Headlines

ಸತತ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಡಬಲ್ ಗುಡ್ ನ್ಯೂಸ್! ಧೋನಿ ಕಮ್‌ಬ್ಯಾಕ್ ಡೇಟ್ ಫಿಕ್ಸ್! | Csk Boost Ahead Of Dc Clash Dewald Brevis Set To Return Ms Dhoni Comeback Update Kvn

ಸತತ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಡಬಲ್ ಗುಡ್ ನ್ಯೂಸ್! ಧೋನಿ ಕಮ್‌ಬ್ಯಾಕ್ ಡೇಟ್ ಫಿಕ್ಸ್! | Csk Boost Ahead Of Dc Clash Dewald Brevis Set To Return Ms Dhoni Comeback Update Kvn



ಸತತ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಡಬಲ್ ಗುಡ್ ನ್ಯೂಸ್! ಧೋನಿ ಕಮ್‌ಬ್ಯಾಕ್ ಡೇಟ್ ಫಿಕ್ಸ್! | Csk Boost Ahead Of Dc Clash Dewald Brevis Set To Return Ms Dhoni Comeback Update Kvn

ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಸ್ಫೋಟಕ ಆಟಗಾರ ಡೆವಾಲ್ಡ್ ಬ್ರೆವಿಸ್ ಗಾಯದಿಂದ ಚೇತರಿಸಿಕೊಂಡು ಮರಳುತ್ತಿದ್ದಾರೆ. ಇದರ ಜೊತೆಗೆ, ಎಂ.ಎಸ್. ಧೋನಿ ಅವರ ಫಿಟ್ನೆಸ್ ಮತ್ತು ತಂಡಕ್ಕೆ ಅವರ ವಾಪಸಾತಿ ಬಗ್ಗೆಯೂ ಮಹತ್ವದ ಮಾಹಿತಿ ಲಭ್ಯವಾಗಿದೆ.

ಚೆನ್ನೈ: ಐಪಿಎಲ್‌ನಲ್ಲಿ ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್‌ (CSK) ತಂಡಕ್ಕೆ ಕೊನೆಗೂ ಒಂದು ಗುಡ್ ನ್ಯೂಸ್ ಸಿಕ್ಕಿದೆ. ದಕ್ಷಿಣ ಆಫ್ರಿಕಾದ ಯುವ ಸ್ಫೋಟಕ ಆಟಗಾರ ಡೆವಾಲ್ಡ್ ಬ್ರೆವಿಸ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸ್ಸಾಗುತ್ತಿದ್ದಾರೆ. ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆಪಾಕ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬ್ರೆವಿಸ್ ಆಡುವುದು ಬಹುತೇಕ ಖಚಿತವಾಗಿದೆ. ಇದರ ಜೊತೆಗೆ, ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಎಂ.ಎಸ್. ಧೋನಿ ಅವರ ಕಮ್‌ಬ್ಯಾಕ್ ಬಗ್ಗೆಯೂ ಹೊಸ ಮಾಹಿತಿ ಲಭ್ಯವಾಗಿದೆ.

ಇಂದು ಡೆಲ್ಲಿ ಎದುರು ಬ್ರೆವಿಸ್ ಕಣಕ್ಕಿಳಿಯೋದು ಕನ್ಫರ್ಮ್‌

ಈ ಸೀಸನ್‌ನ ಮೊದಲ ಪಂದ್ಯಕ್ಕೂ ಮುನ್ನ ನಡೆದಿದ್ದ ಅಭ್ಯಾಸದ ವೇಳೆ ‘ಬೇಬಿ ಎಬಿ’ ಎಂದೇ ಫೇಮಸ್ ಆಗಿರುವ ಬ್ರೆವಿಸ್‌ಗೆ ಗಾಯವಾಗಿತ್ತು. ಈ ಕಾರಣದಿಂದಾಗಿ, ಚೆನ್ನೈ ಸೂಪರ್ ಕಿಂಗ್ಸ್ ಆಡಿದ ಮೊದಲ ಮೂರೂ ಪಂದ್ಯಗಳಿಗೆ ಅವರು ಅಲಭ್ಯರಾಗಿದ್ದರು. ಈ ಮೂರೂ ಮ್ಯಾಚ್‌ಗಳಲ್ಲಿ ಚೆನ್ನೈ ಸೋಲು ಕಂಡಿತ್ತು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿರುವ ಬ್ರೆವಿಸ್ ಅವರ ಆಗಮನ, ತಂಡದ ಮಧ್ಯಮ ಕ್ರಮಾಂಕಕ್ಕೆ ದೊಡ್ಡ ಬಲ ನೀಡಲಿದೆ. 2025ರಲ್ಲಿ ಬದಲಿ ಆಟಗಾರನಾಗಿ ತಂಡ ಸೇರಿಕೊಂಡಿದ್ದ ಬ್ರೆವಿಸ್, ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ನೆಚ್ಚಿನ ಆಟಗಾರನಾಗಿದ್ದರು.

ಇನ್ನು, ಸಿಎಸ್‌ಕೆಯ ದಿಗ್ಗಜ ಆಟಗಾರ ಎಂ.ಎಸ್. ಧೋನಿ ಕೂಡ ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ನಡೆದ ಮೊದಲ ಹಂತದ ಫಿಟ್ನೆಸ್ ಟೆಸ್ಟ್‌ನಲ್ಲಿ ಧೋನಿ ಪಾಸ್ ಆಗಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ಮತ್ತೊಂದು ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಅದರಲ್ಲಿಯೂ ಯಶಸ್ವಿಯಾದರೆ, ಏಪ್ರಿಲ್ 14 ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಡೆಯುವ ಪಂದ್ಯದಲ್ಲಿ ಧೋನಿ ತಂಡಕ್ಕೆ ವಾಪಸ್ ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಧೋನಿ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ತಂಡಕ್ಕೆ ಬಂದಿರುವ ಕೇರಳ ಮೂಲದ ಆಟಗಾರ ಸಂಜು ಸ್ಯಾಮ್ಸನ್, ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ತಮ್ಮ ಮಾಜಿ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಸಂಜು ಕೇವಲ 6 ರನ್‌ಗಳಿಗೆ ಔಟಾಗಿದ್ದರು. ಪಂಜಾಬ್ ಕಿಂಗ್ಸ್ ವಿರುದ್ಧ 7 ರನ್ ಮತ್ತು ಆರ್‌ಸಿಬಿ ವಿರುದ್ಧದ ಮಹತ್ವದ ಪಂದ್ಯದಲ್ಲಿ 9 ರನ್ ಗಳಿಸಲಷ್ಟೇ ಅವರಿಗೆ ಸಾಧ್ಯವಾಯಿತು. ವಿಶ್ವಕಪ್ ಹೀರೋಯಿಸಂ ನಂತರ ಚೆನ್ನೈ ಜೆರ್ಸಿಯಲ್ಲಿ ಕಣಕ್ಕಿಳಿದ ಸಂಜು ಅವರ ಕಳಪೆ ಫಾರ್ಮ್, ಅಭಿಮಾನಿಗಳಿಗೆ ಮತ್ತು ಮ್ಯಾನೇಜ್‌ಮೆಂಟ್‌ಗೆ ನಿರಾಸೆ ಮೂಡಿಸಿದೆ. ಬ್ರೆವಿಸ್ ವಾಪಸ್ಸಾಗುವುದರಿಂದ ತಂಡದ ಸಂಯೋಜನೆಯಲ್ಲಿಯೂ ದೊಡ್ಡ ಬದಲಾವಣೆಗಳಾಗುವ ಸಾಧ್ಯತೆ ಇದೆ. ಚೆನ್ನೈ ತನ್ನ ಮುಂದಿನ ಪಂದ್ಯಗಳನ್ನು ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮತ್ತು ಏಪ್ರಿಲ್ 14 ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಚೆಪಾಕ್‌ನಲ್ಲೇ ಆಡಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಮೇಲೆ ಸ್ಪಷ್ಟ ಮೇಲುಗೈ ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್:

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಒಟ್ಟು 31 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 31 ಪಂದ್ಯಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೇ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 12 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನು ಚೆನ್ನೈನ ಚೆಪಾಕ್ ಮೈದಾನದಲ್ಲಿ ಕಳೆದ 8 ಮುಖಾಮುಖಿಯಲ್ಲಿ ಡೆಲ್ಲಿ ತಂಡವು ಚೆನ್ನೈ ಎದುರು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.



Source link

Leave a Reply

Your email address will not be published. Required fields are marked *