
ನವದೆಹಲಿ, ಏಪ್ರಿಲ್ 11: ಸಂಸತ್ತಿನ ಇಂದು ನಡೆದ ಘಟನೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಗಮನ ಸೆಳೆದಿದೆ. ಸದಾ ಒಬ್ಬರ ಮೇಲೆ ಪ್ರಧಾನಿ ಕೆಸರೆರಚಿಕೊಳ್ಳುತ್ತಿದ್ದ ನರೇಂದ್ರ ಮೋದಿ (ಪ್ರಧಾನಿ ಮೋದಿ) ಮತ್ತು ರಾಹುಲ್ ಗಾಂಧಿ ಇಂದು ಬಹಳ ಆತ್ಮೀಯವಾಗಿ ಮಾತುಕತೆ ನಡೆಸಿದ ವಿಡಿಯೋವೊಂದು ವೈರಲ್ ಆಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಕಾರಿನಿಂದ ಇಳಿದು ಬಂದವರೇ ಕೈ ಮುಗಿದು ನಮಸ್ಕರಿಸುತ್ತಾ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಕೆಲ ಸಮಯ ಆಪ್ತ ಮಾತುಕತೆ ನಡೆಸಿದರು. ಈ ವೇಳೆ ಇಬ್ಬರೂ ನಾಯಕರು ಸೌಹಾರ್ದಯುತ ರೀತಿಯಲ್ಲಿ ಮಾತನಾಡುತ್ತಾ ನಿಂತಿರುವ ವಿಡಿಯೋ ವೈರಲ್ ಆಗಿದೆ.
ಚುನಾವಣೆಗಳು ನಡೆಯುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಅಜನ್ಮ ಶತ್ರುಗಳಂತೆ ಕಿತ್ತಾಡುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ಈ ಸಣ್ಣ ಮಾತುಕತೆ ಬಹಳ ಗಮನ ಸೆಳೆದಿದೆ. ಸಮಾಜ ಸುಧಾರಕರಾದ ಮಹಾತ್ಮ ಜ್ಯೋತಿಬಾ ಫುಲೆ ಅವರ 200ನೇ ಜನ್ಮ ದಿನಾಚರಣೆಯಂದು ಅವರಿಗೆ ಪುಷ್ಪ ನಮನ ಸಲ್ಲಿಸಲು ಪ್ರಧಾನಿ ಮೋದಿ ಸಂಸತ್ತಿನ ಆವರಣಕ್ಕೆ ಪ್ರೇರಣಾ ಸ್ಥಳಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಹಲವಾರು ಹಿರಿಯ ನಾಯಕರು ಮತ್ತು ಗಣ್ಯರು ಭಾಗವಹಿಸಿದ್ದರು. ಆಗ ಅಲ್ಲಿದ್ದ ರಾಹುಲ್ ಗಾಂಧಿ ಜೊತೆ ಪ್ರಧಾನಿ ಮೋದಿ ಮಾತನಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ