ಕಾರನ್ನು ಕಾಪಾಡಲು ತನ್ನ ಜೀವವನ್ನೂ ಲೆಕ್ಕಿಸದ ಮಹಿಳೆ!

ಕಾರನ್ನು ಕಾಪಾಡಲು ತನ್ನ ಜೀವವನ್ನೂ ಲೆಕ್ಕಿಸದ ಮಹಿಳೆ!


ಕಾರನ್ನು ಕಾಪಾಡಲು ತನ್ನ ಜೀವವನ್ನೂ ಲೆಕ್ಕಿಸದ ಮಹಿಳೆ!

ನವದೆಹಲಿ, ಏಪ್ರಿಲ್ 9: ಅಲ್ಲಿ ಸಾಲಾಗಿ ಕಾರುಗಳನ್ನು ನಿಲ್ಲಿಸಲಾಗಿದೆ. ಅವುಗಳ ಹಿಂದೆ ಎತ್ತರವಾದ ಕಾಂಪೌಂಡ್ ಇತ್ತು. ಶಿಥಿಲವಾಗಿತ್ತು ಆ ಕಾಂಪೌಂಡ್ ಗೋಡೆ ಇನ್ನೇನು ಬೀಳುವುದರಲ್ಲಿತ್ತು. ಇದರ ಸುಳಿವು ಸಿಕ್ಕೊಡನೆ ಮಹಿಳೆ ಓಡಿಹೋಗಿ ತನ್ನ ಕಾರನ್ನು ಆ ಸ್ಥಳದಿಂದ ತೆಗೆದಿದ್ದಾಳೆ. ಆಕೆ ಕಾರನ್ನು ತೆಗೆದ ಕೆಲವೇ ಸೆಕೆಂಡುಗಳಲ್ಲಿ ಆ ಗೋಡೆ ಮಗುಚಿಬಿದ್ದಿದೆ. ಅಲ್ಲಿದ್ದ ಕಾರುಗಳೆಲ್ಲ ಆ ಗೋಡೆಯಡಿ ಹೂತುಹೋಗಿವೆ. ಆ ಮಹಿಳೆ ತನ್ನ ಪ್ರಾಣವನ್ನೂ ಲೆಕ್ಕಿಸದೆ ಕಾರನ್ನು ತೆಗೆಯಲು ಓಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ನಡೆದಿದ್ದು ಎಲ್ಲಿ ಎಂಬುದು ತಿಳಿದುಬಂದಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *