ಸ್ಮೋಕಿಂಗ್​ ಸ್ಟೈಲ್​ನಲ್ಲಿ ಹುಟ್ಟುಹಬ್ಬದ ದೀಪ ಹಚ್ಚಿದ Bigg Boss ಹಂಸಾ ನಾರಾಯಣಸ್ವಾಮಿ- Video viral

ಸ್ಮೋಕಿಂಗ್​ ಸ್ಟೈಲ್​ನಲ್ಲಿ ಹುಟ್ಟುಹಬ್ಬದ ದೀಪ ಹಚ್ಚಿದ Bigg Boss ಹಂಸಾ ನಾರಾಯಣಸ್ವಾಮಿ- Video viral

ಸ್ಮೋಕಿಂಗ್​ ಸ್ಟೈಲ್​ನಲ್ಲಿ ಹುಟ್ಟುಹಬ್ಬದ ದೀಪ ಹಚ್ಚಿದ Bigg Boss ಹಂಸಾ ನಾರಾಯಣಸ್ವಾಮಿ- Video viral
ಬಿಗ್‌ ಬಾಸ್‌ ಹಾಗೂ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ ಖ್ಯಾತಿಯ ನಟಿ ಹಂಸಾ ನಾರಾಯಣಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಸಿಗರೇಟ್ ಮಾದರಿಯಲ್ಲಿ ಕೇಕ್ ಹಚ್ಚುವ ಮೂಲಕ ವಿಭಿನ್ನವಾಗಿ ಆಚರಿಸಿಕೊಂಡಿದ್ದು, ಈ ವಿಡಿಯೋ ಗಮನ ಸೆಳೆದಿದೆ.
ಬಿಗ್‌ ಬಾಸ್‌ ಮನೆಯಲ್ಲಿ 4 ವಾರಗಳ ಕಾಲ ಇದ್ದು ಎಲಿಮಿನೇಟ್​ ಆಗಿ ಹೊರಬಂದವರು ಹಂಸಾ ನಾರಾಯಣಸ್ವಾಮಿ ಉರ್ಫ್​ ಹಂಸಾ ಪ್ರತಾಪ್​. ಬಿಗ್​ಬಾಸ್​ ಮನೆಯಲ್ಲಿ ಇರುವಷ್ಟು ದಿನ ಹವಾ ಕ್ರಿಯೇಟ್​ ಮಾಡಿದ್ದರು. ಇವರು ಸಕತ್​ ಸದ್ದು ಮಾಡಿದ್ದು, ಲಾಯರ್​ ಜಗದೀಶ್​ ಅವರೊಂದಿಗಿನ ಒಡನಾಟದಿಂದಾಗಿ. ಕೊನೆಗೆ ಇಬ್ಬರೂ ಹೊರಕ್ಕೆ ಬಂದರು.

ಇದು ಬಿಗ್​ಬಾಸ್​ ಹಂಸಾರ ಕಥೆಯಾದ್ರೆ, ಪುಟ್ಟಕ್ಕನ ಮಕ್ಕಳು ರಾಜಿಯಾಗಿ ಎಲ್ಲರ ಮನ ಗೆದ್ದವರು ಹಂಸಾ. ಸವತಿ ಪಾತ್ರಕ್ಕೆ ಜೀವ ತುಂಬಿದ್ದ ರಾಜಿ ಪಾತ್ರಧಾರಿ ಹಂಸಾ ಅವರನ್ನು ಕಾಣದೇ ಅಭಿಮಾನಿಗಳು ಶಾಕ್​ ಆಗಿದ್ದರು. ಕೊನೆಗೆ ಹೇಳದೇ ಕೇಳದೇ ಹಂಸಾ ಅವರು, ಸೀರಿಯಲ್​ ತಂಡಕ್ಕೆ ಮೋಸ ಮಾಡಿದ್ದಾರೆ ಎಂದು ನಿರ್ದೇಶಕರು ಮಾಧ್ಯಮಗಳ ಎದುರು ಆರೋಪ ಮಾಡಿದ್ದೂ ಆಯಿತು, ಅದಕ್ಕೆ ಹಂಸಾ ತಿರುಗೇಟು ನೀಡಿದ್ದೂ ಆಯ್ತು.

ಇದೀಗ ಹಂಸಾ ಅವರು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ವಿಭಿನ್ನ ರೀತಿಯ ರೀಲ್ಸ್​ ಮಾಡುತ್ತಿರುತ್ತಾರೆ. ಇದೀಗ ನಟಿ, ಹುಟ್ಟುಹಬ್ಬವನ್ನೂ ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡು ಅದರ ವಿಡಿಯೋ ಶೇರ್​ ಮಾಡಿದ್ದಾರೆ.

ಕೇಕ್​ ಮೇಲೆ ಹಂಸಾ ಎಂದು ಬರೆಯಲಾಗಿದೆ. ಸಿಗರೆಟ್​ ರೀತಿಯಲ್ಲಿ ಬಾಯಲ್ಲಿ ಕಡ್ಡಿ ಇಟ್ಟು ಅದರ ತುದಿಗೆ ಲೈಟರ್​ಯಿಂದ ಲೈಟ್​ ಹಚ್ಚಿ ಅದನ್ನು ಕೇಕ್​ ಮೇಲೆ ಹಚ್ಚಿದ್ದಾರೆ ನಟಿ. ಕೊನೆಗೆ ಅದನ್ನು ಉಫ್ ಮಾಡಿ ಆಫ್​ ಮಾಡಿದ್ದಾರೆ It’s new life ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಈ ಮೂಲಕ ಹೊಸ ವಿಧಾನದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಇನ್ನು ಹಂಸ ಅವರ ಕುರಿತು ಹೇಳುವುದಾದರೆ, ಅವರು ಈ ಹಿಂದೆ, ಧ್ರುವ, ಅಮ್ಮ, ರಾಜಾಹುಲಿ, ಸಖತ್​, ಜೇಮ್ಸ್, ಉಂಡೆನಾಮ ​ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ರಿಯಾಲಿಟಿ ಷೋಗಳಲ್ಲಿಯೂ ಭಾಗಿಯಾಗಿದ್ದಾರೆ.

ಅಂದಹಾಗೆ ಹಂಸ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟಿವ್​. ಬಗೆಬಗೆಯ ಡ್ರೆಸ್​ ತೊಟ್ಟು ಹಂಸ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇದ್ದಾರೆ. ರೆಡ್ ಬ್ಲೇಜರ್ ತೊಟ್ಟು, ಬ್ಲಾಕ್ ಕಲರ್ ಸೂಟ್, ಮಿಡಿ, ಮಿನಿ, ಫ್ರಾಕ್​, ಸಲ್ವಾರ್​, ಸೀರೆ… ಹೀಗೆ ವಿಭಿನ್ನ ಉಡುಗೆ ತೊಟ್ಟು ಅವರು ಫೋಟೋಶೂಟ್​ ಮಾಡಿಸಿಕೊಂಡಿದ್ದು ಅದರ ಫೋಟೋ ಶೇರ್​ ಮಾಡುತ್ತಿರುತ್ತಾರೆ. . ಈ ಫೋಟೋಗಳಿಗೆ ಸಕತ್​ ಕಮೆಂಟ್​ಗಳ ಸುರಿಮಳೆಯಾಗುತ್ತಿರುತ್ತದೆ. ಅಂದಹಾಗೆ ಹಂಸ ಅವರಿಗೆ ಓರ್ವ ಮಗನಿದ್ದಾನೆ.

Source link

Leave a Reply

Your email address will not be published. Required fields are marked *