
ಬೆಂಗಳೂರು, ಏಪ್ರಿಲ್ 10: ಕೊಬ್ಬರಿ ಬೆಲೆ ದಾಖಲೆಯ ಮಟ್ಟದಲ್ಲಿ ಏರಿಕೆ, ಒಂದು ಕ್ವಿಂಟಾಲ್ ಕೊಬ್ಬರಿ ದರ ಸುಮಾರು 32 ಸಾವಿರ ರೂಪಾಯಿಗೆ ತಲುಪಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಕ್ವಿಂಟಾಲ್‌ಗೆ 8 ರಿಂದ 10 ರೂಪಾಯಿ ಆಗಿದೆ. ನುಸಿಪೀಡೆ ಮತ್ತು ವಿವಿಧ ರೋಗಗಳಿಂದ ತೀವ್ರ ತೊಂದರೆ ಅನುಭವಿಸುತ್ತಿರುವ ರೈತರಿಗೆ ಈ ಬೆಲೆ ಏರಿಕೆ ಸಂತಸ ತಂದಿದೆ. ಪ್ರಸ್ತುತ ಕೊಬ್ಬರಿ ದಾಸ್ತಾನು ಯಾರ ಬಳಿ ಇದೆ ಎಂಬುದು ಒಂದು ಪ್ರಶ್ನೆ, ಸಣ್ಣ ರೈತರು ತಮ್ಮ ಉತ್ಪನ್ನವನ್ನು ತ್ವರಿತವಾಗಿ ಮಾರಾಟ ಮಾಡುತ್ತಾರೆ. ಈ ವರ್ಷ ಇಳುವರಿ ಕಡಿಮೆ ಇದ್ದು, ಕೊಬ್ಬರಿ ಸಂಗ್ರಹವೂ ಕಡಿಮೆಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಕಡಿಮೆ ಇಳುವರಿಯೇ ಪ್ರಸ್ತುತ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ಅವರು ಹೇಳಿದ್ದಾರೆ. ಬೆಲೆ ಇನ್ನೆಷ್ಟು ಏರಬಹುದು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.