ಎನ್ಪಿಎಸ್ ಸ್ವಾಸ್ಥ್ಯ, ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದ ಈ ಹೆಲ್ತ್ ಸ್ಕೀಮ್ ಯಾವುದು?

ಎನ್ಪಿಎಸ್ ಸ್ವಾಸ್ಥ್ಯ, ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದ ಈ ಹೆಲ್ತ್ ಸ್ಕೀಮ್ ಯಾವುದು?


ಎನ್ಪಿಎಸ್ ಸ್ವಾಸ್ಥ್ಯ, ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದ ಈ ಹೆಲ್ತ್ ಸ್ಕೀಮ್ ಯಾವುದು?

ಪೆನ್ಷನ್ ಫಂಡ್ಗಳ ಪ್ರಾಧಿಕಾರವಾದ ಪಿಎಫ್ಆರ್ಡಿಎ ಮೊನ್ನೆಯಷ್ಟೆ (ಏಪ್ರಿಲ್ 7) ಎನ್ಪಿಎಸ್ ಸ್ವಾಸ್ಥ್ಯ ಸ್ಕೀಮ್ನ (ಎನ್ಪಿಎಸ್ ಸ್ವಾಸ್ಥ್ಯ) ಎರಡನೇ ಪ್ರೂಫ್ ಆಫ್ ಕಾನ್ಸೆಪ್ಟ್ (ಪಿಒಸಿ- ಪರಿಕಲ್ಪನೆಯ ಪುರಾವೆ) ಅನ್ನು ಅನಾವರಣಗೊಳಿಸಿತು. ಯಾವುದೇ ಪೆನ್ಷನ್ ಸಿಸ್ಟನ್ನ ಗ್ರಾಹಕ ರಿಟೈರ್ಮೆಂಟ್ ಸೇವಿಂಗ್ಸ್ ಹಣವನ್ನು ಹೆಲ್ತ್ ಕೇರ್ ವೆಚ್ಚಕ್ಕೆ ಬಳಸಲು ಅವಕಾಶ ಕೊಡುವ ಕೆಲವು ನಿಯಮಗಳು ಹಾಕಲಾಗಿದೆ.

ಯಾವುದೇ ಪೆನ್ಷನ್ ಸಿಸ್ಟಂ ಅಡಿಯಲ್ಲಿ ಈ ಸ್ವಾಸ್ಥ್ಯ ಯೋಜನೆ 18 ರಿಂದ 85 ವರ್ಷ ವಯೋಮಾನದವರಿಗೆ ಮುಕ್ತವಾಗಿ ಲಭ್ಯವಿರುತ್ತದೆ. ಈ ಸ್ಕೀಮ್ ಪಡೆಯುವಾಗ ಸಬ್‌ಸ್ಕ್ರೈಬರ್‌ಗಳ ಹೆಲ್ತ್ ಡಿಕ್ಲರೇಶನ್ ಒದಗಿಸಬೇಕು. ತಮ್ಮಲ್ಲಿ ಪ್ರೀ ಎಕ್ಸಿಸ್ಟಿಂಗ್ ಕಾಯಿಲೆಗಳು ಯಾವುದಾದರೂ ಇದ್ದರೆ ತಿಳಿಸಬೇಕು.

ಎನ್ ಪಿಎಸ್ ಸ್ವಾಸ್ಥ್ಯ ಸ್ಕೀಮ್ ಪಡೆಯಬೇಕೆಂದರೆ ಮೊದಲು ಪೆನ್ಷನ್ ಸಿಸ್ಟಂ ಅಕೌಂಟ್ ಅನ್ನು ಪ್ರಾರಂಭಿಸಬೇಕು. ನಂತರ ಹೆಲ್ತ್ ಡಿಕ್ಲರೇಶನ್ ಸಲ್ಲಿಸಬೇಕು. ಲಭ್ಯವಿರುವ ಪೆನ್ಷನ್ ಫಂಡ್ ಮ್ಯಾನೇಜರ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೂಡಿಕೆ ಮಾಡುತ್ತಾ ಹೋಗಬಹುದು. ಈ ಎನ್‌ಪಿಎಸ್ ಅಕೌಂಟ್‌ನಲ್ಲಿ ಸ್ವಾಸ್ಥ್ಯ ಫೀಚರ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ: ಸ್ಮಾರ್ಟ್ ಆಗಿ ಯೋಜನೆ ಮಾಡಿ; ಈ 4 ಹಣಕಾಸು ತಪ್ಪುಗಳನ್ನು ಮಾಡದಿರಿ

ಯಾವುದೇ ಪೆನ್ಷನ್ ಫಂಡ್ಗಳು ಎನ್ಪಿಎಸ್ ಸ್ವಾಸ್ಥ್ಯ ಪೆನ್ಷನ್ ಸ್ಕೀಮ್ ಅನ್ನು ಪ್ರಾರಂಭಿಸಬಹುದು. ಪಿಒಸಿಯಾಗಿ ಮಾತ್ರ ಸದ್ಯಕ್ಕೆ ಇದನ್ನು ಚಾಲನೆಯಲ್ಲಿಡಬಹುದು. ಪೆನ್ಷನ್ ಫಂಡ್ಗಳು ಖಾಸಗಿ ಫಿನ್ಟೆಕ್ ಕಂಪನಿಗಳ ಜೊತೆ ಸಹಭಾಗಿತ್ವ ಪಡೆಯಬಹುದು.

ಎನ್ ಪಿಎಸ್ ಸ್ವಾಸ್ಥ್ಯ ಪೆನ್ಷನ್ ಸ್ಕೀಮ್ ಅಕೌಂಟ್‌ನಲ್ಲಿರುವ ಹಣವನ್ನು ವೈದ್ಯಕೀಯ ವೆಚ್ಚಕ್ಕೆ ಬಳಸಿಕೊಳ್ಳುವ ಅವಕಾಶ ಇರುತ್ತದೆ. ಈ ಸ್ಕೀಮ್ನಲ್ಲಿ ಒಟ್ಟಾರೆ ಕೊಡುಗೆಯ ಶೇ. 25ರಷ್ಟನ್ನು ವೈದ್ಯಕೀಯ ವೆಚ್ಚಗಳಿಗೆ ವಿತ್ತ್ರಾ ಮಾಡಿಕೊಳ್ಳಬಹುದು. ಮೊದಲ ಬಾರಿಗೆ ವಿತ್ತ್ರಾ ಮಾಡುವಾಗ ಸ್ಕೀಮ್‌ನಲ್ಲಿ ಕನಿಷ್ಠ 50,000 ರೂ ಆದರೂ ಕೊಡುಗೆ ಇರಬೇಕು.

ವೈದ್ಯಕೀಯವು ತೀರಾ ಜಾಸ್ತಿ ಇದ್ದರೆ ವೆಚ್ಚ ಸ್ವಾಸ್ಥ್ಯ ಪೆನ್ಷನ್ ಸ್ಕೀಮ್ನ ಅವಧಿಗೆ ಮುನ್ನವೇ ಪೂರ್ಣ ಹಣ ವಿತ್ತರ ಮಾಡಿಕೊಳ್ಳಬಹುದು. ವೈದ್ಯಕೀಯ ಭರಿಸಿದ ಬಳಿಕ ಉಳಿಯುವ ಹಣವನ್ನು ಕಾಮನ್ ಸ್ಕೀಮ್ ಅಕೌಂಟ್‌ಗೆ ವರ್ಗಾಯಿಸಲಾಯಿತು.

ಇದನ್ನೂ ಓದಿ: ಪಿಪಿಎಫ್‌ನಲ್ಲಿ ಕೇವಲ 1 ಪರ್ಸಂಟ್ ಬಡ್ಡಿಗೆ ಸಾಲ? ಯಾವ ವರ್ಷ, ಎಷ್ಟು ಅವಧಿ ಇತ್ಯಾದಿ ನಿಯಮಗಳು ತಿಳಿದಿರಿ

ಎನ್ ಪಿಎಸ್ ಸ್ವಾಸ್ಥ್ಯ ಪೆನ್ಷನ್ ಸ್ಕೀಮ್ ಯಾವುದಾದರೂ ಬ್ಯಾಂಕ್‌ನಲ್ಲಿ ಪಡೆಯಬಹುದು. ಆನ್‌ಲೈನ್‌ನಲ್ಲಿ ಎನ್‌ಪಿಎಸ್ ವೆಬ್‌ಸೈಟ್‌ಗೆ ಹೋಗಿಯೂ ಅಕೌಂಟ್ ತೆರೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *