Job Horoscope: ನಿಮ್ಮ ರಾಶಿಗನುಗುಣವಾಗಿ ಏಪ್ರಿಲ್ 12 ರಿಂದ 18ರ ವರೆಗಿನ ಉದ್ಯೋಗ ಭವಿಷ್ಯ ತಿಳಿಯಿರಿ

Job Horoscope: ನಿಮ್ಮ ರಾಶಿಗನುಗುಣವಾಗಿ ಏಪ್ರಿಲ್ 12 ರಿಂದ 18ರ ವರೆಗಿನ ಉದ್ಯೋಗ ಭವಿಷ್ಯ ತಿಳಿಯಿರಿ


ಉದ್ಯೋಗ ಜಾತಕ: ನಿಮ್ಮ ರಾಶಿಗನುಗುಣವಾಗಿ ಏಪ್ರಿಲ್ 12 ರಿಂದ 18 ರ ಉದ್ಯೋಗ ಭವಿಷ್ಯ ತಿಳಿಯಿರಿ

ಏಪ್ರಿಲ್ 12 ರಿಂದ 18 ರ ಅವಧಿಯಲ್ಲಿ ಸಾಡೇ ಸಾಥ್ ಶನಿ ಮೀನ ರಾಶಿಯಲ್ಲಿ ಹಾಗೂ ಗುರು ಮಿಥುನ ರಾಶಿಯಲ್ಲಿದ್ದಾನೆ. ಈ ಗ್ರಹಸ್ಥಿತಿಗಳು ಉದ್ಯೋಗದ ಮೇಲೆ ಬೀರುವ ಅನೇಕ ಪ್ರಭಾವಗಳನ್ನು ಬೀರಲಿವೆ.

ಮೇಷ:

ಉದ್ಯೋಗದಲ್ಲಿ ಹಠಾತ್ ಬದಲಾವಣೆ ಸಾಧ್ಯತೆ. ಹಿರಿಯ ಅಧಿಕಾರಿಗಳಿಂದ ಒತ್ತಡ ಬರಬಹುದು. ಆದರೆ ನಿಮ್ಮ ಸಂವಹನ ಕಲೆ ಮತ್ತು ಶ್ರಮದಿಂದ ವಾರದ ಕೊನೆಯಲ್ಲಿ ಉತ್ತಮ ಲಾಭ ಮತ್ತು ಕಚೇರಿಯಲ್ಲಿ ಸ್ಥಾನಮಾನವನ್ನು ಪಡೆದುಕೊಳ್ಳಿ.

ವೃಷಭ:

ವೃತ್ತಿಯಲ್ಲಿ ಬಹಳ ಸಮಯದಿಂದ ನಿರೀಕ್ಷಿಸುತ್ತಿದ್ದ ಬಡ್ತಿ ಸಿಗುವ ಸಮಯ. ಆರ್ಥಿಕವಾಗಿ ಲಾಭದಾಯಕ ದಿನಗಳು. ಹೊಸ ಉದ್ಯೋಗದ ಆಫರ್‌ಗಳು ನಿಮ್ಮನ್ನು ಹುಡುಕಿ ಬರಲಿವೆ. ಆತ್ಮವಿಶ್ವಾಸದಿಂದ ಹೆಜ್ಜೆ ಇಡಿ, ಯಶಸ್ಸು ನಿಮ್ಮದಾಗಲಿದೆ.

ಮಿಥುನ:

ನಿಮ್ಮ ರಾಶಿಯಲ್ಲೇ ಗುರು ಉದ್ಯೋಗದಲ್ಲಿ ಹೊಸ ಆಯಾಮ ತೆರೆದುಕೊಳ್ಳಲಿದೆ. ಸೃಜನಾತ್ಮಕ ಕೆಲಸಗಳಿಗೆ ಮನ್ನಣೆ ಸಿಗಲಿದೆ. ವ್ಯಾಪಾರಸ್ಥರಿಗೆ ಲಾಭದಾಯಕ ವಾರವಿದು. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಿ.

ಕರ್ಕಾಟಕ:

ದೂರದ ಪ್ರಯಾಣದಿಂದ ವೃತ್ತಿಜೀವನದಲ್ಲಿ ಲಾಭದಾಯಕ. ಧಾರ್ಮಿಕ ಅಥವಾ ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಇದು ಅತ್ಯಂತ ಶುಭ ಕಾಲ. ಭಾಗ್ಯೋದಯವಾಗುವ ಸೂಚನೆಗಳು, ಮೇಲಧಿಕಾರಿಗಳ ಸಂಪೂರ್ಣ ಸಹಕಾರ ನಿಮಗಿರುತ್ತದೆ.

ಸಿಂಹ:

ಕೆಲಸದ ಸ್ಥಳದಲ್ಲಿ ಶತ್ರುಗಳ ಕಾಟವಿರಬಹುದು, ಜಾಗರೂಕರಾಗಿರಿ. ಹಠಾತ್ ವರ್ಗಾವಣೆಯ ಯೋಗವಿದೆ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಹಿರಿಯರ ಸಲಹೆ ಪಡೆಯಿರಿ. ಆರೋಗ್ಯದ ಕಡೆಗೂ ಸ್ವಲ್ಪ ಗಮನ ನೀಡುವುದು ಅನಿವಾರ್ಯ.

ಕನ್ಯಾ:

ಪಾಲುದಾರಿಕೆ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರುತ್ತದೆ. ಸಾರ್ವಜನಿಕ ಸಂಪರ್ಕ ಹೊಂದಿರುವ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ನಿಮ್ಮೊಂದಿಗೆ ಇರಲಿದೆ, ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಇದು ಅತ್ಯಂತ ಸೂಕ್ತವಾದ ಸಮಯವಾಗಿದೆ.

ತುಲಾ:

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಶುಭ ವಾರ್ತೆ ಇದೆ. ಉದ್ಯೋಗದಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಯಲಿವೆ. ಕಠಿಣ ಪರಿಶ್ರಮದಿಂದ ಮಾತ್ರ ತಲುಪಲು ಸಾಧ್ಯ. ಸಾಲದ ಬಾಧೆಗಳಿಂದ ಮುಕ್ತಿ ಪಡೆಯಲು ದಾರಿ ಗೋಚರಿಸುತ್ತದೆ.

ವೃಶ್ಚಿಕ:

ಬುದ್ಧಿವಂತಿಕೆಯಿಂದ ಕಠಿಣ ಸವಾಲುಗಳನ್ನು ಎದುರಿಸುವಿರಿ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ವೇದಿಕೆ ಸಿಗಲಿದೆ. ಉದ್ಯೋಗ ಬದಲಾವಣೆಗೆ ಇದು ಪೂರಕ ಸಮಯವಲ್ಲ, ಇರುವ ಕಡೆಯೇ ನಿಮ್ಮ ಶಕ್ತಿ ಪ್ರದರ್ಶಿಸಿ ಜಯಿಸಿ.

ಧನು:

ವೃತ್ತಿಯಲ್ಲಿ ಸುಧಾರಣೆ ಕಂಡುಬರುತ್ತದೆ. ಭೂಮಿ ಅಥವಾ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಲಾಭ. ಮನೆಯಿಂದಲೇ ಕೆಲಸ ಮಾಡುವವರಿಗೆ ಕೆಲಸದ ಒತ್ತಡ ಹೆಚ್ಚಾಗಿರಬಹುದು. ಸ್ಥಿರವಾದ ಸ್ಥಿತಿಯನ್ನು ಕಾಪಾಡಿಕೊಳ್ಳಿ.

ಮಕರ:

ನಿಮ್ಮ ಪರಾಕ್ರಮದಿಂದ ಕಷ್ಟದ ಕೆಲಸಗಳನ್ನು ಸುಲಭವಾಗಿ ಮುಗಿಸಿ. ಲೇಖಕರು ಮತ್ತು ಪತ್ರಕರ್ತರಿಗೆ ಶುಭ ಕಾಲ. ಕಿರಿಯ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸಿಗಲಿದೆ. ಆರ್ಥಿಕವಾಗಿ ಈ ವಾರ ಧನ ಲಾಭದ ಸೂಚನೆಗಳಿವೆ.

ಕುಂಭ:

ಮಾತಿನ ಮೇಲೆ ನಿಗಾ ಇರಲಿ, ಕಚೇರಿಯಲ್ಲಿ ವಾದಗಳನ್ನು ತಪ್ಪಿಸಿ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರ ಅಗತ್ಯ. ಕುಟುಂಬದ ವ್ಯವಹಾರಗಳನ್ನು ವೃತ್ತಿಯೊಂದಿಗೆ ಬೆರೆಸಬೇಡಿ. ತಾಳ್ಮೆಯಿಂದ ಕೆಲಸ ಮಾಡಿದರೆ ವಾರಾಂತ್ಯಕ್ಕೆ ಶುಭ ಫಲ ದೊರೆಯಲಿದೆ.

ಮೀನ:

ರಾಶಿಯಲ್ಲಿ ಶನಿ ಕೆಲಸದಲ್ಲಿ ಗೊಂದಲವಿರಬಹುದು. ಶಿಸ್ತುಬದ್ಧವಾಗಿ ಕೆಲಸ ಮಾಡುವುದು ಅನಿವಾರ್ಯ. ಅತಿಯಾದ ಆಲೋಚನೆ ಬಿಟ್ಟು ಕರ್ತವ್ಯದ ಮೇಲೆ ಗಮನವಿಡಿ. ಧೈರ್ಯದಿಂದ ಕೆಲಸ ಮಾಡಿದರೆ ಅಡೆತಡೆಗಳು ದೂರವಾಗುತ್ತವೆ.

– ಲೋಹಿತ ಹೆಬ್ಬಾರ್ – 8762924271



Source link

Leave a Reply

Your email address will not be published. Required fields are marked *