ದಿನ ಭವಿಷ್ಯ: ಇಂದು ಈ ರಾಶಿಯವರಿಂದ ವಿಶ್ವಾಸ ಕಳೆದುಕೊಳ್ಳಬೇಕಾಗುವುದು

ದಿನ ಭವಿಷ್ಯ: ಇಂದು ಈ ರಾಶಿಯವರಿಂದ ವಿಶ್ವಾಸ ಕಳೆದುಕೊಳ್ಳಬೇಕಾಗುವುದು


ದಿನ ಭವಿಷ್ಯ: ಇಂದು ಈ ರಾಶಿಯವರಿಂದ ವಿಶ್ವಾಸ ಕಳೆದುಕೊಳ್ಳಬೇಕಾಗುವುದು

ಮೇಷ ರಾಶಿ:

ಕೃಷಿ ಚಟುವಟಿಕೆಯಲ್ಲಿ ನಿಮ್ಮದೇ ಆದ ಹೆಜ್ಜೆಗಳನ್ನು ಇಡುವಿರಿ. ನೀವು ಆಸ್ತಿಗೆ ಸಂಬಂಧಿಸಿದ ವಿವಾದವನ್ನು ಇನ್ನೊಂದು ತಿರುವನ್ನು ಪಡೆಯಬಹುದು. ನಿಮ್ಮ ಸಂಗಾತಿಯ ಬೆಂಬಲವು ಖುಷಿ ಕೊಡುವುದು. ಯಾವುದೋ ಅಗಾಧ ಯೋಚನೆಯಲ್ಲಿ ನೀವು ಇರುವಿರಿ. ವ್ಯಾಪಾರದಲ್ಲಿ ನಷ್ಟ ಸಂಭವಿಸಬಹುದು. ಪಾಲುದಾರಿಕೆಗಾಗಿ ಇಂದು ದೂರ ಪ್ರಯಾಣ ಮಾಡಬೇಕಾಗುವುದು. ಉತ್ಸಾಹದಿಂದ ಎಲ್ಲರನ್ನೂ ಜೋಡಿಸಿಕೊಂಡು ಕೆಲಸವನ್ನು ಮುಗಿಸಿ.

ವೃಷಭ ರಾಶಿ:

ವಿದ್ಯಾಭ್ಯಾಸದಲ್ಲಿ ಶ್ರಮದ ಅಗತ್ಯ ಬಹಳ ಕಾಣಿಸುತ್ತದೆ. ಎಂತಹ ಸವಾಲನ್ನೂ ನೀವು ಎದುರಿಸುವ ಹುಂಬುತನದಲ್ಲಿ ಏನನ್ನಾದರೂ ಮಾಡಿಕೊಳ್ಳುಬಿರಿ. ಧೈರ್ಯದಿಂದ ಏನನ್ನೂ ಎದುರಿಸುವ ಮನೋಬಲವು ಕಡಿಮೆ ಆದೀತು. ಪ್ರತಿಕೂಲ ಪರಿಸ್ಥಿತಿಯಲ್ಲಿ ನೀವು ಧೈರ್ಯವನ್ನು ಕಾಪಾಡಿಕೊಳ್ಳಿ. ಯಾರನ್ನಾದರೂ ಮಾದರಿ ವ್ಯಕ್ತಿಯಾಗಿ ಮಾಡಿಕೊಳ್ಳುವಿರಿ. ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದೆ ಎಂಬ ತೀರ್ಮಾನ ಬೇಡ.

ಮಿಥುನ ರಾಶಿ:

ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಉಪಯುಕ್ತ ಮಾಹಿತಿಯನ್ನು ಕೊಡುತ್ತಾರೆ. ನೂತನ ಮನೆಯ ನಿರೀಕ್ಷೆಯಲ್ಲಿ ನೀವು ಇರುವಿರಿ. ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲರಾಗಿದ್ದಾರೆ. ನಿಮ್ಮ ಹವ್ಯಾಸವು ಬದಲಾಗಬಹುದು. ಮನೆಯ ವಿಚಾರವನ್ನು ಯಾರ ಬಳಿಯೂ ಹಂಚಿಕೊಳ್ಳುವುದು ಬೇಡ. ಇಂದು ನಿಮಗೆ ಅದೃಷ್ಟವಿರುವ ಕಾರಣ ಉತ್ತಮ ಫಲವನ್ನು ಪಡೆಯುವಿರಿ.

ಕರ್ಕಾಟಕ ರಾಶಿ:

ಅಶುಭಕರ ಸೂಚನೆಯನ್ನು ನಿರ್ಲಕ್ಷಿಸುವಿರಿ. ಅನುಮಾನದ ನಿಮ್ಮ ಸ್ವಭಾವವು ಅಧಿಕವಾಗುವುದು. ಎಲ್ಲವನ್ನೂ ಸಮಾನವಾಗಿ ನೋಡಲು ಕಷ್ಟವಾಗಬಹುದು. ಕಲಹಕ್ಕೆ ಏನನ್ನಾದರೂ ಹುಡುಕಿಕೊಳ್ಳಿ. ಅನಿರೀಕ್ಷಿತ ಧನಾಗಮನವು ಸಂತೋಷವನ್ನು ಕೊಡುವುದು. ಪರರ ಸೇವೆಗೆ ನಿಮ್ಮ ಮನಸ್ಸು ಒಪ್ಪದು. ನಿಮ್ಮ ಮಾತು ಬಾಲಿಶದಂತೆ ತೋರುವುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸಮಸ್ಯೆ ಆಗುವುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು.

ಸಿಂಹ ರಾಶಿ:

ಹಿತಶತ್ರುಗಳಿಂದ ನೀವು ಹತಾಶರಾಗದಂತೆ ತೋರುವುದು. ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕು. ವಿದ್ಯಾರ್ಥಿಗಳು ಯಾವುದಾದರೂ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಸ್ಥಾನವು ಸಿಗಲಿದೆ. ನಿಮ್ಮ ಆರೋಗ್ಯದ ಸಮಸ್ಯೆಗಳನ್ನು ನೀವು ಅಲಕ್ಷ್ಯ ಮಾಡುವುದು ಸರಿಯಾಗದು. ನಿಮಗೆ ಕೊಟ್ಟ ಕೆಲಸಕ್ಕೆ ಏನಾದರೂ ನೆಪವನ್ನು ಹೇಳಿ ತಪ್ಪಿಸಿಕೊಳ್ಳಿರಿ. ಕನಸನ್ನು ನೀವು ನೆನಪಿನಲ್ಲಿ ಇಡುವಿರಿ. ಹೂಡಿಕೆಯ ವಿಷಯದಲ್ಲಿ ಸ್ವಲ್ಪ ಹಿಂದೇಟು. ಖರ್ಚನ್ನು ನೀವು ಸ್ನೇಹಿತರ ಜೊತೆ ಸಮವಾಗಿ ಹಂಚಿಕೊಳ್ಳುವಿರಿ.

ಕನ್ಯಾ ರಾಶಿ:

ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ಗೆಲುವನ್ನು ಕಾಣಲು ಸೂಕ್ತ ಮಾಹಿತಿಯ ಕೊರತೆ ಕಾಣಿಸುತ್ತದೆ. ನಕಲಿ ದಾಖಲೆಗಳ ಅನಾವರಣ. ಅಪಮಾನವನ್ನು ಸಹಿಸಲಾಗದು. ಏಕಾಂತದಲ್ಲಿ ಇಂದು ನೆಮ್ಮದಿಯನ್ನು ಕಾಣಬಯಸುವಿರಿ. ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಇರುವುದು. ಮನೆಗೆ ಅತಿಥಿಗಳ ಆಗಮನ. ನಿಮಗೆ ಸಂತೋಷವಾಗುವುದು. ಕಳೆದುಕೊಂಡ ವಸ್ತುವಿನ ಬಗ್ಗೆ ಮೋಹವು ಹೆಚ್ಚಾಗುವುದು. ಹೊಸತನ್ನು ಏನನ್ನಾದರೂ ಮಾಡಬೇಕೆಂಬ ಬಯಕೆ ಬರುವುದು.

ತುಲಾ ರಾಶಿ:

ಎಲ್ಲದೂ ಗೊತ್ತು ಎಂಬ ಗತ್ತು ಎದ್ದು ಕಾಣುತ್ತಿದೆ. ಶ್ರಮದ ಸಾಧನೆಗೆ ತೃಪ್ತಿ ಇರುವುದು. ಇಂದು ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಉತ್ತಮ ಕಾರ್ಯವು ಸಿಗಲಿದೆ. ಗುರಿಯ ನಿರ್ಧಾರವಾಗದೇ ಇದ್ದರೆ ಇಂದು ನಿರ್ಧರಿಸಿ. ನಿಮ್ಮ ಬಹುಕಾಲ ಬಾಕಿಯಿರುವ ಕೆಲಸಗಳ ಬಗ್ಗೆ ನೆಮ್ಮದಿ ಇರದು. ಅವಕಾಶಗಳು ಮತ್ತೆ ಬಾರದು. ಭಾವನೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ. ಎಲ್ಲರದ್ದೂ ಒಂದಾದರೆ ನಿಮ್ಮದೇ ಒಂದು ದಾರಿಯಾಗಲಿದೆ. ಬಿಟ್ಟು ಬಿಟ್ಟು ಬರುವ ಅನಾರೋಗ್ಯದಿಂದ ನಿಮಗೆ ಮಾನಸಿಕ ಹಿಂಸೆ ಆಗುವುದು.

ವೃಶ್ಚಿಕ ರಾಶಿ:

ಹೂಡಿಕೆಯ ಮೇಲೆ ನಿಮಗೆ ಪೂರ್ಣ ವಿಶ್ವಾಸ ಬರಬಹುದು. ಇಂದಿನ ನಿಮ್ಮ ಘಟನೆಯು ಯಾರನ್ನೂ ಇಷ್ಟಪಡಲು ಆಗದು. ನಿಮ್ಮ ಸ್ವಭಾವವು ಇತರರಿಗೆ ಕಿರಿಕಿರಿಯನ್ನು ತಂದೀತು. ಹೊಸ ಆವಿಷ್ಕಾರಗಳ ಕಡೆ ನಿಮ್ಮ ಮನಸ್ಸಿರುವುದು. ಸಂಸಾರದಲ್ಲಿ ಯಾವುದೋ ವಿಚಾರಕ್ಕೆ ಜಗಳಕ್ಕೆ ಇಳಿಯಬೇಡಿ. ಶ್ರಮ ವಹಿಸಿ ಮಾಡಿದ ಕಾರ್ಯಕ್ಕೆ ಉತ್ತಮ ಫಲವು ಸಿಗಲಿದೆ. ನಿಮ್ಮವರನ್ನು ಸಂತೋಷಪಡಿಸಿರಿ. ಇಂದು ನಿಮಗೆ ಕಷ್ಟವಾದರೂ ತಾಳ್ಮೆಯಿಂದ ವ್ಯವಹರಿಸಿ. ಸ್ನೇಹಿತರ ಜೊತೆ ಹೆಚ್ಚು ಮೋಜಿನಲ್ಲಿ ಕಳೆಯುವಿರಿ.

ಧನು ರಾಶಿ:

ಮನೆಯ ಕಾರಣಕ್ಕೆ ಉದ್ಯೋಗದ ಕಿರಿಕಿರಿಯು ನಿಮ್ಮನ್ನು ಬಾಧಿಸದೆ ಇರದು. ಮನಸ್ಸಿನೊಳಗೆ ಹಲವು ಗೊಂದಲಗಳನ್ನು ಇಟ್ಟುಕೊಂಡು ಚಡಪಡಿಸುವಿರಿ. ಬಂಗಾರದ ಉದ್ಯಮದ ವಿಸ್ತರಣೆ ಸಾಧ್ಯವಾಗಲಿದೆ. ಇಂದು ನಿಮಗೆ ಏನಾದರೂ ವಿಶೇಷವಾದ ವಸ್ತುವು ಸಿಗಬಹುದು. ಪ್ರೇಮದಿಂದ ವಂಚನೆಯಾಗಬಹುದು. ಚಂಚಲವಾದ ಮನಸ್ಸನ್ನು ನೀವು ಒಂದೇ ಕಡೆ ನಿಲ್ಲಿಸುವುದು ಕಷ್ಟವಾದೀತು. ಇಂದು ಸ್ತ್ರೀಯರ ತಾಳ್ಮೆಗೆ ಪರೀಕ್ಷೆಯಾಗಬಹುದು.

ಮಕರ ರಾಶಿ:

ಆಕಸ್ಮಿಕ ಧನಲಾಭ ಹಾಗೂ ಖರ್ಚುಗಳು ಒಟ್ಟಿಗೇ ಆಗಲಿವೆ. ವಿವಾಹ ಯೋಗವು ಕೂಡಿಬರಲಿದೆ, ಅಲ್ಲಗಳೆಯುವುದು ಬೇಡ. ಕಳ್ಳರ ಭೀತಿಯಿಂದ ನಿಮಗೆ ಚಿಂತೆಯಾಗಬಹುದು. ಕ್ಷಣಕಾಲದ ಕೋಪವನ್ನು ನೀವು ನಿಯಂತ್ರಣವನ್ನು ಇಟ್ಟುಕೊಳ್ಳುವುದು ಅನಿವಾರ್ಯ. ಇಂದು ನಿಮ್ಮ ಸಹೋದರರು ಆರ್ಥಿಕ ಸಹಾಯವನ್ನು ಕೇಳಬಹುದು. ಯಾವುದನ್ನೂ ಬಯಸುವುದು ಬೇಡ. ಸ್ವಾಭಿಮಾನವನ್ನು ಬಿಟ್ಟು ವಿಚಲಿತರಾಗುವುದು ನಿಮ್ಮ ಸ್ವಭಾವ ಆಗಲಾರದು.

ಕುಂಭ ರಾಶಿ:

ಇಂದಿನ ಹಣಕಾಸಿನ ಬಿಕ್ಕಟ್ಟು ಮನಸ್ಸಿನ ವೇಗವನ್ನು ಹೆಚ್ಚಿಸುವುದು. ವಾಹನ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಳ್ಳಿ. ಸಣ್ಣ ವಿಚಾರಗಳೂ ನಿಮಗೆ ಸಮಸ್ಯೆಯಂತೆ ತೋರುವುದು. ನೀವು ಭಾವೋದ್ವೇಗದಲ್ಲಿ ನಿರ್ಧಾರ ತೆಗೆದುಕೊಂಡ ನಂತರ ಅನಂತರ ಪಶ್ಚಾತ್ತಾಪಪಡುವಿರಿ. ಅಮೂಲ್ಯ ವಸ್ತುಗಳು ಕಣ್ಮರೆಯಾಗುವ ಸಾಧ್ಯತೆಯಿದೆ. ಪ್ರಯೋಜನವಿಲ್ಲದೇ ನೀವು ಯಾರನ್ನೂ ಇಂದು ಮಾತನಾಡಿಸಲಾರಿರಿ. ಇಂದಿನ ನಿಮ್ಮ ಪ್ರಯಾಣವು ಬಹಳ ಖರ್ಚಿನದ್ದಾಗಲಿದೆ.

ಮೀನ ರಾಶಿ:

ಹಿತೈಷಿಗಳ ಬೆಂಬಲವೂ ನಿಮಗೆ ಅತ್ಯವಶ್ಯವಾಗಿ ಬೇಕು. ಇಂದು ಅಧಿಕ ಬಾಯಾರಿಕೆ ನಿಮಗಾಗಲಿದೆ. ರಾಜಕೀಯದಲ್ಲಿ ಅನಿರೀಕ್ಷಿತ ಬದಲಾವಣೆಯನ್ನು ನೀವು ಒಪ್ಪಿಕೊಳ್ಳಬೇಕು. ಇಂದು ನೀವು ನಿಮ್ಮವರಿಗೆ ಹೆಚ್ಚು ಖರ್ಚನ್ನು ಮಾಡಬೇಕಾದೀತು. ಹಿರಿಯ ವ್ಯಕ್ತಿಗಳ ಜೊತೆ ಇಂದು ಪ್ರಯಾಣ ಮಾಡುವಿರಿ. ಯಾರದೋ ಕಾರ್ಯಕ್ಕೆ ನೀವು ಶ್ರಮಿಸಬೇಕಾದೀತು. ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಬಹುದು. ದ್ವೇಷವನ್ನು ಮುಂದುವರಿಸುವುದು ನಿಮಗೆ ಇಷ್ಟವಾಗದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ವಾರ್ಷಿಕ : ವಸಂತ, ಚಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ರೇವತೀ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಪರಿಘ, ಕರಣ : ವಣಿಜ, 6 – 5 pm – 6 – 3 pm ಇಂದಿನ ಶುಭಾಶುಭ ಕಾಲ : ರಾಹು ಕಾಲ 10:53 – 12:26, ಯಮಗಂಡ ಕಾಲ 15:31 – 17:04, ಗುಳಿಕ ಕಾಲ 07:48 – 09:21

-ಲೋಹಿತ ಹೆಬ್ಬಾರ್-8762924271 (ಯಾವ ಅಪ್ಲಿಕೇಶನ್ ಮಾತ್ರ)



Source link

Leave a Reply

Your email address will not be published. Required fields are marked *