
ಸಿಹಿತಿಂಡಿಗಳಲ್ಲಿರುವ ಕ್ಯಾಲೋರಿಗಳು ನೀರಿನೊಂದಿಗೆ ಸೇರಿ ಕೊಬ್ಬಾಗಿ ಪರಿವರ್ತನೆಯಾಗುವ ಸಾಧ್ಯತೆ ಹೆಚ್ಚು. ಇದು ತೂಕ ಹೆಚ್ಚಲು ಕಾರಣವಾಗುತ್ತದೆ. ನಿರಂತರವಾಗಿ ಹೀಗೆ ಮಾಡಿದರೆ ಅಧಿಕ ತೂಕ, ಬೊಜ್ಜು ಮುಂತಾದ ಸಮಸ್ಯೆಗಳು ಬರುತ್ತವೆ. ಇದನ್ನ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಕೂಡ ದೃಢಪಡಿಸಿದೆ.
ಇನ್ಸುಲಿನ್ ನಿರೋಧಕತೆ ಹೆಚ್ಚುವ ಅಪಾಯ
ರಕ್ತದಲ್ಲಿ ಸಕ್ಕರೆ ಮಟ್ಟ ಏರಿದಾಗ, ಮೇದೋಜೀರಕ ಗ್ರಂಥಿ ಹೆಚ್ಚು ಇನ್ಸುಲಿನ್ ಬಿಡುಗಡೆ ಮಾಡುತ್ತದೆ. ಇದು ಆಗಾಗ್ಗೆ ಆದರೆ ದೇಹ ಇನ್ಸುಲಿನ್‌ಗೆ ಸ್ಪಂದಿಸುವುದಿಲ್ಲ. ಇದರಿಂದ ಟೈಪ್-2 ಮಧುಮೇಹ ಬರುವ ಸಾಧ್ಯತೆ ಹೆಚ್ಚು.
ನಿಧಾನವಾಗುತ್ತದೆ ಮೆಟಬಾಲಿಸಂ
ಮೆಟಬಾಲಿಸಂ ಅಂದರೆ ದೇಹ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಪ್ರಕ್ರಿಯೆ. ಸಿಹಿ ತಿಂದ ತಕ್ಷಣ ನೀರು ಕುಡಿದರೆ ಈ ಪ್ರಕ್ರಿಯೆ ನಿಧಾನವಾಗುತ್ತದೆ. ಇದು ದೇಹದ ಶಕ್ತಿಯ ಮಟ್ಟ ಕಡಿಮೆ ಮಾಡಿ ಆಯಾಸ ಹೆಚ್ಚಿಸುತ್ತದೆ. ಉತ್ಸಾಹ ಕಡಿಮೆ ಮಾಡುತ್ತದೆ.