2nd PUC Exam 2 Time Table: ಫೇಲಾದ್ರೇನಂತೆ ಇನ್ನೊಂದು ಎಕ್ಸಾಮ್ ಟೈಮ್ ಟೇಬಲ್ ಇಲ್ಲಿದೆ ನೋಡಿ

2nd PUC Exam 2 Time Table: ಫೇಲಾದ್ರೇನಂತೆ ಇನ್ನೊಂದು ಎಕ್ಸಾಮ್ ಟೈಮ್ ಟೇಬಲ್ ಇಲ್ಲಿದೆ ನೋಡಿ


2ನೇ ಪಿಯುಸಿ ಪರೀಕ್ಷೆ 2 ಟೈಮ್ ಟೇಬಲ್: ಫೇಲಾದ್ರೇನಂತೆ ಇನ್ನೊಂದು ಎಕ್ಸಾಮ್ ಟೈಮ್ ಟೇಬಲ್ ಇಲ್ಲಿದೆ ನೋಡಿ

ಬೆಂಗಳೂರು, (ಏಪ್ರಿಲ್ 09): 2025-26ನೇ ಸಾಲಿನ ಕರ್ನಾಟಕದ ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಇಂದು (ಏಪ್ರಿಲ್ 09) ಸಂಜೆ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಫಲಿತಾಂಶ ಪ್ರಕಟಿಸಿದ್ದು, ಇದೇ ವೇಳೆ ಮೊದಲ ಪರೀಕ್ಷೆಯಲ್ಲಿ ಫೇಲಾದವರಿಗೆ ಎರಡನೇ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗಿದೆ. ಇದರ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು, ದ್ವಿತೀಯ ಪಿಯುಸಿ ಪರೀಕ್ಷೆ-2 ನಿಗದಿತ ಸಮಯ (ಕರ್ನಾಟಕ ದ್ವಿತೀಯ ಪಿಯುಸಿ 2ನೇ ಪರೀಕ್ಷೆಯ ವೇಳಾಪಟ್ಟಿ) ಬಿಡುಗಡೆ ಮಾಡಿದ್ದು, ಪರೀಕ್ಷೆಗಳು ಏಪ್ರಿಲ್ 30 ರಿಂದ ಮೇ 13 ರ ವರೆಗೆ ನಡೆಯಲಿವೆ.

ಏಪ್ರಿಲ್ 30 ರಿಂದ ದ್ವಿತೀಯ ಪಿಯುಸಿ 2ನೇ ಪರೀಕ್ಷೆ

ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆ (ಪರೀಕ್ಷೆ-2) ಏಪ್ರಿಲ್ 30 ರಿಂದ ಆರಂಭವಾಗಿ ಮೇ 13ರವರೆಗೆ. ಈ ಅವಧಿಯಲ್ಲಿ ಮತ್ತೊಮ್ಮೆ ತಮ್ಮ ಫಲಿತಾಂಶವನ್ನು ಸುಧಾರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಬಾರಿ ಮೂರನೇ ಪರೀಕ್ಷೆ (ಪರೀಕ್ಷೆ-3) ನಡೆಸುವುದಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಇನ್ನು ಪರೀಕ್ಷೆ 2 ವಿಷಯಗಳ ಪರೀಕ್ಷೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ನಡೆಯಲಿವೆ. ಕೆಲವು ವೃತ್ತಿಪರ ಮತ್ತು ತಾಂತ್ರಿಕ ವಿಷಯಗಳ ಪರೀಕ್ಷೆಗಳು ಮಧ್ಯಾಹ್ನದ ಅವಧಿಯಲ್ಲಿ ನಿಗದಿಯಾಗಿವೆ.

ಇದನ್ನೂ ಓದಿ: ಫೇಲಾದವರಿಗೆ ಇನ್ನೊಂದು ಅವಕಾಶ: ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಪ್ರಕಟ

2ನೇ ಪರೀಕ್ಷೆ ಹೇಗಿದೆ

  • 30/04/2026- ಕನ್ನಡ, ಅರೇಬಿಕ್
  • 02/05/2026- ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ರಸಾಯನಿಕ ಶಾಸ್ತ್ರ
  • 04/05/2026- ಇಂಗ್ಲೀಷ್
  • 05/05/2026- ವ್ಯವಹಾರ ಅಧ್ಯಯನ, ಔತಶಾಸ್ತ್ರ, ಶಿಕ್ಷಣ ಶಾಸ್ತ್ರ.
  • 06/05/2026- ಅರ್ಥಶಾಸ್ತ್ರ, ಜೀವಶಾಸ್ತ್ರ
  • 07/05/2026- ಇತಿಹಾಸ, ಗಣಿತ, ಗೃವಿಜ್ಞಾನ
  • 08/05/2026- ರಾಜ್ಯಶಾಸ್ತ್ರ, ವಿದ್ಯುನ್ಮಾನಶಾಸ್ತ್ರ. ಗಣಕ ವಿಜ್ಞಾನ
  • 09/05/2026- ಹಿಂದಿ.
  • 11/05/2026- ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ
  • 12/05/2026- ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ, ಮೂಲ ಗಣಿತ.
  • 13/05/2026- ತಮಿಳು. ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್,
  • 13/05/206 ಹಿಂದೂಸ್ತಾನಿ ಸಂಗೀತ, ಡಿವೈಸ್‌ ಮತ್ತು ಯಂತ್ರಾಂಶ, ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೈಲ್‌, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಅಂಡ್‌ ವೆಲ್‌ನೆಸ್‌ (ಮಧ್ಯಾಹ್ನ 2ರಿಂದ ಸಂಜೆ 4.15ರವರೆಗೆ)

ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 28ರಿಂದ ಮಾರ್ಚ್ 12ರವರೆಗೆ ರಾಜ್ಯಾದ್ಯಂತ ಒಟ್ಟು 1217 ಕೇಂದ್ರಗಳಲ್ಲಿ ನಡೆದಿದ್ದು, 5174 ಕಾಲೇಜುಗಳಲ್ಲಿ ಒಟ್ಟು 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೊಂದಣಿ ಮಾಡಿಕೊಂಡಿದ್ದಾರೆ. ಈ ಹೊರಗಿನ ಸೈನ್ಸ್ ವಿಷಯದಲ್ಲಿ 2.92 ಲಕ್ಷ, ವಾಣಿಜ್ಯ 2.11 ಲಕ್ಷ ಹಾಗೂ ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು.

ಹೆಚ್ಚಿನ ಶಿಕ್ಷಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *