಡುತ್ತಿದ್ದಾನೆ ಎಂದು ದೂರು ನೀಡಿದ್ದರು. ಮಾರ್ಚ್ 26 ರಂದು ಈ ದೂರು ದಾಖಲಾಗಿತ್ತು. ಮಹಿಳಾ ಉದ್ಯೋಗಿ ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ರಹಸ್ಯವಾಗಿ ತನಿಖೆ ಆರಂಭಿಸಿದ್ದರು.

ಕಂಪನಿಯ ಹಲವು ಉದ್ಯೋಗಿಗಳಿಂದ ಮಾಹಿತಿ ಪಡೆಯಲು ಆರಂಭಿಸಿದ್ದರು. ಈ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. ಇದೇ ರೀತಿ 6 ಮಹಿಳೆಯರು ಟೀಮ್ ಲೀಡರ್‌ನಿಂದ ಮೋಸ ಹೋಗಿರುವುದಾಗಿ ಬಯಲಾಗಿದೆ. ಹೀಗಾಗಿ ಈ 6 ಮಹಿಳಾ ಉದ್ಯೋಗಿಗಳು ನಾಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಟೀಮ್ ಮ್ಯಾನೇಜರ್ ವಿರುದ್ಧ ಹಲವು ಗಂಭೀರ ಆರೋಪಗಳು ಕೇಳಿಬಂದ ಬೆನ್ನಲ್ಲೇ ಪೊಲೀಸರು ತನಿಖೆ ನಡೆಸಿ ಕೆಲ ಪೂರಕ ಸಾಕ್ಷಿ ಆಧಾರಗಳನ್ನು ಕಲೆ ಹಾಕಿದ್ದಾರೆ.

ನಮಾಜ್ ಮಾಡಲು ಒತ್ತಾಯ

ಇದೇ ಟೀಂ ಮ್ಯಾನೇಜರ್ ಪುರುಷ ಉದ್ಯೋಗಿಯೊಬ್ಬನಿಗೆ ಕಚೇರಿಯಲ್ಲಿ ನಮಾಜ್ ಮಾಡಲು ಒತ್ತಾಯಿಸಿದ್ದಾರೆ ಆರೋಪವೂ ಕೇಳಿಬಂದಿದೆ. ಈ ಕುರಿತು ಪುರುಷ ಉದ್ಯೋಗಿ ದೂರು ನೀಡಿದ್ದಾರೆ. ತನ್ನ ಧಾರ್ಮಿಕ ನಂಬಿಕೆಕೆಗಳಿಗೆ ವಿರುದ್ಧವಾಗಿ ಉದ್ಯೋಗದ ಹೆಸರಿನಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ. ಈ ದೂರಿನ ಬೆನ್ನಲ್ಲೇ ಪೊಲೀಸರಿಗೆ ಲವ್ ಜಿಹಾದ್ ವಾಸನೆಯೂ ಬಡಿಯತೊಡಗಿದೆ.

ಆರು ಮಂದಿ ಅರೆಸ್ಟ್

ಒಟ್ಟು 8 ಮಂದಿ ದೂರು ನೀಡಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ಕಂಪನಿಯ 6 ಟೀಮ್ ಲೀಡರ್‌ಗಳನ್ನು ಅರೆಸ್ಟ್ ಮಾಡಿದ್ದಾರೆ. ಗಂಭೀರ ಆರೋಪಗಳು ಕೇಳಿಬಂದಿದ್ದು ಮಾತ್ರವಲ್ಲ ಇದಕ್ಕೆ ಪೂರಕ ಸಾಕ್ಷ್ಯಗಳು ಲಭ್ಯವಾಗಿದೆ. ಇದೀಗ ಪ್ರತಿಷ್ಠಿತ ಎಂಎನ್‌ಸಿ ಕಂಪನಿಯಲ್ಲಿನ ಮಹಿಳಾ ಉದ್ಯೋಗಿಗಳ ವೈಯುಕ್ತಿಕ ಜೀವನವೂ ತೀವ್ರ ಸಂಕಷ್ಟಕ್ಕೆ ತಳ್ಳಿದೆ.

ಕಂಪನಿ ಹೆಚ್ಆರ್ ವಿರುದ್ಧ ಪೊಲೀಸರು ಕ್ರಮ

ಮಹಿಳಾ ತನ್ನ ಟೀಮ್ ಲೀಡರ್ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಕುರಿತು ಕಂಪನಿಯ ಹೆಚ್ಆರ್‌ಗೆ ಇಮೇಲ್ ಮೂಲಕ ದೂರು ನೀಡಿದ್ದರು. ಆದರೆ ಎಂಎನ್‌ಸಿ ಕಂಪನಿಯಲ್ಲಿ ಸಣ್ಣ ಸಣ್ಣ ವಿಚಾರಗಳನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ನಾವು ಕಾರ್ಪೋರೇಟ್ ಕಂಪನಿಯಲ್ಲಿದ್ದೇವೆ ಎಂದು ಆರೋಪಿ ವಿರುದ್ದ ಕ್ರಮ ಅಥವಾ ಆಂತರಿಕ ತನಿಖೆ ನಡೆಸುವ ಬದಲು ಸಂತ್ರಸ್ತೆಯನ್ನೇ ಸುಮ್ಮನಿರಲು ಹೇಳಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಹೆಚ್ಆರ್ ಕೂಡ ಶಾಮಿಲಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ಹೆಚ್ಆರ್ ಹೆಸರನ್ನು ಆರೋಪಿ ಪಟ್ಟಿಯಲ್ಲಿ ದಾಖಲಿಸಿದ್ದಾರೆ.



Source link

Leave a Reply

Your email address will not be published. Required fields are marked *