Headlines

ಲವ್ ಜಿಹಾದ್ ಪ್ರಕರಣಗಳಿಗೂ ಜಿಮ್​​ಗೂ ನಂಟು?: ಸಭೆ ನಡೆಸಿ ಖಾಕಿ ಖಡಕ್​​ ಕ್ಲಾಸ್​​; ಏನೆಲ್ಲ ಎಚ್ಚರಿಕೆ?

ಲವ್ ಜಿಹಾದ್ ಪ್ರಕರಣಗಳಿಗೂ ಜಿಮ್​​ಗೂ ನಂಟು?: ಸಭೆ ನಡೆಸಿ ಖಾಕಿ ಖಡಕ್​​ ಕ್ಲಾಸ್​​; ಏನೆಲ್ಲ ಎಚ್ಚರಿಕೆ?


ಲವ್ ಜಿಹಾದ್ ಪ್ರಕರಣಗಳಲ್ಲಿ ಜಿಮ್ ಗೂ ನಂಟು?: ಸಭೆ ನಡೆಸಿ ಖಾಕಿ ಖಡಕ್ ಕ್ಲಾಸ್; ಏನೆಲ್ಲ ಎಚ್ಚರಿಕೆ?

ಹುಬ್ಬಳ್ಳಿ, ಏಪ್ರಿಲ್ 10: ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಕೇಳಿಬರುತ್ತಿರುವ ಲವ್ ಜಿಹಾದ್ ಪ್ರಕರಣಗಳಲ್ಲಿ ಜಿಮ್ ಗೂ ನಂಟಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಜಿಮ್ ನೇಮಕ ಮತ್ತು ಟ್ರೈನ್‌ಗಳ ಜೊತೆ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದು, ಕೆಲವು ನಿಯಮಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸೂಚನೆಯನ್ನು ನೀಡಲಾಗಿದೆ. ಮತ್ತೊಂದೆಡೆ ಯಾರಾದರೂ ಜಿಮ್‌ಗಳಲ್ಲಿ ಬೇರೆ ಕೆಲಸ ಮಾಡಿದ್ರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂಬ ಆಗ್ರಹದಿಂದ ಕೂಡಿದೆ.

ಲವ್ ಜಿಹಾದ್ ಆರೋಪ ಹೊಂದಿರೋ ಸಮೀರ್ ಮುಲ್ಲಾಜಿಮ್ ಟ್ರೈನರ್ ಆಗಿದ್ದ. ಮತ್ತೊಂದು ಪ್ರಕರಣದ ಆರೋಪಿ ಮುಪಿಜ್ ಕೂಡ ಸಮೀರ್ ಜಿಮ್ ಗೆ ಹೋಗ್ತಿದ್ದ ವ್ಯಕ್ತಿ. ಜೊತೆಗೆ ಈ ಹಿಂದೆ ನಡೆದ ನೇಹಾ ಹಿರೇಮಠ ಹತ್ಯೆ ಪ್ರಕರಣದ ಆರೋಪಿ ಫಯಾಜ್ ಕೂಡ ಜಿಮ್ ಗೆ ಹೋಗುತ್ತಿದ್ದವ. ಇವುಗಳ ಜೊತೆ ಜಿಮ್ ಗೆ ಹೋಗ್ತಿದ್ದ ಯುವತಿ ಜೊತೆ ಮುಸ್ಲಿಂ ಟ್ರೈನರ್ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣ ಕೂಡ ಧಾರವಾಡದಲ್ಲಿ ನಡೆದಿತ್ತು. ಇದೇ ಕಾರಣಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿನ ಕೆಲ ಜಿಮ್‌ಗಳು ಲವ್ ಜಿಹಾದ್ ಅಡ್ಡಲಾಗಿವೆ ಎಂದು ಹಿಂದೂಪರ ಸಂಘಟನೆಗಳು ದೂರಿದ್ದವು. ಈ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಅವಳಿ ನಗರದ ಎಲ್ಲಾ ಜಿಮ್ ಮತ್ತು ಟ್ರೈನರ್‌ಗಳ ಜೊತೆ ಸಭೆ. ನಗರದ ಬಿವಿಬಿ ಕಾಲೇಜು ಕ್ಯಾಂಪಸ್ ನ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಇನ್ನೂ ಹೆಚ್ಚು ಜಿಮ್ ಟ್ರೈನರ್ ಮತ್ತು ಜಿಮ್ ಭಾಗವಹಿಸಿದ್ದರು.

ಇದನ್ನೂ ಓದಿ: ಪ್ರೇಮ ಸಂಬಂಧವೋ? ಲವ್ ಜಿಹಾದೋ?; ಅಸಲಿಗೆ ಹುಬ್ಬಳ್ಳಿ, ಧಾರವಾಡದಲ್ಲಿ ಆಗ್ತಿರೋದೇನು?

ಪೊಲೀಸ್ ಆಯುಕ್ತರ ಸೂಚನೆಗಳೇನು?

  • ಕಡ್ಡಾಯವಾಗಿ ಎಲ್ಲಾ ಜಿಮ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಹಾಕಬೇಕು
  • ಟ್ರೈನರ್‌ಗಳ ಪೂರ್ವಾಪರಗಳನ್ನು ವಿಚಾರಿಸಬೇಕು
  • ಜಿಮ್‌ಗೆ ಬರುವವರಿಗೆ ಟ್ರೈನರ್‌ಗಳ ಹಿನ್ನೆಲೆ ತಿಳಿಸಬೇಕು
  • ಜಿಮ್‌ಗೆ ಬರುವವರ ಮೊಬೈಲ್ ಸಂಖ್ಯೆ ಪಡೆದು ಟ್ರೈನರ್‌ಗಳು ಸಂಪರ್ಕ ಹೊಂದೋದನ್ನು ತಪ್ಪಿಸಬೇಕು

ಇನ್ನು ಯಾರಾದರೂ ಈ ನಿಯಮವನ್ನು ಮೀರಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ಕೆಲ ಜಿಮ್‌ಗಳಲ್ಲಿ ನಡೆದಿರೋ ಘಟನೆಗಳಿಂದ ಎಲ್ಲ ಜಿಮ್‌ಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಇದರಿಂದ ಹೆಚ್ಚಿನ ಪಾಲಕರು ಜಿಮ್‌ಗಳಿಗೆ ಕಳುಹಿಸಲು ಭಯ ಪಡುತ್ತಿದ್ದಾರೆ. ಹೀಗಾಗಿ ಯಾರ ತಪ್ಪು ಮಾಡಿದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಜಿಮ್‌ಗಳು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *