Headlines

ಬೆಂಗಳೂರು ವೈರಲ್​ ಜೋಂಬಿ ಡ್ರಗ್ಸ್ ಕೇಸ್; ಪೊಲೀಸ್​​ ತನಿಖೆಯಲ್ಲಿ ಅಸಲಿಯತ್ತು ಬಯಲು

ಬೆಂಗಳೂರು ವೈರಲ್​ ಜೋಂಬಿ ಡ್ರಗ್ಸ್ ಕೇಸ್; ಪೊಲೀಸ್​​ ತನಿಖೆಯಲ್ಲಿ ಅಸಲಿಯತ್ತು ಬಯಲು


ಬೆಂಗಳೂರು ವೈರಲ್ ಜೋಂಬಿ ಡ್ರಗ್ಸ್ ಕೇಸ್; ಪೊಲೀಸ್ ತನಿಖೆಯಲ್ಲಿ ಅಸಲಿಯತ್ತು ಬಯಲು

ಬೆಂಗಳೂರು, ಏಪ್ರಿಲ್ 09: ಇತ್ತೀಚೆಗೆ ಒಂದು ವಿಡಿಯೋ ಭಾರೀ ವೈರಲ್ ಆಗಿದೆ. ಅದರಲ್ಲಿ ವ್ಯಕ್ತಿ ಗಂಟೆಗಟ್ಟಲ್ಲೇ ನಿಂತಿದ್ದ. ಇವುಗಳಲ್ಲಿ ಬೆಂಗಳೂರಿನಲ್ಲಿ ಜೋಂಬಿ ಡ್ರಗ್ಸ್ (ಜೊಂಬಿ ಔಷಧ) ಕಾಲಿಟ್ಟಿದೆ ಎಂದು ವೈರಲ್ ಮಾಡಲಾಗಿದೆ. ಇನ್ನು ಇದೇ ವಿಚಾರವಾಗಿ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಕೂಡ ಧ್ವನಿ ಎತ್ತಿದ್ದಾರೆ. ಇದೀಗ ಈಶಾನ್ಯ ವಿಭಾಗದ ಪೊಲೀಸರಿಂದ ಈ ಬಗ್ಗೆ ತನಿಖೆ ಮಾಡಲಾಗಿತ್ತು, ಈ ವೇಳೆ ಅಸಲಿಯತ್ತು ಬಯಲಾಗಿದೆ. ಜೋಂಬಿ ಡ್ರಗ್ಸ್ ಎನ್ನುವುದೇ ಇಲ್ಲಾ ಎಂಬ ಸ್ಫೋಟಕ ಸತ್ಯ ಹೊರಬಿದ್ದಿದೆ.

ವಿಡಿಯೋದಲ್ಲಿರುವ ವ್ಯಕ್ತಿ ಯಾರು?

ಅಸಲಿಗೆ ವಿಡಿಯೋದಲ್ಲಿ ಇರುವ ವ್ಯಕ್ತಿ ಪಂಜಾಬ್ ಮೂಲದ ಲಾರಿ ಚಾಲಕ ರಾಜವೀರ್ ಸಿಂಗ್. ಈ ಹಿಂದೆ ಅಫೀಮು ಎಂಬ ಡ್ರಗ್ಸ್ ಸೇವನೆ ಮಾಡಿದ್ದ. ಹೀಗಾಗಿ ಆತನ ಕುಟುಂಬಕ್ಕೆ ಡಿ ಅಡಿಕ್ಷನ್ ಸೆಂಟರ್ ಸೇರಿಸಿದ್ದರು. ಬಳಿಕ ಆತ ಬೆಂಗಳೂರಿಗೆ ಬಂದಿದ್ದ. ಲಾರಿ ಚಾಲಕನಾಗಿ ಕೆಲಸ ಮಾಡಲು ಮುಂದಾಗಿದ್ದ. ಕೆಲ ಚಾಲಕರ ಜೊತೆಗೆ ಸೇರಿಸು ಶೆಡ್ನಲ್ಲಿ ವಾಸ ಮಾಡುತ್ತಿದ್ದಾರೆ. ಇನ್ನು ಈತನಿಗೆ ಅರ್ಥ (ಸಂಧಿವಾತ) ಮತ್ತು ಸೈನಸ ಎಂಬ ಕಾಯಿಲೆ ಕೂಡ ಇದೆ.

ಇದನ್ನೂ ಓದಿ: ಹೋಟೆಲ್ ಬಳಿ ಡ್ರಗ್ಸ್ ಸೇವನೆ: ಪ್ರಶ್ನಿಸಿದ್ದಕ್ಕೆ ಗಲಾಟೆ; ಸಿಕ್ಕಸಿಕ್ಕ ವಸ್ತುಗಳಿಂದ ಹೊಡೆದಾಟ

ಲಾರಿ ಚಾಲಕರ ಜೊತೆಗೆ ಕಂಠ ಪೂರ್ತಿ ಮದ್ಯ ಸೇವನೆ ಮಾಡಿದ್ದ. ಬಳಿಕ ಎರಡು ಮಾತ್ರೆಯನ್ನು ಎಂದಿನಂತೆ ತೆಗೆದುಕೊಂಡಿದ್ದ. ಮಾತ್ರೆಗಳು ಮತ್ತು ಮದ್ಯ ಸೇರಿ ಕೆಮಿಕಲ್ ರಿಯಾಕ್ಷನ್ ನಿಂದ ಕಣ್ಣು ಮಂಜಾಗಿತ್ತು. ನಡೆಯುವುದು, ನಡೆಯುವುದು ಕಷ್ಟವಾಗಿತ್ತು. ಹೀಗಾಗಿ ಒಂದೇ ಕಡೆ ನಿಂತಲ್ಲಿಯೇ ನಿಂತಿದ್ದ. ಇದನ್ನೇ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರಿನಲ್ಲಿ ಜೋಂಬಿ ಡ್ರಗ್ಸ್ ಎಂದು ವೈರಲ್ ಮಾಡಲಾಗಿದೆ. ಸದ್ಯ ತನಿಖೆಯಿಂದ ಅಸಲಿಯತ್ತು ಬಯಲಿಗೆ. ವಿಡಿಯೋ ಮಾಡಿ ಹರಿಬಿಟ್ಟವರ ವಿರುದ್ಧ ಕೇಸ್ ದಾಖಲಿಸಲು ಅರ್ಜಿ ಸಲ್ಲಿಸಿದ್ದಾರೆ.

ವಿಡಿಯೋ ಮಾಡಿದವರಿಗೆ ಮತ್ತು ಶೇರ್ ಮಾಡಿದವರಿಗೆ ಶಿಕ್ಷೆ ಎಂದ ಸೀಮಂತ್ ಕುಮಾರ್ ಸಿಂಗ್

ಇನ್ನು ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿದ್ದು, ವಿಡಿಯೋದಲ್ಲಿರುವ ವ್ಯಕ್ತಿಯನ್ನ ಪತ್ತೆ ಮಾಡಿದ್ದಾರೆ. ಆ ವ್ಯಕ್ತಿ ಇಲ್ಲ, ಎಣ್ಣೆ ಕುಡಿದು ಬಳಿಕ ಮೆಡಿಸಿನ್ ತೆಗೆದುಕೊಂಡಿದ್ದಕ್ಕೆ ಈ ರೀತಿ ಆಗಿದೆ. ಆತನಿಗೆ ವೈದ್ಯಕೀಯ ಚಿಕಿತ್ಸೆ ಮಾಡಿಸಿದ ಯಾವುದೇ ಔಷಧವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಭರ್ಜರಿ ಡ್ರಗ್ ಬೇಟೆ: ಬಟ್ಟೆ ವ್ಯಾಪಾರದ ನೆಪದಲ್ಲಿ ಎಂಡಿಎಂಎ ಮಾರುತ್ತಿದ್ದ ನೈಜೀರಿಯಾ ಪ್ರಜೆ ಅಂದ!

ಈ ರೀತಿ ವಿಡಿಯೋ ಹರಿಬಿಡುವ ಮುನ್ನ ಯೋಚನೆ ಮಾಡಿ. ಇಲ್ಲಾ ಮೊದಲು ಪೊಲೀಸರಿಗೆ ತಿಳಿಸಿ. ಈ ರೀತಿ ಸುಖಾ ಸುಮ್ಮನೆ ವೈರಲ್ ಮಾಡುವುದು ಸರಿಯಲ್ಲ. ಇದು ಸಿಟಿಗೆ ಮತ್ತು ಒಬ್ಬ ವ್ಯಕ್ತಿಗೆ ಕೆಟ್ಟ ಹೆಸರು ತರುವ ವಿಚಾರವಾಗಿದೆ. ಈ ವಿಡಿಯೋ ವೈರಲ್ ಮಾಡಿರುವ ವ್ಯಕ್ತಿ ಪತ್ತೆ ಮಾಡಿ ಕ್ರಮಕೈಗೊಳ್ಳುತ್ತೇವೆ. ನಮ್ಮ ಔಷಧೀಯ ಡ್ರಗ್ಸ್ ವಿಚಾರವಾಗಿ ಕೆಲಸ ಮಾಡುತ್ತಿದ್ದಾರೆ. ಡ್ರಗ್ಸ್ ಬಗ್ಗೆ ಝೀರೋ ಟಾಲರೆನ್ಸ್ ಇದೆ. ಜನರು ಆತಂಕ ಪಡುವುದು ಬೇಡ. ಸಿಟಿ ಬಗ್ಗೆ ಅಪಪ್ರಚಾರ ಮಾಡಿದವರ ಮೇಲೆ ಕಾನೂನೂ ಕ್ರಮ ಆಗಲಿದೆ. ವಿಡಿಯೋ ಶೇರ್ ಮಾಡಿದವರಿಗೂ ನೋಟಿಸ್ ಜಾರಿಯಾಗಲಿದೆ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *