
ಧನಾಬಾದ್, ಏಪ್ರಿಲ್ 10: ಪ್ರೀತಿ(ಪ್ರೀತಿ) ಎಂಬುದು ಒಂದು ಮಾಯೆ, ಮನುಷ್ಯನನ್ನು ಯಾವ ಮಟ್ಟಕ್ಕೆ ಬೇಕಾದರೂ ಇಳಿಸುತ್ತೆ ಅಂತಾರೆ. ಆದರೆ ಧನ್‌ಬಾದ್‌ನ ಬಿಎಸ್‌ಎಸ್ (ಬಿಎಸ್‌ಎಸ್) ಮಹಿಳಾ ಕಾಲೇಜಿನ ಮುಂದೆ ನಡೆದ ಘಟನೆ ವಿದ್ಯಾರ್ಥಿನಿಯರಲ್ಲಿ ಮತ್ತು ಸಾರ್ವಜನಿಕರಲ್ಲಿ ಮಾತ್ರ ಭೀತಿ ಆವರಿಸಿದೆ. ಒಬ್ಬ ಹತಾಶ ಪ್ರೇಮಿ ತನ್ನ ಪ್ರೇಯಸಿಯ ಕ್ಷಮೆ ಕೇಳಲು ಇಡೀ ಕಾಲೇಜಿನ ದ್ವಾರವನ್ನೇ ಪೋಸ್ಟರ್‌ಗಳಿಂದ ತುಂಬಿಸಿದ ಘಟನೆ ಗುರುವಾರ (ಏಪ್ರಿಲ್ 9) ನಡೆದಿದೆ.
ಕಾಲೇಜಿನ ಮುಖ್ಯ ದ್ವಾರದ ಗೋಡೆಗಳ ಮೇಲೆ ಬಿಳಿ ಬಣ್ಣದ ದೊಡ್ಡ ಪೋಸ್ಟರ್‌ಗಳು ಪ್ರತ್ಯಕ್ಷವಾಗಿವೆ. ನನ್ನನ್ನು ಕ್ಷಮಿಸಿ ಡಿಂಪಿ, ನನ್ನಿಂದ ತಪ್ಪಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ, ನೀನು ನನಗೆ ತುಂಬಾ ಮುಖ್ಯ ಎಂಬ ಪೋಸ್ಟರ್‌ಗಳು ದಾರಿಹೋಕರ ಗಮನ ಸೆಳೆದವು.
ಕಾಲೇಜಿನ ಭದ್ರತಾ ಸಿಬ್ಬಂದಿ ಮತ್ತು ಪ್ಯೂನ್ ಈ ಪೋಸ್ಟರ್‌ಗಳನ್ನು ತೆಗೆದುಹಾಕಲು ಮುಂದಾದಾಗ, ಅಲ್ಲಿಯೇ ಹೊಂಚು ಹಾಕುತ್ತಿದ್ದ ಯುವಕನೊಬ್ಬ ಅಟ್ಟಹಾಸ ಮೆರೆದಿದ್ದಾನೆ. ಪೋಸ್ಟರ್‌ಗಳನ್ನು ಮುಟ್ಟಿದರೆ ಪರಿಣಾಮ ನೆಟ್ಟಗಿಲ್ಲ ಎಂದು ಗಾರ್ಡ್‌ಗಳಿಗೆ ಎಚ್ಚರಿಕೆ ನೀಡಿ ಗಲಾಟೆ ಮಾಡಿದ್ದಾನೆ. ಗದ್ದಲ ಕೇಳಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕರುಣಾ ಸಿಂಗ್ ಅವರು ಸ್ಥಳಕ್ಕೆ ಆಗಮಿಸಿದ್ದರು, ಆರೋಪಿ ಯುವಕ ಅಲ್ಲಿಂದ ಬೈಕ್ ಹತ್ತಿ ಪರಾರಿಯಾಗಿದ್ದಾನೆ.ನಂತರ ಸಿಬ್ಬಂದಿಗಳು ಎಲ್ಲಾ ಪೋಸ್ಟರ್‌ಗಳನ್ನು ಹರಿದು ಹಾಕಿದ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಮತ್ತಷ್ಟು ಓದಿ: ಪ್ರೀತಿ ವಿಚಾರ ಹುಡುಗಿ ಮನೆಗೆ ಗೊತ್ತಾಯ್ತು, ಅವ್ರು ಒಪ್ಪದಿದ್ರೆ ಮಗ ಏನಾದ್ರೂ ಮಾಡಿಕೊಂಡಾನು ಎಂದು ತಂದೆಯೊಂದಿಗೆ ಇದ್ರೂ ಉಳಿಸಲಾಗಲಿಲ್ಲ.
ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪ್ರಾಂಶುಪಾಲರು, ಇದು ಕೇವಲ ಪ್ರೇಮದ ವಿಷಯವಲ್ಲ, ವಿದ್ಯಾರ್ಥಿನಿಯರ ಸುರಕ್ಷತೆಯ ಪ್ರಶ್ನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇಂದು ಪೋಸ್ಟರ್ ಅಂಟಿಸಿದವನು ನಾಳೆ ಕಾಲೇಜಿನಲ್ಲಿ ಬಂದು ಅಹಿತಕರ ಕೃತ್ಯ ಎಸಗಬಹುದು. ಇಂತಹ ವ್ಯಕ್ತಿಗಳಿಂದ ವಿದ್ಯಾರ್ಥಿನಿಯರಿಗೆ ಅಪಾಯವಿದೆ ಎಂದು ಡಾ. ಕರುಣಾ ಸಿಂಗ್ ಹೇಳಿದ್ದಾರೆ.
ಘಟನೆಯ ಕುರಿತು ಧನ್ಬಾದ್ ಉಪ ಆಯುಕ್ತರು (DC) ಮತ್ತು ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ. ಶಾಲೆಯ ಸುತ್ತಮುತ್ತಲಿನ ಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಡಿಂಪಿ ಮತ್ತು ಆ ಹತಾಶ ಪ್ರೇಮಿ ಯಾರು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ