Headlines

‘ಜನ ನಾಯಗನ್’ ಲೀಕ್ ವಿಷಯ; ಸುತ್ತಿ ಬಳಸಿ ವಿಜಯ್ ಮೇಲೆ ಬಂತು ಆರೋಪ

‘ಜನ ನಾಯಗನ್’ ಲೀಕ್ ವಿಷಯ; ಸುತ್ತಿ ಬಳಸಿ ವಿಜಯ್ ಮೇಲೆ ಬಂತು ಆರೋಪ


'ಜನ ನಾಯಕನ್' ಲೀಕ್ ವಿಷಯ; ಸುತ್ತಿ ಬಳಸಿ ವಿಜಯ್ ಮೇಲೆ ಬಂತು ಆರೋಪ

‘ಜನ ನಾಯಕನ್’ ಸಿನಿಮಾ (ಜನ ನಾಯಕ ಚಿತ್ರ) ರಿಲೀಸ್ ಗೂ ಮೊದಲೇ ಲೀಕ್ ಆಗಿದೆ. ಇದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಜನರು ಈ ಬಗ್ಗೆ ಸಾಕಷ್ಟು ಪ್ರಶ್ನೆ ಮಾಡುತ್ತಿದ್ದಾರೆ. ಅನೇಕರು ಲೀಕ್ ಮಾಡಿದವರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಹೀಗಿರುವಾಗಲೇ ‘ಜನ ನಾಯಕ’ ಸಿನಿಮಾ ಕ್ಲಿಪ್ ಸೋರಿಕೆಗೆ ವಿಜಯ್ ಕೈವಾಡವೇ ಇದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ವಿಜಯ್ ಅಭಿಮಾನಿಗಳು ಖಡಕ್ ಆಗಿ ಉತ್ತರಿಸುವ ಕೆಲಸ ಮಾಡುತ್ತಿದ್ದಾರೆ.

ಎಲ್ಲಾ ಹೀರೋಗಳಿಗೆ ತಾವು ಮಾಡಿದ ಸಿನಿಮಾಗಳ ಮೇಲೆ ಪ್ರೀತಿ ಇರುತ್ತದೆ. ಅದು ಲೀಕ್ ಆಗಲಿ ಎಂದು ಯಾರೊಬ್ಬರೂ ಬಯಸುವುದಿಲ್ಲ. ಹಾಗಿದ್ದರೂ ವಿಜಯ್ ಮೇಲೆ ಈ ರೀತಿಯ ಗಂಭೀರ ಆರೋಪವನ್ನು ಮಾಡಿದ್ದಾರೆ. ‘ಜನ ನಾಯಕ್ ಲೀಕ್ ಮಾಡಿ ಸಿಂಪತಿ ಗಿಟ್ಟಿಸಿಕೊಳ್ಳುವ ಪ್ಲ್ಯಾನ್ ವಿಜಯ್ ಅವರದ್ದು’ ಎಂದು ಕೆಲವರು ಆರೋಪ ಮಾಡಿದ್ದಾರೆ.

‘ಜನ ನಾಯಕನ್’ ಎಲ್ಲಿಯೂ ಪ್ರದರ್ಶನ ಆಗಿಲ್ಲ. ಹೀಗಾಗಿ, ಇದರ ಲೀಕ್ ಹಿಂದೆ ತಂಡದವರಲ್ಲಿದ್ದವರ ಕೈವಾಡ ಇರಬಹುದು ಎಂಬುದು ಕೆಲವರ ಅನುಮಾನ. ಈ ಕಾರಣದಿಂದ ಕೆವಿಎನ್ ಸಂಸ್ಥೆ ತನಿಖೆಗೆ ಆದೇಶ ನೀಡಲಾಗಿದೆ. ಈ ಹೊರ ಬಂದ ಬಳಿಕ ಅಸಲಿಯತ್ತು ತಿಳಿಯಲಿದೆ. ಇದರ ಬರೋದಕ್ಕೂ ಮೊದಲೇ ವಿಜಯ್ ಹಾಗೂ ಅವರ ತಂಡದ ಮೇಲೆ ಸುಖಾಸುಮ್ಮನೆ ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಜನ ನಾಯಕನ್’ ಲೀಕ್ ಬಗ್ಗೆ ಪ್ರಶ್ನೆ ಮಾಡಿದರೆ ಉತ್ತರಿಸದೆ ಹೋದ ದಳಪತಿ ವಿಜಯ್

ಇನ್ನು, ಸಿನಿಮಾ ಲೀಕ್ ಬಗ್ಗೆ ವಿಜಯ್ ಮೌನವಹಿಸಿದ್ದಾರೆ. ಅವರು ಸಂಪೂರ್ಣವಾಗಿ ಚುನಾವಣಾ ಪ್ರಚಾರದಲ್ಲಿ ಬ್ಯೂಸಿ ಇದ್ದಾರೆ. ಈ ಕಾರಣಕ್ಕೆ ಅವರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಇನ್ನು, ಕೆಲವು ಪೈರಸಿ ಸೈಟ್‌ಗಳು ಒಳ್ಳೆಯತನ ಮೆರೆಯುವ ಕೆಲಸ ಮಾಡುತ್ತಿವೆ. ಸಿನಿಮಾ ರಿಲೀಸ್ ಆದ ಮೇಲೆ ಪೈರಸಿ ಕಾಪಿಯನ್ನು ಅಪ್ಲೋಡ್ ಬ್ಯಾಂಡ್ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.





Source link

Leave a Reply

Your email address will not be published. Required fields are marked *