Garlic Gojju Recipe In Kannada: ಮನೆಯಲ್ಲಿ ತರಕಾರಿ ಇಲ್ಲ, ಊಟಕ್ಕೆ ಏನು ಮಾಡೋದು ಎಂದು ಕೆಲವರು ಅಂದುಕೊಂಡಿರಬಹುದು. ಅದರಲ್ಲಿಯೂ ಬೇಸಿಗೆಯಲ್ಲಿ ತಂಪು ಆಹಾರವೇ ಇಷ್ಟ ಆಗುತ್ತದೆ. ಬೇಸಿಗೆಯಲ್ಲಿ ಅನ್ನ ಸಾಂಬಾರ್ ಊಟ ಮಾಡೋದು ಕೂಡ ಕಷ್ಟ. ಈಗ ಒಂದೇ ಬೆಳ್ಳುಳ್ಳಿಯಿಂದ ಮರಿಗೆ ಗೊಜ್ಜು ಮಾಡೋದು ಹೇಗೆ?

ಬೆಳ್ಳುಳ್ಳಿ ಗೊಜ್ಜನ್ನು ಮರಿಗೆ ಗೊಜ್ಜು ಎಂದು ಕೂಡ ಕರೆಯಲಾಗುವುದು. ಬೆಳ್ಳುಳ್ಳಿ ಗೊಜ್ಜಿಗೆ ಯಾಕೆ ಮರಿಗೆ ಗೊಜ್ಜು ಎನ್ನುತ್ತಾರೆ ಎಂದು ಕೆಲವರು ಪ್ರಶ್ನೆ ಕೇಳಬಹುದು. 50 ವರ್ಷದ ಹಿಂದೆ ಕುಟ್ಟಾಣಿ ಇರಲಿಲ್ಲ, ಆಗ ಮರಿಗೆ ಅಥವಾ ಮರದಲ್ಲಿ ಬೆಳ್ಳುಳ್ಳಿ ಗೊಜ್ಜಿಗೆ ಬೇಕಾದ ಒಗ್ಗರಣೆಯನ್ನು ಕುಟ್ಟುತ್ತಿದ್ದರಂತೆ. ಅದಿಕ್ಕೆ ಮರಿಗೆ ಗೊಜ್ಜು ಎಂದು ಹೆಸರು ಬಂದಿದೆ.

ಎರಡು ಚಮಚ ಉದ್ದಿನ ಕಾಳು, ಒಂದು ಚಮಚ ಕೊತ್ತುಂಬರಿ, ಎರಡು ಚಮಚ ಎಳ್ಳು, ನಾಲ್ಕು ಹಸಿಮೆಣಸು, 8 ಬೆಳ್ಳುಳ್ಳಿ ಎಸೆಳು, ರುಚಿಗೆ ತಕ್ಕಷ್ಟು ಉಪ್ಪು, ಒಂದೂವರೆ ಕಪ್ ಮೊಸರು, ಇಂಗು, ಒಂದು ಚಮಚ ಸಾಸಿವೆ.

ಉದ್ದು, ಕೊತ್ತುಂಬರಿ, ಸಾಸಿವೆ, ಎಳ್ಳು, ಹಸಿಮೆಣಸು, ಬೆಳ್ಳುಳ್ಳಿಯನ್ನು ಎಣ್ಣೆ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

ಮಿಕ್ಸಿಯಲ್ಲಿ ಇದನ್ನು ತರಿರಿಯಾಗಿ ಪೌಡರ್ ಮಾಡ್ಕೊಳ್ಳಿ ಅಥವಾ ಕುಟ್ಟಾಣಿಯಲ್ಲಿ ಕುಟ್ಟಿ ಪುಡಿ ಮಾಡಿಕೊಳ್ಳಿ

ಇದಕ್ಕೆ ಮೊಸರು ಹಾಕಿದರೆ ಬೆಳ್ಳುಳ್ಳಿ ಮರಿಗೆ ಗೊಜ್ಜು ರೆಡಿ. ಬಿಸಿ ಬಿಸಿ ಅನ್ನಕ್ಕೆ ಇದನ್ನು ಹಾಕಿಕೊಂಡು ಊಟ ಮಾಡಿ

Source link
ಒಂದೇ ಒಂದು ಬೆಳ್ಳುಳ್ಳಿ ಸಾಕು; ನಾಲಿಗೆ ಚುರುಕು ಮುಟ್ಟಿಸೋ 'ಮರಿಗೆ ಗೊಜ್ಜು' ಮಾಡಬಹುದು!