
ಕೇರಳ, ಏ.10: ಸಂಜು ಸ್ಯಾಮ್ಸನ್ (ಸಂಜು ಸ್ಯಾಮ್ಸನ್) ಕ್ರೀಡಾ ಸಾಮ್ರಾಜ್ಯದ ಯುವ ಆಟಗಾರ, ಸೈಲೆಂಟ್ ಆಗಿರುವ ಇವರು, ಒಳ್ಳೆಯ ಮನಸ್ಸಿನ ವ್ಯಕ್ತಿ, ಒಂದು ದಿನವೂ ತಾಳ್ಮೆ ಕಳೆದುಕೊಂಡಿಲ್ಲ. ಎಲ್ಲವನ್ನು ಕೂಲ್ ಆಗಿ ನಿಭಾಯಿಸಿದ್ದಾರೆ, ಇದೀಗ ಇವರ ಈ ಗುಣಕ್ಕೆ ಒಂದು ಒಳ್ಳೆಯ ಉದಾಹರಣೆ ಇಲ್ಲಿದೆ ನೋಡಿ. ಐಪಿಎಲ್ 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುತ್ತಿರುವ ಸಂಜು ಸ್ಯಾಮ್ಸನ್, ಸಾಲು ಸಾಲು ಸೋಲಿನ ನಂತರವೂ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಇದೀಗ ತಮ್ಮ ಗುಣದಿಂದ ಅಭಿಮಾನಗಳಿಗೆ ಮತ್ತಷ್ಟು ಇಷ್ಟವಾಗಿದ್ದಾರೆ. ಇವರು ಇತ್ತೀಚಿಗೆ ಕೇರಳದಲ್ಲಿ ಪ್ರಯಾಣಿಸುತ್ತಿದ್ದಾಗ ತಮ್ಮ ಅಭಿಮಾನಿಯೊಬ್ಬರ ಸಂಕಷ್ಟಕ್ಕೆ ಸ್ಪಂದಿಸಿದ ಸುದ್ದಿ ಬಂದಿದೆ.
ಸಂಜು ಸ್ಯಾಮ್ಸನ್ ಅವರು ಕೋಝಕ್ಕೋಡ್‌ನಿಂದ ಕೊಯಮತ್ತೂರಿಗೆ ಪ್ರಯಾಣಿಸುತ್ತಿದ್ದರು. ಮುಂಡೂರು-ತೂತ ರಸ್ತೆಯ ಪುಂಚಪ್ಪಾಡಂ ಬಳಿ ಫೋನ್ ಕರೆ ಮಾಡಲು ತಮ್ಮ ಕಾರನ್ನು ನಿಲ್ಲಿಸಿದ್ದರು. ಈ ವೇಳೆ ಕೇಬಲ್ ಟೆಕ್ನಿಷಿಯನ್ ಶಬರೀಶ್ ಎಂಬುವವರು ತಮ್ಮ ಸ್ನೇಹಿತನೊಂದಿಗೆ ಪ್ರದರ್ಶನಕ್ಕೆ ಹೋಗುತ್ತಾರೆ. ಕಾರಿನಲ್ಲಿದ್ದ ವ್ಯಕ್ತಿ ಸಂಜು ಸ್ಯಾಮ್ಸನ್ ಎಂದು ತಿಳಿದ ಅಭಿಮಾನಿಗಳು ಅವರ ಬಳಿ ತೆರಳಿ ಮಾತನಾಡಿದರು. ಸಂಜು ಅತ್ಯಂತ ಪ್ರೀತಿಯಿಂದ ಅವರ ಕ್ಷೇಮ ವಿಚಾರಿಸಿ, ಸೆಲ್ಫಿ ನೀಡಲು ಒಪ್ಪಿದರು. ಶಬರೀಶ್ ಸೆಲ್ಫಿ ತೆಗೆಯುವಾಗ ಅವರ ಫೋನ್‌ನ ಡಿಸ್‌ಪ್ಲೇ ಸಂಪೂರ್ಣವಾಗಿ ಒಡೆದಿರುವುದನ್ನು ಸಂಜು ಗಮನಿಸಿದ್ದಾರೆ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
ಸಂಜು ಸ್ಯಾಮ್ಸನ್ – ಚಿನ್ನದ ಹೃದಯ
ಮುಂಬರುವ ರಾಜ್ಯ ಚುನಾವಣೆಗೆ ಮತ ಚಲಾಯಿಸಲು ಸಂಜು ಇದೀಗ ಕೇರಳದಲ್ಲಿದ್ದಾರೆ. ಅಭಿಮಾನಿ ಹುಡುಗನೊಬ್ಬ ಅವರನ್ನು ಭೇಟಿಯಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ್ದಾನೆ. ಸಂಜು ತನ್ನ ಫೋನ್ನಲ್ಲಿ ಡಿಸ್‌ಪ್ಲೇ ಲೈನ್ಗಳನ್ನು ಹೊಂದಿದ್ದನ್ನು ಗಮನಿಸಿ ಅವನ ಫೋನ್ಗೆ ಏನಾಯಿತು ಎಂದು ಕೇಳಿದನು. ಹುಡುಗ ಹೇಳಿದನು … pic.twitter.com/eNwsBORVnK
— ದೀಪು (@deepu_drops) ಏಪ್ರಿಲ್ 8, 2026
ಕಾರಿನಲ್ಲಿದ್ದ ವ್ಯಕ್ತಿ ಸಂಜು ಸ್ಯಾಮ್ಸನ್ ಎಂದು ತಿಳಿದ ಅಭಿಮಾನಿಗಳು ಅವರ ಬಳಿ ತೆರಳಿ ಮಾತನಾಡಿದರು. ಸಂಜು ಅತ್ಯಂತ ಪ್ರೀತಿಯಿಂದ ಅವರ ಕ್ಷೇಮ ವಿಚಾರಿಸಿ, ಸೆಲ್ಫಿ ನೀಡಲು ಒಪ್ಪಿದರು. ಶಬರೀಶ್ ಸೆಲ್ಫಿ ತೆಗೆಯುವಾಗ ಅವರ ಫೋನ್‌ನ ಡಿಸ್‌ಪ್ಲೇ ಸಂಪೂರ್ಣವಾಗಿ ಒಡೆದಿರುವುದನ್ನು ಸಂಜು ಗಮನಿಸಿದರು. ಅಭಿಮಾನಿಯ ಫೋನ್ ಸ್ಥಿತಿ ನೋಡಿ ಮರುಗಿದ ಸಂಜು, ತಕ್ಷಣ ತಮ್ಮ ಕಾರಿನ ಹಿಂಭಾಗದಲ್ಲಿದ್ದ ಸುಮಾರು 40,000 ರೂ. ಮೌಲ್ಯದ ಹೊಸ ಸ್ಮಾರ್ಟ್‌ಫೋನ್ ಅನ್ನು ಶಬರೀಶ್‌ಗೆ ಉಡುಗೊರೆಯಾಗಿ ನೀಡಲಾಗಿದೆ. ಈ ಅನಿರೀಕ್ಷಿತ ಉಡುಗೊರೆಯಿಂದ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇದನ್ನೂ ಓದಿ: RCB v/s RR: ತವರಿನಿಂದ ಆರ್ಸಿಬಿಗೆ ಮೊದಲ ಪಂದ್ಯ, ಹೇಗಿದೆ ಉಭಯ ತಂಡಗಳ ಬಲಾಬಲ? ಇಲ್ಲಿದೆ ಫುಲ್ ಡಿಟೇಲ್ಸ್
ಟಿ20 ಪರ2026ರ ಫೈನಲ್‌ನಲ್ಲಿ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಜು, ಪ್ರಸ್ತುತ ಐಪಿಎಲ್‌ನಲ್ಲಿ ಸಿಎಸ್‌ಕೆ ಸತತ ಮೂರು ಪಂದ್ಯಗಳಲ್ಲಿ (6, 7, 9 ರನ್) ವೈಫಲ್ಯ ಅನುಭವಿಸಿದ್ದಾರೆ. ಸಿಎಸ್‌ಕೆ ತಂಡ ಕೂಡ ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದು, ಏಪ್ರಿಲ್ 11ರ ಶನಿವಾರದಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲಿದೆ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
