ಆತಂಕ ಸೃಷ್ಟಿಸಿರೋ ಜೋಂಬಿ ಡ್ರಗ್ಸ್: ನಟ ದುನಿಯಾ ವಿಜಯ್‌ ಹೇಳಿದ್ದೇನು? ಇದರ ತಯಾರಿಕೆ ಹೀಗಿದೆ

ಆತಂಕ ಸೃಷ್ಟಿಸಿರೋ ಜೋಂಬಿ ಡ್ರಗ್ಸ್: ನಟ ದುನಿಯಾ ವಿಜಯ್‌ ಹೇಳಿದ್ದೇನು? ಇದರ ತಯಾರಿಕೆ ಹೀಗಿದೆ

ಆತಂಕ ಸೃಷ್ಟಿಸಿರೋ ಜೋಂಬಿ ಡ್ರಗ್ಸ್: ನಟ ದುನಿಯಾ ವಿಜಯ್‌ ಹೇಳಿದ್ದೇನು? ಇದರ ತಯಾರಿಕೆ ಹೀಗಿದೆ

ಬೆಂಗಳೂರಿನಲ್ಲಿ ವೈರಲ್ ಆದ ವಿಡಿಯೋದಿಂದ ಜೋಂಬಿ ಡ್ರಗ್ಸ್ ಆತಂಕ ಸೃಷ್ಟಿಯಾಗಿತ್ತು, ಆದರೆ ಪೊಲೀಸರು ಇದು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಈ ನಡುವೆ ನಟ ದುನಿಯಾ ವಿಜಯ್ ಡ್ರಗ್ಸ್ ಮಾಫಿಯಾ ಬಗ್ಗೆ ಎಚ್ಚರಿಸಿದ್ದು, ಮನುಷ್ಯನ ಮೂಳೆಗಳಿಂದ ತಯಾರಾಗುವ ಈ ಡ್ರಗ್ಸ್ ತುರ್ತು ಪರಿಸ್ಥಿತಿಗೂ ಕಾರಣವಾಗಿದೆ.

ಇದಾಗಲೇ ಜೋಂಬಿ ಡ್ರಗ್ಸ್‌ (zombie drugs) ಸಾಕಷ್ಟು ಹಲ್‌ಚಲ್‌ ಸೃಷ್ಟಿಸಿಬಿಟ್ಟಿದೆ. ಬೆಂಗಳೂರಿನ ವ್ಯಕ್ತಿಯೊಬ್ಬನ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಸೋಷಿಯಲ್‌ ಮೀಡಿಯಾದಲ್ಲಿ ಇದು ಭಾರಿ ಸದ್ದು ಮಾಡಿತ್ತು. ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬನ ವಿಡಿಯೋ ವೈರಲ್​ ಆಗುತ್ತಿದೆ. ನಿಂತಲ್ಲೇ ನಿಂತು ಅಲ್ಲಿಯೇ ತೂರಾಡುತ್ತಿರುವ ವ್ಯಕ್ತಿಯ ವಿಡಿಯೋ ಜನರಲ್ಲಿ ಆತಂಕ ಸೃಷ್ಟಿಸಿದೆ. ಆದರೆ ಇದರ ಬಗ್ಗೆ ಇದಾಗಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ ನೀಡಿ, ಸಾರ್ವಜನಿಕರ ಆತಂಕವನ್ನು ದೂರ ಮಾಡಿದ್ದಾರೆ. ಈತ ಜೋಂಬಿ ಡ್ರಗ್ಸ್‌ ಸೇವಿಸಿಲ್ಲ ಎಂದು ತಿಳಿಸಿದ್ದಾರೆ.

ಇದರ ನಡುವೆಯೇ, ನಟ ದುನಿಯಾ ವಿಜಯ್ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಶೇರ್‌ ಮಾಡಿದ್ದಾರೆ. ಅವರು ಕೂಡ ಬೆಂಗಳೂರಿನ ವ್ಯಕ್ತಿಯ ವಿಡಿಯೋ ಅನ್ನೇ ಶೇರ್‌ ಮಾಡಿಕೊಂಡಿದ್ದಾರೆ. ಆದರೆ ಅದು ಡ್ರಗ್ಸ್‌ ಪ್ರಭಾವ ಅಲ್ಲ ಎನ್ನುವುದನ್ನು ಪೊಲೀಸರು ಸ್ಪಷ್ಟಪಡಿಸಿದ್ದರೂ, ಬೆಂಗಳೂರು ಡ್ರಗ್ಸ್‌ ಮಾಫಿಯಾದಿಂದ ಹೊರತಾಗಿಲ್ಲ ಎನ್ನುವುದೂ ಸುಳ್ಳಲ್ಲ. ಆದ್ದರಿಂದ ನಟ ಆತಂಕ ವ್ಯಕ್ತಪಡಿಸಿದ್ದಾರೆ.

ನಮಸ್ಕಾರ. ಈಗಾಗಲೇ ಭೀಮ ಸಿನಿಮಾ ನೋಡಿದ್ದೀರಿ. ಅದರಲ್ಲಿ ಗಾಂಜಾ ಮತ್ತು ಟೈಡಲ್ ಬಗ್ಗೆ ನಾವು ತೋರಿಸಿದ್ದೆವು. . ಈಗ ಹೊಸದೊಂದು ಡ್ರಗ್ಸ್ ಬಂದಿದೆ ಅಂತ ಮಾಹಿತಿ ಇದೆ. ಅದು ಜೋಂಬಿ ಅಂತ, ಹಾಗಾಗಿ ಯುವಕರು ತುಂಬಾ ಹುಷಾರಾಗಿರಬೇಕು. ಯುವಕರಷ್ಟೇ ಪೋಷಕರು ಕೂಡಾ ಎಚ್ಚರವಾಗಿರಬೇಕು. ಮನೆಯಲ್ಲಿರೋ ಮಕ್ಕಳ ಬಗ್ಗೆ ಗಮನಹರಿಸ್ಬೇಕು ಎಂದಿದ್ದಾರೆ.

ಪೊಲೀಸ್​ ಆಯುಕ್ತರು ಬೆಂಗಳೂರಿನ ವ್ಯಕ್ತಿ ಜೋಂಬಿ ಡ್ರಗ್ಸ್ ಸೇವಿಸಿಲ್ಲ ಎಂದು ಸ್ಪಷ್ಟನೆ ನೀಡುವ ಮೊದಲು ಈ ವಿಡಿಯೋ ನಟ ಮಾಡಿದ್ದರು. ಆದ್ದರಿಂದ ಅವರು ಅದರಲ್ಲಿ, ಈ ವ್ಯಕ್ತಿಯ ವಿಷಯ ಪೊಲೀಸ್ ಡಿಪಾರ್ಟ್​ಮೆಂಟ್ ಇದನ್ನು ನಿಜಾನಾ ಸುಳ್ಳಾ ಅಂತ ಪತ್ತೆ ಹಚ್ಚಿ ಜನರಿಗೆ ಮಾಹಿತಿ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ. ನಿಜವಾಗಿಯೂ ಆ ಕೆಲಸ ಮಾಡುವುದರಲ್ಲಿ ನಮ್ಮ ಕರ್ನಾಟಕ ಪೊಲೀಸ್ ಮೇಲುಗೈ ಸಾಧಿಸಿದೆ ಎಂದಿದ್ದಾರೆ.

ಆದರೆ ಇದೇ ವೇಳೆ ಅವರು ಮನವಿಯನ್ನೂ ಮಾಡಿಕೊಂಡಿದ್ದಾರೆ. ಏಕೆಂದರೆ ಇಂಥ ಡ್ರಗ್​​ ಮಾಫಿಯಾ ತನ್ನ ಕಬಂಧ ಬಾಹು ಚಾಚಲು ಹೆಚ್ಚು ಹೊತ್ತು ಬೇಕಾಗಲ್ಲ. ಇದಾಗಲೇ ಬೆಂಗಳೂರಿನ ಕೆಲವು ಕಾಲೇಜುಗಳ ಸುತ್ತಮುತ್ತಲೂ ಅತಿ ದೊಡ್ಡ ಡ್ರಗ್ಸ್ ಮಾಫಿಯಾ ಕಾರ್ಯ ನಿರ್ವಹಿಸುತ್ತಿದ್ದುದು ಎಲ್ಲರಿಗೂ ತಿಳಿದದ್ದೇ. ಆದ್ದರಿಂದ ಈಗ ವೈರಲ್​ ಆಗಿರೋ ವ್ಯಕ್ತಿ ಅದರ ಸೇವನೆ ಮಾಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸುತ್ತಿದ್ದರೂ, ಜನರು ಇದನ್ನು ಸುಲಭವಾಗಿ ಪರಿಗಣಿಸುವಂತಿಲ್ಲ. ಇದೆ ಕಾರಣ ನಟ ಮನವಿ ಮಾಡಿಕೊಂಡಿದ್ದಾರೆ. ಅದೇನೆಂದರೆ, ಈ ರೀತಿಯ ಯಾವುದೇ ವ್ಯಕ್ತಿ ಅಥವಾ ಸಂಶಯ ಕಂಡುಬಂದರೆ ಹತ್ತಿರದ ಪೊಲೀಸ್​ ಸ್ಟೇಷನ್​ಗೆ ವಿಷಯ ತಿಳಿಸಿ. ಜೋಂಬಿ ಡ್ರಗ್ಸ್ ಬಗ್ಗೆ ಗೊತ್ತಾದರೆ ಪೊಲೀಸರಿಗೆ ಹೇಳಿ ಅಂತ ಕೇಳಿಕೊಳ್ತೀನಿ ಎಂದಿದ್ದಾರೆ.

ಬಿಬಿಸಿ ವರದಿ ಮಾಡಿರುವಂತೆ, ಜೋಂಬಿ ಡ್ರಗ್ಸ್​ ಇದಾಗಲೇ ಹೇಳಿದಂತೆ ಕೆಲವು ದೇಶಗಳಲ್ಲಿ ವ್ಯಾಪಕವಾಗಿ ಹರಡಿದೆ. ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್‌ನಲ್ಲಿ ವ್ಯಾಪಕ ಪರಿಣಾಮ ಬೀರಿದ್ದು, ಇದಕ್ಕೆ ಹೆಚ್ಚಿನವರು ವ್ಯಸನಿಗಳಾಗಿದ್ದಾರೆ. ಮನುಷ್ಯನ ಮೂಳೆಗಳಿಂದ ಇದನ್ನು ತಯಾರಿಸಲಾಗುತ್ತದೆ. ಸ್ಮಶಾನದಿಂದ ಅಸ್ಥಿಪಂಜರಗಳನ್ನು ಹೊರತೆಗೆದು ಅದರಿಂದ ತಯಾರು ಮಾಡಲಾಗುತ್ತದೆ. ಸಿಯೆರಾ ಲಿಯೋನ್‌ನಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲೂ ಈ ಮಾದಕ ದ್ರವ್ಯ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇದರ ಉತ್ಪಾದನೆಯನ್ನು ತಡೆಯಲು ಪೊಲೀಸ್ ಅಧಿಕಾರಿಗಳು ಸ್ಮಶಾನಗಳಿಗೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದೆ.

Source link

Leave a Reply

Your email address will not be published. Required fields are marked *