ಪಿಯುಸಿಯಲ್ಲಿ ಇಂದೂ ಕಾಲೇಜಿನ ರೈತನ ಮಗಳ ಸಾಧನೆಗೆ ರಾಜ್ಯವೇ ಬೆರಗು! ಅವಳಿ ಜವಳಿ ತಮ್ಮನಿಗೂ ಶೇ. 94 ಅಂಕ! | Twin Success Story Karnataka Puc 2026 Farmer Daughter Sangeeta Topper In Puc Arts Brother Scored Ninety Plus Gdp

ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ರೈತನ ಮಗಳು ಸಂಗೀತಾ ಶೇಖರಗೌಡ ಪೊಲೀಸ್ ಪಾಟೀಲ್, 2026ನೇ ಸಾಲಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 99.66% ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರ ಅವಳಿ ಸಹೋದರ ಕೂಡ 94% ಅಂಕ ಗಳಿಸಿದ್ದು, ಮುಂದೆ ಎಲ್‌ಎಲ್‌ಬಿ ಓದುವ ಕನಸು ಕಂಡಿರುವ ಸಂಗೀತಾ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಿದೆ.

ಕುಕನೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಸಂಗೀತಾ ಶೇಖರಗೌಡ ಪೊಲೀಸ್ ಪಾಟೀಲ್ ಅವರು ಅಪೂರ್ವ ಸಾಧನೆ ಮಾಡಿದ್ದಾರೆ. 99.66 ಶೇಕಡಾ ಅಂಕಗಳನ್ನು ಗಳಿಸಿರುವ ಸಂಗೀತಾ ರಾಜ್ಯದ ಗಮನ ಸೆಳೆದಿದ್ದಾರೆ.

ರೈತನ ಮಗಳ ಸಾಧನೆ

ಸಂಗೀತಾ ಅವರು ಕೊಟ್ಟೂರಿನ ಇಂದೂ ಪಿಯು ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ್ದು, ತಮ್ಮ ಪರಿಶ್ರಮ, ಶಿಸ್ತು ಮತ್ತು ದೃಢನಿಶ್ಚಯದ ಮೂಲಕ ಈ ಸಾಧನೆ ಸಾಧಿಸಿದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಅವರು ರಾಜ್ಯ ಮಟ್ಟದಲ್ಲಿ ಮೆರೆಯುವ ಮೂಲಕ ತಮ್ಮ ಊರು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಸಂಗೀತಾ ಅವರು ರೈತ ಶೇಖರಗೌಡ ಪೊಲೀಸ್ ಪಾಟೀಲ್ ಹಾಗೂ ಅಂಗನವಾಡಿ ಶಿಕ್ಷಕಿ ಶ್ವೇತಾ ಪೊಲೀಸ್ ಪಾಟೀಲ್ ಅವರ ಪುತ್ರಿಯಾಗಿದ್ದು, ತಂದೆ-ತಾಯಿಗೆ ಮೂರನೇ ಮಗಳು. ಕುಟುಂಬದ ಬೆಂಬಲ ಮತ್ತು ಪ್ರೋತ್ಸಾಹವೇ ತನ್ನ ಯಶಸ್ಸಿನ ಹಿಂದೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.

ಅವಳಿ-ಜವಳಿ, ತಮ್ಮನಿಗೂ ಶೇ. 94 ಅಂಕ

ವಿಶೇಷವೆಂದರೆ, ಸಂಗೀತಾ ಅವರ ಜೊತೆಗೆ ಅವರ ತಮ್ಮ ಕೂಡ 94 ಶೇಕಡಾ ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ತೋರಿದ್ದಾರೆ. ಇವರಿಬ್ಬರು ಅವಳಿ ಜವಳಿಯಾಗಿದ್ದು, ತಮ್ಮ ಸಹ ಈ ವರ್ಷ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಇಬ್ಬರು ಮಕ್ಕಳ ಸಾಧನೆಯಿಂದ ಕುಟುಂಬದಲ್ಲಿ ಹರ್ಷದ ವಾತಾವರಣ ಮನೆಮಾಡಿದೆ.

ಮುಂದೆ ಕಾನೂನು ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಸಂಗೀತಾ ಅವರು ಎಲ್‌ಎಲ್‌ಬಿ ಓದುವ ಕನಸು ಕಂಡಿದ್ದಾರೆ. ಅವರ ಕನಸಿಗೆ ತಂದೆ ಶೇಖರಗೌಡ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, “ಮಗಳ ಓದಿಗಾಗಿ ಬೇಕಾದರೆ ನನ್ನ ಐದು ಎಕರೆ ಜಮೀನನ್ನೂ ಮಾರಲು ಸಿದ್ಧ” ಎಂದು ಹೇಳಿರುವುದು ಅವರ ಶಿಕ್ಷಣದ ಮೇಲಿನ ಬದ್ಧತೆಯನ್ನು ತೋರಿಸುತ್ತದೆ.

ಒಟ್ಟಿನಲ್ಲಿ, ಗ್ರಾಮೀಣ ಪರಿಸರದಲ್ಲಿ ಬೆಳೆದ ಸಂಗೀತಾ ತಮ್ಮ ಸಂಕಲ್ಪ, ಪರಿಶ್ರಮ ಮತ್ತು ಕುಟುಂಬದ ಬೆಂಬಲದೊಂದಿಗೆ ರಾಜ್ಯ ಮಟ್ಟದಲ್ಲಿ ಟಾಪರ್ ಆಗಿ ಹೊರಹೊಮ್ಮಿರುವುದು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಅವರ ಭವಿಷ್ಯ ಉಜ್ವಲವಾಗಲಿ ಎಂಬ ಆಶಯ ವ್ಯಕ್ತವಾಗಿದೆ.

Source link

Leave a Reply

Your email address will not be published. Required fields are marked *