Headlines

Weekly Love Horoscope: ಪ್ರೇಮ – ಪ್ರೀತಿ ಭವಿಷ್ಯ; ಈ ವಾರ ಈ ರಾಶಿಯ ಅವಿವಾಹಿತರಿಗೆ ಹೊಸ ಸಂಬಂಧದ ಪ್ರಸ್ತಾಪ ಬರಲಿದೆ

Weekly Love Horoscope: ಪ್ರೇಮ – ಪ್ರೀತಿ ಭವಿಷ್ಯ; ಈ ವಾರ ಈ ರಾಶಿಯ ಅವಿವಾಹಿತರಿಗೆ ಹೊಸ ಸಂಬಂಧದ ಪ್ರಸ್ತಾಪ ಬರಲಿದೆ


Weekly Love Horoscope: ಪ್ರೇಮ – ಪ್ರೀತಿ ಭವಿಷ್ಯ; ಈ ವಾರ ಈ ರಾಶಿಯ ಅವಿವಾಹಿತರಿಗೆ ಹೊಸ ಸಂಬಂಧದ ಪ್ರಸ್ತಾಪ ಬರಲಿದೆ

ಏಪ್ರಿಲ್ 12 ರಿಂದ ಏಪ್ರಿಲ್ 18 ರಂದು ಎರಡನೇ ವಾರದಲ್ಲಿ ಈ ವಾರದಲ್ಲಿ ಪರಿಚಿತವು ಪ್ರೇಮವಾಗಿದೆ, ವರ್ತನೆ ನೇರವಾಗಿರಲಿ, ಅನುಮಾನಕ್ಕೆ ಆಸ್ಪದ ಬೇಡ. ಪ್ರೀತಿಯ ಕೊರತೆ ಆಗಲಿದೆ, ಮನಸ್ಸಿನೊಳಗೇ ಕೆಲವುಸಬೇಕಾಗುವುದು.

ಮೇಷ:

ಜೀವನ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಪ್ರೀತಿ ಗಟ್ಟಿಯಾಗಿರುತ್ತದೆ. ಅವಿವಾಹಿತರಿಗೆ ಹೊಸ ಸಂಬಂಧದ ಪ್ರಸ್ತಾಪ ಬರಬಹುದು. ಮಾತಿನಲ್ಲಿ ಸಂಯಮವಿರಲಿ, ಆಪ್ತತೆಯು ಹೆಚ್ಚಾಗಲಿದೆ.

ವೃಷಭ:

ಪ್ರೇಮ ಜೀವನದಲ್ಲಿ ಮಧುರವಾದ ಕ್ಷಣಗಳನ್ನು ಕಳೆಯುವಿರಿ. ಹಳೆಯ ಸ್ನೇಹಿತರ ಭೇಟಿ ಮನಸ್ಸಿಗೆ ಸಂತೋಷವಾಯಿತು. ದಾಂಪತ್ಯದಲ್ಲಿ ಪರಸ್ಪರ ಗೌರವ ಮತ್ತು ನಂಬಿಕೆ ವೃದ್ಧಿಯಾಗುವ ಸಮಯವಿದು.

ಮಿಥುನ:

ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ದೊರೆಯಬಹುದು. ಪ್ರೀತಿಯ ವಿಷಯದಲ್ಲಿ ಗೊಂದಲಗಳಿದ್ದರೆ ಈ ವಾರ ನಿವಾರಣೆಯಾಗಲಿವೆ. ಸ್ನೇಹ ಸಂಬಂಧಗಳು ಸಿಗಲಿದೆ, ಪ್ರೇಮಿಗಳಿಗೆ ಮನೆಯವರ ಬೆಂಬಲ ಸಿಗುತ್ತದೆ.

ಕರ್ಕಾಟಕ:

ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಿರಿ. ದಾಂಪತ್ಯದಲ್ಲಿನ ಕಹಿ ಮರೆತು ಹೊಸ ಆರಂಭಕ್ಕೆ ನಾಂದಿ ಹಾಡುವಿರಿ. ಭಾವನಾತ್ಮಕವಾಗಿ ಸಂಗಾತಿಗೆ ಹತ್ತಿರವಾಗುವಿರಿ. ಹೊಸ ಪರಿಚಯಗಳು ಸ್ನೇಹಕ್ಕೆ ತಿರುಗಲಿವೆ.

ಸಿಂಹ:

ಆಪ್ತ ಸಂಬಂಧಗಳಲ್ಲಿ ಸ್ವಲ್ಪ ಬಿಗುವಿನ ವಾತಾವರಣ ಇರಬಹುದು. ಅಹಂಕಾರ ಬಿಟ್ಟು ನಡೆದರೆ ಪ್ರೇಮ ಜೀವನ ಸುಖಮಯ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ತಾಳ್ಮೆ ಇಲ್ಲಿ ಅತಿ ಮುಖ್ಯ.

ಕನ್ಯಾ:

ನಿಮ್ಮ ಸಂವಹನ ಶೈಲಿಯಿಂದ ಪ್ರೀತಿ ಪಾತ್ರರ ಮನ ಗೆಲ್ಲುವಿರಿ. ಒಂಟಿಯಾಗಿರುವವರಿಗೆ ಆಕರ್ಷಕ ವ್ಯಕ್ತಿಗಳ ಭೇಟಿಯಾಗುವ ಸಾಧ್ಯತೆಯಿದೆ. ದಾಂಪತ್ಯದಲ್ಲಿ ಸುಖ-ಶಾಂತಿ ನೆಲೆಸಲಿದೆ, ಆಪ್ತತೆ ಹೆಚ್ಚಾಗಲಿದೆ.

ತುಲಾ:

ಸಂಬಂಧಗಳಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ಸಂಗಾತಿಯ ಬೆಂಬಲ ನಿಮ್ಮ ಭರವಸೆ. ಪ್ರೇಮಿಗಳ ವಿವಾಹದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯ. ಹಳೆಯ ಸ್ನೇಹ ಮರುಕಳಿಸಬಹುದು.

ವೃಶ್ಚಿಕ:

ಭಾವನಾತ್ಮಕವಾಗಿ ಸ್ವಲ್ಪ ಏರಿಳಿತಗಳಿರಬಹುದು. ಪ್ರೀತಿಪಾತ್ರರ ಮೇಲೆ ಸಂಶಯ ಬೇಡ, ಮುಕ್ತವಾಗಿ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ದಾಂಪತ್ಯದಲ್ಲಿ ರೊಮ್ಯಾಂಟಿಕ್ ಕ್ಷಣಗಳು ಹೆಚ್ಚಾಗಲಿವೆ.

ಧನು:

ಹೊಸ ಸ್ನೇಹವು ಪ್ರೇಮಕ್ಕೆ ತಿರುಗುವ ಸಾಧ್ಯತೆಯಿದೆ. ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸುವುದರಿಂದ ಸಂಬಂಧಗಳು ವೃದ್ಧಿಯಾಗುತ್ತವೆ. ಸಂಗಾತಿಯೊಂದಿಗೆ ದೂರದ ಪ್ರಯಾಣ ಕೈಗೊಳ್ಳುವ ಸಂಭವವಿದೆ.

ಮಕರ:

ಕೆಲಸದ ಒತ್ತಡದ ನಡುವೆಯೂ ಸಂಗಾತಿಗೆ ಸಮಯ ನೀಡುವಿರಿ. ದಾಂಪತ್ಯದಲ್ಲಿ ಪ್ರೀತಿ ಮತ್ತು ಜವಾಬ್ದಾರಿ ಸಮಾನವಾಗಿದೆ. ಆಪ್ತ ಸ್ನೇಹಿತರ ಮಾರ್ಗದರ್ಶನ ನಿಮ್ಮ ಪ್ರೇಮ ಜೀವನಕ್ಕೆ ಸಹಕಾರಿಯಾಗಲಿದೆ.

ಕುಂಭ:

ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲು ಇದು ಸಕಾಲ. ನಿಮ್ಮ ಆಕರ್ಷಣೆ ಹೆಚ್ಚಾಗಲಿದೆ, ಪ್ರೇಮಿಗಳ ನಡುವೆ ಬಾಂಧವ್ಯ ಗಟ್ಟಿಯಾಗುತ್ತದೆ. ಸಂಗಾತಿಯಿಂದ ವಿಶೇಷ ಪ್ರೋತ್ಸಾಹ ಸಿಗಲಿದೆ, ನೆಮ್ಮದಿಯ ವಾರವಿದು.

ಮೀನ:

ಸಂಬಂಧಗಳಲ್ಲಿ ಮೃದುತ್ವವಿರಲಿ. ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡಿ. ಸಣ್ಣ ವಿವಾದಗಳನ್ನು ಬೆಳೆಸಬೇಡಿ. ವಾರದ ಅಂತ್ಯಕ್ಕೆ ಪ್ರೇಮ ಜೀವನದಲ್ಲಿ ಹೊಸ ಚೈತನ್ಯ ಮೂಡಲಿದೆ ಮತ್ತು ಆಪ್ತತೆ ಹೆಚ್ಚಲಿದೆ.

– ಲೋಹಿತ ಹೆಬ್ಬಾರ್



Source link

Leave a Reply

Your email address will not be published. Required fields are marked *