Headlines

ಪಿಯು ಬೋರ್ಡ್ ಎಡವಟ್ಟು: ಹಿಂದಿಗೆ 100ಕ್ಕೆ 111 ಅಂಕ, ಈಗ ಗಣಿತ ವಿಷಯಕ್ಕೆ, 80ಕ್ಕೆ 42 ಇದ್ದಿದ್ದು 33ಕ್ಕೆ ಇಳಿದಿದೆ! | Irresponsibility Of The Examination Board In Ii Puc Results Marks Fluctuating Students Outraged

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಂಭೀರ ಎಡವಟ್ಟು ಮಾಡಿದೆ. ವಿದ್ಯಾರ್ಥಿಗಳಿಗೆ ಗರಿಷ್ಠ ಅಂಕಗಳಿಗಿಂತ ಹೆಚ್ಚು ಅಂಕಗಳನ್ನು ನೀಡಿ, ನಂತರ ತಾಂತ್ರಿಕ ದೋಷದ ಕಾರಣ ನೀಡಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದೆ.

ಬೆಂಗಳೂರು (ಏ.11): ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಶುಕ್ರವಾರ ಪ್ರಕಟಿಸಿದ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಕೆಲ ವಿದ್ಯಾರ್ಥಿಗಳಿಗೆ ಗರಿಷ್ಠಕ್ಕಿಂತ ಹೆಚ್ಚು ಅಂಕಗಳನ್ನು ನೀಡಿ ಎಡವಟ್ಟು ಮಾಡಿತ್ತು. ಇದೀಗ ಮತ್ತೊಂದು ಎಡವಟ್ಟು ಬಯಲಿಗೆ ಬಂದಿದೆ.

ನಿನ್ನೆ ಹಿಂದಿ ವಿಷಯಕ್ಕೆ 100ಕ್ಕೆ 111 ಅಂಕ ನೀಡಿ ಎಡವಟ್ಟು ಮಾಡಿದ ಬಗ್ಗೆ ವರದಿ ಪ್ರಕಟವಾಗಿತ್ತು. ಜಾಲತಾಣದಲ್ಲಿ ಪರೀಕ್ಷಾ ಮಂಡಳಿ ಬೇಜವಾಬ್ದಾರಿಗೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಹಿಂದಿ ವಿಷಯ ಅಲ್ಲದೇ ಮೊನ್ನೆ ಮೊನ್ನೆ ಗಣಿತ ವಿಷಯದ ರಿಸಲ್ಟ್ ನೋಡಿದಾಗ ವಿದ್ಯಾರ್ಥಿನಿಗೆ 80ಕ್ಕೆ 42 ಅಂಕ ಬಂದಿತ್ತು ಆದರೆ ನಿನ್ನೆ ನೋಡೀದಾಗ 80ಕ್ಕೆ 33 ಅಂಕ ಬಂದಿದೆ. ಇದು ಹೇಗೆ ಸಾಧ್ಯ ಎಂದು ವಿದ್ಯಾರ್ಥಿನಿ ಪ್ರಶ್ನಿಸಿದ್ದಾರೆ.

ದ್ವಿತೀಯ ಪಿಯುಸಿಯಲ್ಲಿ ಆರು ವಿಷಯಗಳಿಗೆ ತಲಾ ನೂರರಂತೆ 600 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಮಂಡಳಿಯು ವಿದ್ಯಾರ್ಥಿಯೊಬ್ಬರಿಗೆ 683 ಅಂಕಗಳನ್ನು ನೀಡಿದೆ. ಮತ್ತೊಬ್ಬ ವಿದ್ಯಾರ್ಥಿಗೆ ಗರಿಷ್ಠ 100 ಅಂಕಗಳಿಗೆ ನಡೆಯುವ ಹಿಂದಿ ಪರೀಕ್ಷೆಯಲ್ಲಿ 101 ಅಂಕ ನೀಡಲಾಗಿದೆ. ವೆಬ್‌ಸೈಟ್‌ನಲ್ಲಿ ತಮಗೆ ನೀಡಿರುವ ಫಲಿತಾಂಶ ನೋಡಿ ಅಚ್ಚರಿಗೊಂಡ ವಿದ್ಯಾರ್ಥಿಗಳು ತಕ್ಷಣ ಮಂಡಳಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಎಚ್ಚೆತ್ತ ಅಧಿಕಾರಿಗಳು ಆ ವಿದ್ಯಾರ್ಥಿಗಳ ಫಲಿತಾಂಶವನ್ನು ಮತ್ತೊಮ್ಮೆ ಪರಿಶೀಲಿಸಿ ತಂತ್ರಾಂಶದಲ್ಲಿ ಸರಿಯಾದ ಫಲಿತಾಂಶ ದಾಖಲಿಸಿದ್ದಾರೆ.

ಅಧಿಕಾರಿಗಳ ಎಡವಟ್ಟಿಗೆ ತಾಂತ್ರಿಕ ದೋಷದ ತೆಪೆ

ಈ ಲೋಪಕ್ಕೆ ತಾಂತ್ರಿಕ ದೋಷದ ಲೇಪನ ಹಚ್ಚಿರುವ ಅಧಿಕಾರಿಗಳು ಬಳಿಕ ಲೋಪ ಸರಿಪಡಿಸಿ ವಿದ್ಯಾರ್ಥಿಗಳಿಗೆ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ್ದಾರೆ. ಜೊತೆಗೆ ಆಗಿರುವ ತಪ್ಪಿಗೆ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ. 2024 ಮತ್ತು 2025ನೇ ಸಾಲಿನ ಖಾಸಗಿ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳು ಇಲ್ಲದ ಕಾರಣ ಫಲಿತಾಂಶ ನೀಡುವಾಗ ಅವರು ಪಡೆದ 80 ಅಂಕಗಳನ್ನು 100 ಅಂಕಗಳಿಗೆ ಪರಿವರ್ತಿಸಿ ನೀಡಬೇಕಾಗುತ್ತದೆ. ಈ ಸಂಬಂಧ ಪ್ರೋಗ್ರಾಮಿಂಗ್‌ ಮಾಡುವಾಗ ತಾಂತ್ರಿಕ ದೋಷಗಳು ಉಂಟಾಗಿ ಫಲಿತಾಂಶದಲ್ಲಿ ಲೋಪವಾಗಿದೆ. ಆ ತಪ್ಪು ಸರಿಪಡಿಸಿ ಪರಿಷ್ಕೃತ ಫಲಿತಾಂಶ ನೀಡಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Source link

Leave a Reply

Your email address will not be published. Required fields are marked *