
ಇಷ್ಟು ದಿನ ರಿಲೀಸ್ ಆದ ಸಿನಿಮಾಗಳಿಗೆ ಪೈರಸಿ ಆಗುತ್ತಿದೆ ಎಂದು ನಿರ್ಮಾಪಕರು ಒಡ್ಡಾಡುತ್ತಿದ್ದಾರೆ. ಆದರೆ, ಕೆವಿಎನ್ ಸಂಸ್ಥೆ ನಿರ್ಮಾಣದ ‘ಜನ ನಾಯಕನ್’ ಚಿತ್ರಕ್ಕೆ ರಿಲೀಸ್‌ಗೂ ಮೊದಲೇ ಪೈರಸಿ ಕಾಟ ತಟ್ಟಿದೆ. ಈ ಸಿನಿಮಾದ ಥಿಯೇಟರ್ ರಿಲೀಸ್ ನಾನಾ ಕಾರಣಗಳಿಂದ ವಿಳಂಬವಾಗುತ್ತಿದೆ. ಈ ಮಧ್ಯೆ ‘ಜನ ನಾಯಕನ್’ ಸಿನಿಮಾದ ದೃಶ್ಯಗಳು ಲೀಕ್ ಆಗಿರುವುದು ಕೇವಲ ತಂಡವಾಗಿದೆ, ಇಡೀ ಭಾರತೀಯ ಚಿತ್ರರಂಗದ ಕೋಪಕ್ಕೆ ಕಾರಣವಾಗಿದೆ. ಎಲ್ಲರೂ ವಿಜಯ್ ಬೆಂಬಲಕ್ಕೆ ನಿಂತಿದ್ದಾರೆ. ಈ ಎಲ್ಲಾ ಬೆಳವಣಿಗೆಗೆ ಸೆನ್ಸಾರ್ ಮಂಡಳಿ ಕಾರಣ ಎಂದು ಕಮಲ್ ಹಾಸನ್ ಅವರು ಆರೋಪಿಸಿದ್ದಾರೆ.
‘ಜನ ನಾಯಕನ್’ ಸಿನಿಮಾ ಜನವರಿಯಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಲು ನಿರಾಕರಿಸಿತು. ಸಿನಿಮಾದಲ್ಲಿನ ಕೆಲ ವಿಷಯಗಳಿಗೆ ಅಪಸ್ವರ ತೆಗೆಯಿತು. ಇದನ್ನು ಮುಂಬೈನ ಪುನರ್ ಪರಿಶೀಲನಾ ಸಮಿತಿಗೆ ಸಲ್ಲಿಕೆ ಮಾಡುವ ಸೂಚನೆ ನೀಡಿತು. ಈ ವೇಳೆ ತಂಡ ಕೋರ್ಟ್ ಮೆಟ್ಟಿಲೇರಿತು. ಒಂದು ತಿಂಗಳಾದರೂ ಕೋರ್ಟ್ ನಲ್ಲಿ ಪ್ರಕರಣ ಇತ್ಯರ್ಥ ಆಗದ ಕಾರಣ ಸಿನಿಮಾ ತಂಡದವರು ಪ್ರಕರಣ ಹಿಂಪಡೆದು ಪುನರ್ ಪರಿಶೀಲನಾ ಸಮಿತಿಗೆ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿ ಸಿನಿಮಾನ ಇನ್ನಷ್ಟೇ ನೋಡಬೇಕಿದೆ.
ನ ಸೋರಿಕೆ #ಜನನಾಯಕನ್ ಇದು ಅಪಘಾತವಲ್ಲ – ಇದು ವ್ಯವಸ್ಥಿತ ವೈಫಲ್ಯದ ಪರಿಣಾಮವಾಗಿದೆ. ಸರಿಯಾದ ಪ್ರಕ್ರಿಯೆಯು ಸಮಯೋಚಿತವಾಗಿದ್ದರೆ, ನಾವು ಇಲ್ಲಿ ಇರುತ್ತಿರಲಿಲ್ಲ. ಪ್ರಮಾಣೀಕರಣದಲ್ಲಿನ ಅತಿಯಾದ ವಿಳಂಬವು ಕಡಲ್ಗಳ್ಳತನಕ್ಕೆ ಫಲವತ್ತಾದ ನೆಲವನ್ನು ಸೃಷ್ಟಿಸಿದೆ. ಕಾನೂನು ಪ್ರವೇಶವನ್ನು ಸ್ಥಗಿತಗೊಳಿಸಿದಾಗ, ಕಾನೂನುಬಾಹಿರ ಚಾನಲ್ಗಳು ಸ್ವಾಧೀನಪಡಿಸಿಕೊಳ್ಳುತ್ತವೆ.
ಪೈರಸಿ ಎಂದರೆ…— ಕಮಲ್ ಹಾಸನ್ (@ikamalhaasan) ಏಪ್ರಿಲ್ 10, 2026
ಹೀಗಿರುವಾಗಲೇ ‘ಜನ ನಾಯಕನ್’ ದೃಶ್ಯ ಲೀಕ್ ಆಗಿದೆ. ಇದನ್ನು ಕಮಲ್ ಹಾಸನ್ ಖಂಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗೆ ಸೆನ್ಸಾರ್ ಮಂಡಳಿ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ‘ಜನ ನಾಯಕನ್’ ಲೀಕ್ ಬಗ್ಗೆ ಪ್ರಶ್ನೆ ಮಾಡಿದರೆ ಉತ್ತರಿಸದೆ ಹೋದ ದಳಪತಿ ವಿಜಯ್
‘ಜನ ನಾಯಕನ್ ಅಚಾನಕ್ಕಾಗಿ ಲೀಕ್ ಆಗಿದ್ದಲ್ಲ. ಇದು ನಮ್ಮ ವೈಫಲ್ಯದಿಂದ ಆಗಿದೆ. ಒಂದೊಮ್ಮೆ ಎಲ್ಲಾ ಪ್ರಕ್ರಿಯೆಗಳು (ಸೆನ್ಸಾರ್ ಪ್ರಕ್ರಿಯೆ) ನಡೆದರೆ ನಾವು ಇಂದು ಇಲ್ಲಿ ಇರುತ್ತೇವೆ. ಸೆನ್ಸಾರ್ ಪ್ರಮಾಣಪತ್ರ ಪ್ರಕ್ರಿಯೆಗೆ ಅತಿಯಾದ ವಿಳಂಬ ಮಾಡಿದ್ದು ಇದಕ್ಕೆಲ್ಲ ಕಾರಣ. ಕಾನೂನು ತನ್ನ ಕೆಲಸ ನಿಲ್ಲಿಸಿದಾಗ ಕಾನೂನುಬಾಹಿರ ಚಟುವಟಿಕೆಗಳು ಮೇಲುಗೈ ಸಾಧಿಸುತ್ತವೆ’ ಎಂದು ಕಮಲ್ ಹಾಸನ್. ಈ ಮೂಲಕ ಸೆನ್ಸಾರ್ ಮಂಡಳಿ ವಿರುದ್ಧ ಗುಡುಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.