Headlines

Gangs of UK Movie Review: ಪ್ರೀತಿ ಇಲ್ಲ, ಹಿಂಸೆಯೇ ಪ್ರಧಾನ, ರಕ್ತದ ಹರಿವಿನ ನಡುವೆ ಕಥೆ | Gangs Of Uk Kannada Movie Review Ravi Srivatsa Gvd

Gangs of UK Movie Review: ಪ್ರೀತಿ ಇಲ್ಲ, ಹಿಂಸೆಯೇ ಪ್ರಧಾನ, ರಕ್ತದ ಹರಿವಿನ ನಡುವೆ ಕಥೆ | Gangs Of Uk Kannada Movie Review Ravi Srivatsa Gvd



Gangs of UK Movie Review: ಪ್ರೀತಿ ಇಲ್ಲ, ಹಿಂಸೆಯೇ ಪ್ರಧಾನ, ರಕ್ತದ ಹರಿವಿನ ನಡುವೆ ಕಥೆ | Gangs Of Uk Kannada Movie Review Ravi Srivatsa Gvd

ಚಿತ್ರದ ಆರಂಭದಿಂದ ಅಂತ್ಯದವರೆಗೂ ದ್ವೇಷ, ಹಿಂಸೆ, ಕೊಲೆ, ರಕ್ತದಿಂದ ತೊಯ್ದು ಮುದ್ದೆಯಾಗಿದೆ. ಆ ಮುದ್ದೆಗಳನ್ನು ನಿರ್ದೇಶಕ ರವಿ ಶ್ರೀವತ್ಸ ಅವರು ‘ಗ್ಯಾಂಗ್ಸ್‌ ಆಫ್‌ ಯುಕೆ’ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ಸುರಿದಿದ್ದಾರೆ.

ಆರ್‌ಕೆ

ಚಿತ್ರದ ಆರಂಭದಿಂದ ಅಂತ್ಯದವರೆಗೂ ದ್ವೇಷ, ಹಿಂಸೆ, ಕೊಲೆ, ರಕ್ತದಿಂದ ತೊಯ್ದು ಮುದ್ದೆಯಾಗಿದೆ. ಆ ಮುದ್ದೆಗಳನ್ನು ನಿರ್ದೇಶಕ ರವಿ ಶ್ರೀವತ್ಸ ಅವರು ‘ಗ್ಯಾಂಗ್ಸ್‌ ಆಫ್‌ ಯುಕೆ’ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ಸುರಿದಿದ್ದಾರೆ. ‘ಇದು ಉತ್ತರ ಕರ್ನಾಟಕದ ಎರಡು ಕುಟುಂಬಗಳ ನಡುವೆ ನಡೆದ ರಕ್ತ ಚರಿತ್ರೆಯ ಪುಟಗಳು’ ಎಂದು ನಿರ್ದೇಶಕರೇ ಷರಾ ಬರೆದಿದ್ದಾರೆ. ಈ ಹಿಂಸಾತ್ಮಕ ಕತೆಯ ಮೂಲ ಕಪ್ಪು ಜಮೀನಿನಲ್ಲಿರುವ ಒಂದು ಸರ್ವೆ ಕಲ್ಲು ಎಂಬುದು ನಿರ್ದೇಶಕರ ಸಂಶೋಧನೆ.

ತೆರೆ ಮೇಲೆ ಮೂಡುವ ಪ್ರತಿ ದೃಶ್ಯ, ಪ್ರತಿ ಪಾತ್ರವೂ ಒಂದೇ ರೀತಿ. ಸಂಭಾಷಣೆಗಳನಂತೂ ಪಾತ್ರಧಾರಿಗಳು ಸ್ಪರ್ಧೆಗೆ ಬಿದ್ದವರಂತೆ ಪ್ರೇಕ್ಷಕರ ಮುಂದೆ ಒಪ್ಪಿಸುತ್ತಾರೆ! ಅದಕ್ಕೆ ತಕ್ಕಂತೆ ಎಂ.ಎಸ್‌.ರಮೇಶ್‌ ಅವರು ಪೆನ್ನಿಗೆ ಇಂಕಿನ ಬದಲು, ಜಲ್ಲಿ ಕಲ್ಲುಗಳನ್ನು ತುಂಬಿಕೊಂಡು ಸಂಭಾಷಣೆಗಳನ್ನು ಬರೆದಂತಿದೆ. ಹೀಗಾಗಿ ಪ್ರತಿ ಡೈಲಾಗು, ತೆರೆ ಮುಂದೆ ಕೂತವನ ಪಾಲಿಗೆ ಕಲ್ಲೇಟಿನ ಸದ್ದಿನಂತೆ.

ಚಿತ್ರ: ಗ್ಯಾಂಗ್ಸ್ ಆಫ್‌ ಯುಕೆ
ತಾರಾಗಣ: ಒರಟ ಪ್ರಶಾಂತ್‌, ಮುನಿ, ಸೋನು ಉಪಾಧ್ಯ, ಪದ್ಮಾ ವಾಸಂತಿ, ಕೋಟೆ ಪ್ರಭಾಕರ್‌, ಉಗ್ರಂ ರೆಡ್ಡಿ, ಅಮೋಘ್‌, ನವೀನ್‌.
ನಿರ್ದೇಶಕ: ರವಿ ಶ್ರೀವತ್ಸ

ಆದರೆ, ಉತ್ತರ ಕರ್ನಾಟಕದ ಎರಡು ಕುಟುಂಬಗಳ ನಡುವೆ ಏನಾಯಿತು ಎನ್ನುವ ಕತೆಯೊಂದನ್ನು ಇಷ್ಟರ ಮಟ್ಟಿಗೆ ರಕ್ತಮಯವಾಗಿ ಹೇಳಬೇಕಾ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಈ ಕಾರಣಕ್ಕೆ ನೀವು ಈ ಚಿತ್ರದಲ್ಲಿ ಪ್ರೀತಿ, ಪ್ರೇಮ, ನಗು, ಭಾವನಾತ್ಮಕತೆ ತಿರುವುಗಳನ್ನು ನಿರೀಕ್ಷೆ ಮಾಡಿದರೆ ಕಬಾಬ್‌ ಅಂಗಡಿಯಲ್ಲಿ ಕಾರಬಾತ್‌ಗೆ ಕೈ ಚಾಚಿದಂತಾಗುತ್ತದೆ!



Source link

Leave a Reply

Your email address will not be published. Required fields are marked *