ಯೂಟ್ಯೂಬ್ನಲ್ಲಿ ‘ಅಮೃತಾಂ’ ಹೆಸರಿನಲ್ಲಿ ತಮಾಷೆಯ ವಿಡಿಯೋಗಳನ್ನು ಮಾಡುತ್ತಿರುವ ಯುವಕರ ತಂಡ, ‘ಅಮೃತ-ಅಂಜನ್’ ಹೆಸರಿನ ಹಾಸ್ಯಮಯ ಸಿನಿಮಾ ಮಾಡಿದ್ದು, ಸಿನಿಮಾಕ್ಕೆ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಚಿತ್ರಮಂದಿರದಲ್ಲಿ ಬಿಡುಗಡೆಯಾದಾಗ ದೊಡ್ಡ ಮಟ್ಟದ ಸದ್ದು, ಸುದ್ದಿ ಮಾಡಿದ್ದ ತಮಿಳು ಸಿನಿಮಾ ‘ತಾಯ್ ಕಳವಿ’, ಇತ್ತೀಚೆಗೆ ಬಿಡುಗಡೆ ಆದ ಒಳ್ಳೆಯ, ಯೋಚನೆಗೆ ಪ್ರೇರೇಪಿಸುವ ಸಿನಿಮಾ ಇದೆಂಬ ವಿಮರ್ಶೆ ಸಿಕ್ಕಿತ್ತು. ಇದೀಗ ಈ ಸಿನಿಮಾ ಜಿಯೋ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಿದೆ.
‘ಎವರಿಬಡಿ ಲವ್ಸ್ ಸೌರಬ್ ಹಂಡಾ’ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಹಾಲಿವುಡ್ನ ‘ನೈವ್ಸ್ ಔಟ್’ ಮಾದರಿಯ ಈ ಸಿನಿಮಾ ಒಂದು ಕೊಲೆಯ ಸುತ್ತ ನಡೆಯುತ್ತಿದೆ. ಸಿನಿಮಾದಲ್ಲಿ ಬಾಲಿವುಡ್ ನ ಕೆಲವು ಅದ್ಭುತ ನಟ-ನಟಿಯರು ನಟಿಸಿದ್ದು ಸಿನಿಮಾವನ್ನು ಜೀ5 ನಲ್ಲಿ ವೀಕ್ಷಿಸಿದ್ದಾರೆ.
ಶಾಹಿದ್ ಕಪೂರ್ ಮತ್ತು ತೃಪ್ತಿ ದಿಮ್ರಿ ನಟನೆಯ ಈ ಆಕ್ಷನ್ ಡ್ರಾಮಾ ಚಿತ್ರಮಂದಿರಗಳಲ್ಲಿ ದೊಡ್ಡ ಸದ್ದು ಮಾಡಲಿಲ್ಲ. ವಿಶಾಲ್ ಭಾರಧ್ವಜ್ ನಿರ್ದೇಶನ ಮಾಡಿರುವ ಈ ಸಿನಿಮಾ ತುಸು ವೈಯಲೆಂಟ್ ಮತ್ತು ಗ್ಲಾಮರಸ್ ಆಗಿದ್ದು, ಇದೀಗ ಈ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಲಾಗಿದೆ.
‘ತು ಯಾ ಮೇ’ ಒಂದು ಭಿನ್ನ ರೀತಿಯ ಸರ್ವೈವಲ್ ಸಿನಿಮಾ. ಆದರ್ಶ್ ಗೌರವ್ ಮತ್ತು ಶನಾಯ ಕಪೂರ್ ನಟಿಸಿರುವ ಈ ಸಿನಿಮಾವನ್ನು ಬಿಜಾಯ್ ನಂಬಿಯಾರ್ ನಿರ್ದೇಶಿಸಿದ್ದು, ಸ್ವಿಮ್ಮಿಂಗ್ ಪೂಲ್ನಲ್ಲಿ ಸಿಲುಕಿರುವ ಜೋಡಿಯೊಂದು ಅದೇ ಪೂಲ್ನ ಒಳಗಿರುವ ಮೊಸಳೆಯಿಂದ ತಪ್ಪಿಸಿಕೊಂಡು ಹೊರಬರುವ ಕಥೆ ಹೊಂದಿದೆ. ಸಿನಿಮಾ ನೆಟ್ಫ್ಲಿಕ್ಸ್ನಲ್ಲಿದೆ.




