
ತೆಲುಗು ನಟ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಚಿತ್ರದ ‘ಆಯಾ ಶೇರ್’ ಹಾಡು ಯೂಟ್ಯೂಬ್‌ನಲ್ಲಿ 101 ಮಿಲಿಯನ್ ವೀಕ್ಷಣೆ ದಾಟಿದೆ. ‘ದಸರಾ’ ಬಳಿಕ ನಾನಿ-ಶ್ರೀಕಾಂತ್ ಒಡೆಲಾ ಕಾಂಬೋದಲ್ಲಿ ಬರುತ್ತಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
ತೆಲುಗು ಸೂಪರ್ ಸ್ಟಾರ್ ನಾನಿ ನಟನೆಯ ‘ದಿ ಪ್ಯಾರಡೈಸ್’ ಸಿನಿಮಾದ ‘ಆಯಾ ಶೇರ್’ ಹಾಡು ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ಶ್ರೀಕಾಂತ್ ಒಡೆಲಾ ನಿರ್ದೇಶನದ ಈ ಪ್ಯಾನ್-ಇಂಡಿಯಾ ಚಿತ್ರದ ಹಾಡು, ಈಗಾಗಲೇ 101 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದು ವಿಶ್ವಾದ್ಯಂತ ಟ್ರೆಂಡಿಂಗ್‌ನಲ್ಲಿದೆ. ಈ ಹಾಡಿಗೆ ಯೂಟ್ಯೂಬ್‌ನಲ್ಲಿ 1.3 ಮಿಲಿಯನ್ ಲೈಕ್ಸ್ ಕೂಡ ಬಂದಿದೆ. ಇದೇ ವೇಳೆ, ಚಿತ್ರತಂಡ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದೆ.
‘ದಿ ಪ್ಯಾರಡೈಸ್’ ಸಿನಿಮಾ 2026ರ ಆಗಸ್ಟ್ 21ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ‘ದಸರಾ’ ಬ್ಲಾಕ್‌ಬಸ್ಟರ್ ಹಿಟ್ ಆದ ನಂತರ ನಾನಿ ಮತ್ತು ಶ್ರೀಕಾಂತ್ ಒಡೆಲಾ ಜೋಡಿ ಮತ್ತೆ ಒಂದಾಗಿದೆ. ‘ದಸರಾ’ ಚಿತ್ರದ ನಿರ್ಮಾಪಕರೇ ಆದ ಸುಧಾಕರ್ ಚೆರುಕುರಿ ಅವರೇ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಈ ಹಾಡು ಬಿಡುಗಡೆಯಾಗಿ ಸುಮಾರು ಎರಡು ತಿಂಗಳಾದರೂ, ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ.
ನಾನಿ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿದ್ದ ಈ ಹಾಡು, ಕೇವಲ 24 ಗಂಟೆಗಳಲ್ಲಿ 15 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದು ದಾಖಲೆ ಬರೆದಿತ್ತು. ಭಾರತ ಮತ್ತು ಯುಎಇ ಮ್ಯೂಸಿಕ್ ಚಾರ್ಟ್‌ಗಳಲ್ಲಿ ನಂಬರ್ 1 ಸ್ಥಾನಕ್ಕೇರಿದ್ದ ಈ ಹಾಡು, ಯುಕೆ, ಆಸ್ಟ್ರೇಲಿಯಾ, ಸಿಂಗಾಪುರ, ಕೆನಡಾ, ಸೌದಿ ಅರೇಬಿಯಾ, ಯುಎಸ್‌ಎ ಮತ್ತು ನ್ಯೂಜಿಲೆಂಡ್‌ನಲ್ಲೂ ಟಾಪ್ ಲಿಸ್ಟ್‌ನಲ್ಲಿತ್ತು. ಈ ಹಾಡಿನಲ್ಲಿ ನಾನಿ ಹಾಕಿದ ಐಕಾನಿಕ್ ಹುಕ್ ಸ್ಟೆಪ್ ಕೂಡ ವಿಶ್ವಾದ್ಯಂತ ವೈರಲ್ ಆಗಿದೆ.
ಇದು ಚಿತ್ರದಲ್ಲಿ ನಾನಿ ಅವರ ಇಂಟ್ರೊಡಕ್ಷನ್ ಸಾಂಗ್ ಆಗಿದೆ. ಕಾಸರ್ಲ ಶ್ಯಾಮ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಅದ್ದುಲ ಜಂಗಿರೆಡ್ಡಿ, ಅಕ್ನೂರಿ ದೇವಯ್ಯ ಮತ್ತು ಅನಿರುಧ್ ರವಿಚಂದರ್ ಜೊತೆಗೂಡಿ ಹಾಡಿದ್ದಾರೆ. ಅನಿರುಧ್ ರವಿಚಂದರ್ ಅವರೇ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಜೆರ್ಸಿ’ ಮತ್ತು ‘ಗ್ಯಾಂಗ್ ಲೀಡರ್’ ನಂತರ ನಾನಿ ಮತ್ತು ಅನಿರುಧ್ ರವಿಚಂದರ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮೂರನೇ ಸಿನಿಮಾ ‘ದಿ ಪ್ಯಾರಡೈಸ್’.
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ವಿಜಯ್ ಅಭಿನಯದ ‘ಜನ ನಾಯಕನ್’ ಚಿತ್ರಕ್ಕೆ ಕೆಲಸ ಮಾಡಿದ್ದ ಡ್ಯಾನ್ಸ್ ಮಾಸ್ಟರ್ ಸುಧನ್, ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ನಾನಿ ವೃತ್ತಿಜೀವನದಲ್ಲೇ ‘ದಿ ಪ್ಯಾರಡೈಸ್’ ಅತಿದೊಡ್ಡ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ಗಳು ಮತ್ತು ‘ಸ್ಪಾರ್ಕ್ ಆಫ್ ಪ್ಯಾರಡೈಸ್’ ಗ್ಲಿಂಪ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿವೆ.