
ಭಾರತ ಚಿತ್ರರಂಗದಲ್ಲಿ (ಭಾರತೀಯ ಸಿನಿಮಾ) ಹಲವಾರು ಸೂಪರ್ ಸ್ಟಾರ್ ನಟರುಗಳಿದ್ದಾರೆ ಆದರೆ ಎಲ್ಲರಿಗಿಂತಲೂ ಭಿನ್ನ ಮತ್ತು ವರ್ಸಟೈಲ್ ಸೂಪರ್ ಸ್ಟಾರ್ ಮಮ್ಮುಟಿ. 74 ವರ್ಷ ವಯಸ್ಸಿನಲ್ಲಿ ಅವರು ಮೂರು-ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದು ಒಂದರ ಒಂದು ಭಿನ್ನ ರೀತಿಯ ಪಾತ್ರಗಳು, ಪ್ರಯೋಗಾತ್ಮಕ ಸಿನಿಮಾಗಳು. ಸೀರಿಯಲ್ ಕಿಲ್ಲರ್, ಸಲಿಂಗಿ, ರಾಕ್ಷಸ, ಮಗಳಿಗಾಗಿ ಪುರುಷ ಸಂಗಾತಿಯನ್ನು ಹುಡುಕುವ ತಂದೆ ಹೀಗೆ ಒಂದೊಂದು ಮತ್ತು ಇತರ ಸ್ಟಾರ್ ನಟರು ಭಿನ್ನ ಕಥೆಗಳನ್ನು ಕೇಳಲು ಸಹ ಒಪ್ಪದಂಥಹ ಸಿನಿಮಾಗಳಲ್ಲಿ ಮಮ್ಮುಟಿ ನಟಿಸುತ್ತಿದ್ದಾರೆ.
ಇದೀಗ ‘ಪೇಟ್ರಿಯಾಟ್’ ಹೆಸರಿನ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಮಮ್ಮುಟಿ ನಟಿಸಿದ್ದು, ಸಿನಿಮಾದ ಪ್ರಚಾರದ ವೇಳೆ ತಮ್ಮ ಪುತ್ರ, ಪ್ಯಾನ್ ಇಂಡಿಯಾ ಸ್ಟಾರ್ ನಟ ದುಲ್ಕರ್ ಸಲ್ಮಾನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನನ್ನ ಮಗ ನನಗೆ ಮೋಸ ಮಾಡಿದ್ದಾನೆ’
ಡೊಮಿನಿಕ್ ಅರುಣ್ ನಿರ್ದೇಶನದ ಸೂಪರ್ ಹೀರೋ ಚಿತ್ರ ‘ಲೋಕಃ ಅಧ್ಯಾಯ 1: ಚಂದ್ರ’ ಕಳೆದ ವರ್ಷ ಬಿಡುಗಡೆ ಬ್ಲಾಕ್ ಬಸ್ಟರ್ ಆಗುತ್ತಿದೆ. ಕಲ್ಯಾಣಿ ಪ್ರಿಯದರ್ಶನ್, ನಸ್ಲೆನ್ ಮತ್ತು ಸ್ಯಾಂಡಿ ಅಭಿನಯದ ಈ ಚಿತ್ರವನ್ನು ಮಮ್ಮುಟಿಯ ಪುತ್ರ, ನಟ ದುಲ್ಕರ್ ಸಲ್ಮಾನ್ ನಿರ್ಮಿಸಿದ್ದರು. ಈ ಚಿತ್ರದಲ್ಲಿ ಮಮ್ಮುಟ್ಟಿ ಅವರು ‘ಮೂತನ್’ ಎಂಬ ಪಾತ್ರಕ್ಕೆ ಧ್ವನಿ ನೀಡಿದ್ದರು. ಇತ್ತೀಚಿನ ಸಂದರ್ಶನದಲ್ಲಿ ಮಮ್ಮುಟ್ಟಿ ಈ ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರದಲ್ಲಿ ತಾವು ಇರುವುದೇ ತಮಗೆ ತಿಳಿದಿರಲಿಲ್ಲ ಎಂದು ಮಮ್ಮುಟ್ಟಿ ಹಾಸ್ಯಮಯವಾಗಿ ಹೇಳಿದ್ದಾರೆ. ‘ಆರಂಭದಲ್ಲಿ ದುಲ್ಕರ್ ಬರಲಿಲ್ಲ, ಬದಲಾಗಿ ಅವನ ಮ್ಯಾನೇಜರ್ ಮತ್ತು ಗೆಳೆಯ ಬಂದು ಕೇವಲ ಒಂದು ಧ್ವನಿ ನೀಡುವಂತೆ ಕೇಳಿದರು. ನಾನು ಬೇಡ ಎಂದು ಹೇಳಿದ್ದೆ, ಅಷ್ಟನ್ನೇ ಅವರು ರೆಕಾರ್ಡ್ ಮಾಡಿಕೊಂಡರು. ಚಿತ್ರವಾದಾಗ ಮಾತ್ರ ಅಲ್ಲಿರುವುದು ನಾನೇ ಮತ್ತು ಅಲ್ಲಿ ಕಂಡ ಕೈ ಕೂಡ ನನ್ನದೇ ಎಂದು ಹೇಳಿದರು. ನಿಜ ಹೇಳಬೇಕೆಂದರೆ ಅವರು ನನಗೆ ಮೋಸ ಮಾಡಿ ಆ ಪಾತ್ರ ಮಾಡಿದ್ದಾರೆ’ ಎಂದು ಮಮ್ಮುಟ್ಟಿ ವಿವರಿಸಿದ್ದಾರೆ.
ಇದನ್ನೂ ಓದಿ:ಸ್ಟಾರ್ ವಾರ್ ಗಳ ನಡುವೆ ಸೂಪರ್ ಸ್ಟಾರ್ ಮಮ್ಮುತಿಯ ಮಾತೊಮ್ಮೆ ಕೇಳಿ
ಎರಡನೇ ಭಾಗದಲ್ಲಿ ನಟಿಸಲು ಮಮ್ಮುಟ್ಟಿಯವರನ್ನು ಒಪ್ಪಿಸುವುದು ಕಷ್ಟ ಎಂದು ದುಲ್ಕರ್ ಹಿಂದೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಮ್ಮುಟ್ಟಿ, “ನಾನು ಸೀಕ್ವೆಲ್ನಲ್ಲಿ ನಟಿಸಲು ಒಪ್ಪುತ್ತೇನೆ, ನನ್ನ ಸಂಭಾವನೆಯ ಬಗ್ಗೆಯೂ ಅವರನ್ನು ಒಪ್ಪಿಸಲಾಯಿತು.
ಸಂದರ್ಶನದ ವೇಳೆ ವ್ಯಾಂಪೈರ್ ಪಾತ್ರ ಮಾಡುವ ಬಗ್ಗೆ ಕೇಳಿದಾಗ, ಮಮ್ಮುಟ್ಟಿ ನಗುತ್ತಾ ಅದು ‘ಸಸ್ಪೆನ್ಸ್’ ಎಂದು ಹೇಳಿದರು. ‘ಲೋಕ’ ಚಿತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್ ‘ಯಕ್ಷಿಣಿ’ ಪಾತ್ರ ಮಾಡಿದ್ದರು. ಅಂತ್ಯದಲ್ಲಿ ಟೊವಿನೋ ಥಾಮಸ್, ದುಲ್ಕರ್ ಸಲ್ಮಾನ್ ಮತ್ತು ಮಮ್ಮುಟ್ಟಿ (ಧ್ವನಿ ಮಾತ್ರ) ಅವರ ಪಾತ್ರಗಳನ್ನು ಪರಿಚಯಿಸಿ ಸೀಕ್ವೆಲ್ನ ಸುಳಿವು ಚಿತ್ರ ನೀಡಲಾಯಿತು. ಈ ಚಿತ್ರ ಜಾಗತಿಕವಾಗಿ ಸುಮಾರು 300 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಮಮ್ಮುಟ್ಟಿ ಅವರು ‘ಪೇಟ್ರಿಯಾಟ್’ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದಲ್ಲಿ ಮಮ್ಮುಟಿಯ ಜೊತೆಗೆ ಮಲಯಾಳಂನ ಮತ್ತೊಬ್ಬ ಸೂಪರ್ ಸ್ಟಾರ್ ಮೋಹನ್ ಲಾಲ್, ಫಹಾದ್ ಫಾಸಿಲ್ ಮತ್ತು ನಯನತಾರಾ ಸಹ ನಟಿಸಿದ್ದಾರೆ. ಸಿನಿಮಾ ಮೇ 1ರಂದು ಬಿಡುಗಡೆ ಆಗಲಿದೆ. ಹಲವಾರು ವರ್ಷಗಳ ಬಳಿಕ ಮಮ್ಮುಟಿ ಮತ್ತು ಮೋಹನ್ ಲಾಲ್ ಒಟ್ಟಿಗೆ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ