ಎಡಿಬಿ ವರದಿ: ಭಾರತದ ಜಿಡಿಪಿ ಬೆಳವಣಿಗೆ 2025ರಲ್ಲಿ ಶೇ. 6.9, 2027ರಲ್ಲಿ ಶೇ. 7.3 ಅಂದಾಜು

ಎಡಿಬಿ ವರದಿ: ಭಾರತದ ಜಿಡಿಪಿ ಬೆಳವಣಿಗೆ 2025ರಲ್ಲಿ ಶೇ. 6.9, 2027ರಲ್ಲಿ ಶೇ. 7.3 ಅಂದಾಜು


ಎಡಿಬಿ ವರದಿ: ಭಾರತದ ಜಿಡಿಪಿ ಬೆಳವಣಿಗೆ 2025ರಲ್ಲಿ ಶೇ. 6.9, 2027ರಲ್ಲಿ ಶೇ. 7.3 ಅಂದಾಜು

ಜನವರಿ, ಏಪ್ರಿಲ್ 10: ಜಾಗತಿಕ ತುಮುಲಗಳು, ಬಿಕ್ಕಟ್ಟುಗಳ ಮಧ್ಯೆ ಭಾರತದ ಆರ್ಥಿಕತೆ (ಭಾರತೀಯ ಆರ್ಥಿಕತೆ) ಉತ್ತಮ ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯಿದೆ. ಈ ವರ್ಷ ನಿರೀಕ್ಷಿತ ಅಭಿವೃದ್ಧಿ ಕಾಣದಿದ್ದರೂ ಒಟ್ಟಾರೆಯಾಗಿ ಸಮಾಧಾನಕರ ಬೆಳವಣಿಗೆ ಪಡೆಯಬಹುದು ಎಂದು ಅನೇಕ ಏಜೆನ್ಸಿಗಳು ಅಭಿಪ್ರಾಯಪಟ್ಟಿವೆ. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನ (ಎಡಿಬಿ) ಇತ್ತೀಚಿನ ವರದಿಯಲ್ಲಿ 2026 ಮತ್ತು 2027ರ ವರ್ಷಕ್ಕೆ ಭಾರತದ ಜಿಡಿಪಿ ಎಷ್ಟು ಬೆಳೆಯಬಹುದು ಎಂದು ಅಂದಾಜಿಸಿದೆ.

ಏಪ್ರಿಲ್ ತಿಂಗಳ ಏಷ್ಯಾನ್ ಡೆವಲಪ್ಮೆಂಟ್ ಔಟ್‌ಲುಕ್ (ಎಡಿಒ) ವರದಿ ಪ್ರಕಾರ, 2026ರ ಕ್ಯಾಲೆಂಡರ್‌ನಿಂದ ಭಾರತದ ಜಿಡಿಪಿ ಬೆಳವಣಿಗೆ ಶೇ. 6.9ಕ್ಕೆ ಮಿತಿಗೊಳ್ಳಬಹುದು. ಆದರೆ, 2027ರಲ್ಲಿ ಚೇತರಿಕೆ ಕಂಡು ಶೇ. 7.3 ಬೆಳವಣಿಗೆಯನ್ನು ದಾಖಲಿಸಬಹುದು ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ. 2025ರ ಕ್ಯಾಲಂಡರ್ ಭಾರತ ಶೇ. 7.6ರಷ್ಟು ಜಿಡಿಪಿ ಬೆಳವಣಿಗೆ ಕಂಡಿತ್ತು.

ಇದನ್ನೂ ಓದಿ: ಭಾರತ ಶೇ 7.8, ಅಮೆರಿಕ ಶೇ. 0.5; ಆರ್ಥಿಕ ಬೆಳವಣಿಗೆಯ ವೇಗದಲ್ಲಿ ಅಜಗಜಾಂತರ

ಏಷ್ಯಾದ ಒಟ್ಟಾರೆ ಬೆಳವಣಿಗೆ ಹೇಗಿರಬಹುದು?

ಎಡಿಬಿ ಪ್ರಕಾರ ಏಷ್ಯಾ ಪೆಸಿಫಿಕ್ ಪ್ರದೇಶದ ಒಟ್ಟಾರೆ ಬೆಳವಣಿಗೆ 2026ರಲ್ಲಿ ಶೇ. 5.1ಕ್ಕೆ ನಿಲ್ಲಬಹುದು. 2025 ರಲ್ಲಿ ಶೇ. 5.4 ಬೆಳವಣಿಗೆ ಈ ವರ್ಷ ಏಷ್ಯಾದ ಒಟ್ಟಾರೆ ಅಭಿವೃದ್ಧಿ ಸ್ವಲ್ಪ ನಿಧಾನಗೊಳ್ಳಲಿದೆ. 2027ರಲ್ಲೂ ಈ ಪ್ರದೇಶವು ಶೇ. 5.1ರಷ್ಟು ಮಾತ್ರ ಬೆಳವಣಿಗೆ ದಾಖಲಿಸಲಿದೆ ಎಂದು ಎಡಿಬಿ ಹೇಳಿದೆ. ಈ ಮಧ್ಯೆ ಭಾರತದಂತಹ ಕೆಲವು ಏಷ್ಯನ್ ದೇಶಗಳು ಸರಾಸರಿಗಿಂತ ಹೆಚ್ಚು ಪ್ರಗತಿ ಹೊಂದುವ ಸಾಧ್ಯತೆಯಿದೆ.

ಕುತೂಹಲವೆಂದರೆ ಮಾರ್ಚ್ 10 ರಂದು ವಾತಾವರಣದ ಆಧಾರದ ಮೇಲೆ ಈ ಭವಿಷ್ಯ ನುಡಿದಿದೆ. ಇರಾನ್ ಯುದ್ಧ ಫೆಬ್ರುವರಿ 28ರಂದು ಶುರುವಾಗಿತ್ತು. ಯುದ್ಧ ತೀರಾ ಮುಂದುವರಿಯಬಹುದು ಎಂಬ ಕಲ್ಪನೆ ಇಲ್ಲದೇ 2026 ಮತ್ತು 2027 ರ ಆರ್ಥಿಕ ಬೆಳವಣಿಗೆಯನ್ನು ಎಡಿಬಿಯ ಆರ್ಥಿಕ ತಜ್ಞರು ಅಂದಾಜು ಮಾಡಿದ್ದಾರೆ. ಆದರೆ, ಯುದ್ದ ದೀರ್ಘಾವಧಿ ಮುಂದುವರಿದರೆ ಅಪಾಯ ಇದೆ ಎಂಬ ಎಚ್ಚರಿಕೆಯನ್ನು ಈ ವರದಿಯಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಭಾರತಕ್ಕೆ ಪೆಟ್ರೋಲ್, ಡೀಸಲ್ ಸಮಸ್ಯೆ ವಕ್ಕರಿಸಲಿಲ್ಲ ಯಾಕೆ? ಸರ್ಕಾರದ ಈ ಕೆಲ ಕ್ರಮಗಳೇ ಕಾರಣವಾ?

ಇರಾನ್ ಯುದ್ಧವು ಒಂದು ತಿಂಗಳಿಗೂ ಹೆಚ್ಚು ಕಾಲ ಮುಂದುವರಿದಿದ್ದು ಜಾಗತಿಕವಾಗಿ ತಲ್ಲಣಗೊಂಡಿದೆ. ಪ್ರಮುಖವಾಗಿ ಗಲ್ಫ್ ತೈಲದ ಮೇಲೆ ಅವಲಂಬಿತವಾಗಿತ್ತು ಏಷ್ಯಾನ್ ದೇಶಗಳಿಗೆ ಈ ಒಂದು ತಿಂಗಳು ಬಹಳ ಹೊಡೆತ ಕೊಟ್ಟಿದೆ. ಭಾರತದ ತೈಲ ಮತ್ತು ಅನಿಲ ಪೂರೈಕೆ ಜಾಲ ಹೆಚ್ಚಿಸಿದ ತಕ್ಕಮಟ್ಟಿಗೆ ಪರಿಸ್ಥಿತಿ ನಿಭಾಯಿಸಲು ಯಶಸ್ವಿಯಾಗಿದೆ. ಒಂದು ವೇಳೆ 15 ದಿನಗಳ ನಂತರ ಕದನವಿರಾಮದ ನಂತರ ಮತ್ತೆ ಯುದ್ಧ ಶುರುವಾದರೆ ಪರಿಸ್ಥಿತಿ ನಿಜಕ್ಕೂ ಬಿಗಡಾಯಿಸಬಹುದು ಎಂದು ಅನೇಕ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *