Chanakya Niti: ಈ 3 ವಿಷಯವನ್ನು ರಹಸ್ಯವಾಗಿಡುವುದು ಬುದ್ಧಿವಂತರ ಲಕ್ಷಣ

Chanakya Niti: ಈ  3 ವಿಷಯವನ್ನು ರಹಸ್ಯವಾಗಿಡುವುದು ಬುದ್ಧಿವಂತರ ಲಕ್ಷಣ

ಎಲ್ಲವನ್ನೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಇಂದಿನ ಕಾಲದಲ್ಲಿ ಈ ಪಾಠವು ಇನ್ನಷ್ಟು ಮುಖ್ಯವಾಗುತ್ತದೆ. ಜಗತ್ತಿಗೆ ಎಲ್ಲವನ್ನೂ ಹೇಳದವನು ಬುದ್ಧಿವಂತ ವ್ಯಕ್ತಿ.

ಚಾಣಕ್ಯನ ಪ್ರಕಾರ, ಕೆಲವು ವಿಷಯಗಳನ್ನು ರಹಸ್ಯವಾಗಿ ಅಥವಾ ಸೀಕ್ರೇಟ್ ಆಗಿಡುವುದು ಬುದ್ಧಿವಂತರ ಲಕ್ಷಣ. ಒಂದು ವೇಳೆ ಈ ವಿಷಯಗಳನ್ನ ಎಲ್ಲರ ಮುಂದೆ ಹೇಳಿಕೊಂಡರೆ ಜನರ ಕಣ್ಣುಗಳು ಮತ್ತು ಹಸ್ತಕ್ಷೇಪವು ಆ ವಿಷಯವನ್ನೇ ದೊಡ್ಡದು ಮಾಡಿ ಸಮಸ್ಯೆ ತಂದೊಡ್ಡಬಹುದು.

ಎಲ್ಲವನ್ನೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಇಂದಿನ ಕಾಲದಲ್ಲಿ ಈ ಪಾಠವು ಇನ್ನಷ್ಟು ಮುಖ್ಯವಾಗುತ್ತದೆ. ಜಗತ್ತಿಗೆ ಎಲ್ಲವನ್ನೂ ಹೇಳದವನು ಬುದ್ಧಿವಂತ ವ್ಯಕ್ತಿ. ಹಾಗಾದರೆ ರಹಸ್ಯವಾಗಿಟ್ಟು ಬುದ್ಧಿವಂತನೆಂದು ಅನಿಸಿಕೊಳ್ಳುವವನು ಯಾವ ಮೂರು ವಿಷಯಗಳನ್ನು ಹೇಳಬಾರದು ಅಥವಾ ಹೇಳೋದಿಲ್ಲ ನೋಡೋಣ.

ನೀವು ಯಾರೊಂದಿಗಾದರೂ ಪ್ರೇಮ ಸಂಬಂಧದಲ್ಲಿದ್ದರೆ, ಅದನ್ನು ಎಲ್ಲರ ಮುಂದೆ ಹೇಳುವುದು ಅನಿವಾರ್ಯವಲ್ಲ. ಸಂಬಂಧವು ಬಲವಾಗುವವರೆಗೆ ಅದನ್ನು ರಹಸ್ಯವಾಗಿಡುವುದು ಉತ್ತಮ. ಕೆಲವೊಮ್ಮೆ ಹೇಳಿಕೊಳ್ಳುವುದು ಸಂಬಂಧದಲ್ಲಿ ಸಮಸ್ಯೆಗಳನ್ನು ತರುತ್ತವೆ. ಬುದ್ಧಿವಂತರು ತಮ್ಮ ಪ್ರೀತಿಯನ್ನು ಸಂಪೂರ್ಣವಾಗಿ ಕನ್‌ಫರ್ಮ್ ಆಗುವವರೆಗೆ ರಹಸ್ಯವಾಗಿಡುತ್ತಾರೆ.

ಕೆಲವೊಮ್ಮೆ ಮನೆಯಲ್ಲಿ ಜಗಳಗಳು ಅಥವಾ ಸಮಸ್ಯೆಗಳು ಉಂಟಾಗಬಹುದು. ಆದರೆ ಇವುಗಳನ್ನು ಹೊರಗಿನವರಿಗೆ ಹೇಳಬಾರದು. ನೀವು ಮನೆಯ ವಿಷಯಗಳನ್ನು ಇತರರಿಗೆ ಹೇಳಿದರೆ ಜನರು ನಿಮ್ಮನ್ನು ಗೇಲಿ ಮಾಡಬಹುದು. ಚಾಣಕ್ಯನು ಮನೆಯ ವಿಷಯಗಳನ್ನು ಮನೆಯಲ್ಲಿಯೇ ಪರಿಹರಿಸಿಕೊಳ್ಳಬೇಕೆಂದು ಹೇಳುತ್ತಿದ್ದನು.

ನಿಮ್ಮ ಸ್ನೇಹಿತನೊಬ್ಬ ನಿಮ್ಮೊಂದಿಗೆ ಒಂದು ರಹಸ್ಯವನ್ನು ಹಂಚಿಕೊಂಡರೆ, ನೀವು ಅದನ್ನು ಇತರರಿಗೆ ಹೇಳಬಾರದು. ಸ್ನೇಹ ಎಂದರೆ ನಂಬಿಕೆ. ನೀವು ಆ ವಿಷಯವನ್ನು ಯಾರಿಗಾದರೂ ಹೇಳಿದರೆ, ಆ ಸ್ನೇಹಿತನ ನಂಬಿಕೆ ಮುರಿಯಬಹುದು. ಬುದ್ಧಿವಂತರು ಇತರರು ಹೇಳಿದ ಮಾತುಗಳನ್ನು ತಮ್ಮಲ್ಲಿಯೇ ಬಚ್ಚಿಟ್ಟುಕೊಳ್ಳುತ್ತಾರೆ.

Source link

Leave a Reply

Your email address will not be published. Required fields are marked *