‘ಅಮೆರಿಕ-ಅಮೆರಿಕ’ಕ್ಕೆ 30 ವರ್ಷ, ಬರಲಿದೆ ‘ಅಮೆರಿಕ-ಅಮೆರಿಕ 2’

‘ಅಮೆರಿಕ-ಅಮೆರಿಕ’ಕ್ಕೆ 30 ವರ್ಷ, ಬರಲಿದೆ ‘ಅಮೆರಿಕ-ಅಮೆರಿಕ 2’


'ಅಮೆರಿಕ-ಅಮೆರಿಕ'ಕ್ಕೆ 30 ವರ್ಷ, ಬರಲಿದೆ 'ಅಮೆರಿಕ-ಅಮೆರಿಕ 2'

‘ಅಮೆರಿಕ-ಅಮೆರಿಕ’ (America America) ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು. ಹಲವಾರು ಜನರ ನೆಚ್ಚಿನ ಸಿನಿಮಾಗಳಲ್ಲಿ. ಈ ಸಿನಿಮಾ ಬಿಡುಗಡೆ ಆಗಿ ಇಂದಿಗೆ (ಏಪ್ರಿಲ್ 11) 30 ವರ್ಷ. 1997ರ ಏಪ್ರಿಲ್ 11 ರಂದು ಸಿನಿಮಾ ಬಿಡುಗಡೆಯಾಗಿದೆ. ರಮೇಶ್ ಅರವಿಂದ್, ಹೇಮಾ ಪಂಚಮುಖಿ, ಅಕ್ಷಯ್ ಆನಂದ್ ಒಟ್ಟಿಗೆ ನಟಿಸಿದ್ದ ಈ ಸಿನಿಮಾ ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಗೆಳತನ, ಪ್ರೀತಿ, ದೇಶ, ದೇಶಪ್ರೇಮ, ಆಧುನಿಕತೆಯ ಸೈಡ್ ಎಫೆಕ್ಟ್ಸ್ ಹೀಗೆ ಹಲವು ವಿಷಯಗಳನ್ನು ಚರ್ಚಿಸಿದ್ದ ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು.

ಸಿನಿಮಾ ನಿರ್ದೇಶಿಸುತ್ತಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು ಸಿನಿಮಾದ ಬಗ್ಗೆ ಜಾಲತಾಣದಲ್ಲಿ ಬರೆದುಕೊಂಡಿದ್ದು, ‘ನಾನು ರೂಪಿಸಿದ್ದಲ್ಲ; ನನ್ನನ್ನೇ ರೂಪಿಸಿದ ಸಿನಿಮಾ! ಕೋಟಿ ಕೋಟಿ ಕಂಗಳಿಗೆ ಕನಸು ಕೊಟ್ಟ ಸಿನಿಮಾ. ಕೋಟಿ ಕೋಟಿ ಮನಗಳಿಗೆ ಮಮಕಾರವಿತ್ತ ಸಿನಿಮಾ. ಕನ್ನಡ ಜನತೆಗೆ ಕೋಟಿ ಕೋಟಿ ಕೃತಜ್ಞತೆಗಳು’ ಇದರ ಜೊತೆಗೆ ‘ಸದ್ಯದಲ್ಲೇ ನಿಮ್ಮೆದುರು ‘ಅಮೆರಿಕ-ಅಮೆರಿಕ 2’ ಎಂದು ಸಹ ನಾಗತಿಹಳ್ಳಿ ಚಂದ್ರಶೇಖರ್ ಅವರು ಘೋಷಿಸಿದ್ದಾರೆ.

‘ಅಮೆರಿಕ-ಅಮೆರಿಕ 2’ ಸಿನಿಮಾವನ್ನು ನಾಗತಿಹಳ್ಳಿ ಅವರು ಘೋಷಿಸಿದ್ದಾರಾದರೂ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ. ಆದರೆ ನಾಗತಿಹಳ್ಳಿ ಅವರ ಪೋಸ್ಟ್‌ಗೆ ಕಮೆಂಟ್ ಮಾಡಿರುವ, ‘ಅಮೆರಿಕ-ಅಮೆರಿಕ’ ಸಿನಿಮಾವನ್ನು ಮರು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ‘ಅಮೆರಿಕ-ಅಮೆರಿಕ 2’ ಸಿನಿಮಾದಲ್ಲಿ ಹಳೆಯ ಮುಖಗಳನ್ನೇ ಅಂದರೆ ರಮೇಶ್ ಅರವಿಂದ್, ಹೇಮಾ ಪಂಚಮುಖಿ, ಅಕ್ಷಯ್ ಆನಂದ್ ಅವರನ್ನೇ ಹಾಕಿಕೊಳ್ಳಿ ಎಂದು ಇತರ ಸಲಹೆಗಳನ್ನು ನೀಡಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ಅವರು ಇತ್ತೀಚೆಗೆ ಸಿನಿಮಾ ನಿರ್ದೇಶನ ತುಸು ಕಡಿಮೆ ಮಾಡಿದ್ದಾರೆ. ಅವರು ಕೊನೆಯದಾಗಿ ನಿರ್ದೇಶಿಸಿದ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು 2020ರಲ್ಲಿ ‘ಇಂಡಿಯಾ vs ಇಂಗ್ಲೆಂಡ್’. ಅದಕ್ಕೆ ಮುಂಚೆಯೇ 2015 ರಲ್ಲಿ ‘ಇಷ್ಟಕಾಮ್ಯ’ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಬಹಳ ವರ್ಷಗಳ ಬಳಿಕ ತಮಗೆ ದೊಡ್ಡ ಯಶಸ್ಸು, ಹೆಸರು ತಂದುಕೊಟ್ಟ ‘ಅಮೆರಿಕ-ಅಮೆರಿಕ’ ಸಿನಿಮಾದ ಸೀಕ್ವೆಲ್ ನಿರ್ದೇಶಿಸಲು ಮುಂದಾಗಿದ್ದಾರೆ. ನಾಗತಿಹಳ್ಳಿ ಅವರ ಸಿನಿಮಾಗಳನ್ನು ನೋಡುತ್ತಾ ಬಂದಿರುವ, ಅವರ ಸಿನಿಮಾಗಳನ್ನು ಮೆಚ್ಚುವ ಅಭಿಮಾನಿಗಳು ನಾಗತಿಹಳ್ಳಿ ಅವರಿಂದ ಒಂದು ಸುಂದರ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *