
ಐಪಿಎಲ್ ಪಂದ್ಯಗಳ ವೇಳೆ ಮೊಬೈಲ್ ಕದಿಯಲೆಂದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹೈಟೆಕ್ ಕಳ್ಳರ ಜಾಲವನ್ನು ಅಹ್ಮದಾಬಾದ್ ಪೊಲೀಸರು ಭೇದಿಸಿದ್ದಾರೆ. ಬೆಂಗಳೂರು ಮತ್ತು ಅಹ್ಮದಾಬಾದ್ ಸ್ಟೇಡಿಯಂಗಳಲ್ಲಿ ಕ್ರಿಕೆಟ್ ಪ್ರೇಮಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು.
ಸ್ಟೇಡಿಯಂನಲ್ಲಿ ಫೋನ್ ಎಗರಿಸಿ ಕ್ಷಣಾರ್ಧದಲ್ಲಿ ಎಸ್ಕೇಪ್
ಐಪಿಎಲ್ ಪಂದ್ಯಗಳಲ್ಲಿ ಮೊಬೈಲ್ ಕಳ್ಳತನ ಮಾಡುವುದಕ್ಕೆಂದೇ ವಿಮಾನವೇರಿ ಬರುತ್ತಿದ್ದ ಹೈಟೆಕ್ ಕಳ್ಳರನ್ನು ಗುಜರಾತ್‌ನ ಅಹ್ಮದಾಬಾದ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬೆಂಗಳೂರು ಹಾಗೂ ಅಹ್ಮದಾಬಾದ್‌ನಲ್ಲಿ ಐಪಿಎಲ್ ಮ್ಯಾಚ್ ಸಮಯದಲ್ಲಿ ಸ್ಟೇಡಿಯಂಗೆ ಕ್ರಿಕೆಟ್ ವೀಕ್ಷಣೆಗೆ ಬರುತ್ತಿದ್ದ ಕ್ರಿಕೆಟ್ ಪ್ರೇಮಿಗಳ ದುಬಾರಿ ಮೊಬೈಲ್ ಫೋನ್ ಅನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ವಿಮಾನವೇರಿ ಬರುತ್ತಿದ್ದ ಆರೊಪಿಗಳು ವಿಮಾನದ ಮೂಲಕವೇ ಅಲ್ಲಿಂದ ಎಸ್ಕೇಪ್ ಆಗುತ್ತಿದ್ದರು. ಆರೋಪಿಗಳಿಂದ ದುಬಾರಿ ಮೌಲ್ಯದ 21 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳ್ಳತನಕ್ಕೆ ವಿಮಾನವೇರಿ ಬರ್ತಿದ್ದ ಹೈಟೆಕ್ ಕಳ್ಳರು
ಪೊಲೀಸರು ಕಲುಪುರ ರೈಲು ನಿಲ್ದಾಣದಲ್ಲಿ ರಘು ಫಕ್ಡಾ ಹಾಗೂ ವಿಕ್ರಮ್ ಮಹ್ತೊ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಅವರಿಂದ ವಿಮಾನದ ಟಿಕೆಟ್‌ಗಳು, 21 ಕಳುವಾದ ಫೋನ್‌ಗಳು, ಆಧಾರ್‌ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮೆಟ್ರೋ ರೈಲು ನಿಲ್ದಾಣಗಳು, ಐಪಿಎಲ್ ಸ್ಟೇಡಿಯಂಗಳು ಹೀಗೆ ಜನರಿಂದ ತುಂಬಿ ತುಳುಕುವಂತಹ ದೊಡ್ಡ ದೊಡ್ಡ ಕ್ರೀಡಾ ಪ್ರದೇಶಗಳನ್ನೇ ಈ ಕಳ್ಳರ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು.
ಕಳ್ಳತನ ಮಾಡುತ್ತಿದ್ದಿದ್ದು ಹೇಗೆ
ಈ ಕಳ್ಳರು ಲಿಫ್ಟ್ ಅಥವಾ ಎಸ್ಕಲೇಟರ್ ಪಕ್ಕದಲ್ಲೇ ನಿಲ್ಲುತ್ತಿದ್ದರು. ಯಾರಾದರೂ ಆಗಮಿಸುತ್ತಿದ್ದಂತೆ ಅವರ ಮೊಬೈಲ್ ಫೋನ್ ಎಗರಿಸುತ್ತಿದ್ದರು. ಕದ್ದ ಫೋನ್ ಅನ್ನು ಈ ಗ್ಯಾಂಗ್‌ನ 3ನೇ ಸದಸ್ಯ ತಕ್ಷಣವೇ ತೆಗೆದುಕೊಂಡು ಕ್ಷಣದಲ್ಲಿ ಎಸ್ಕೇಪ್ ಆಗ್ತಿದ್ದನು. ಹೀಗಾಗಿ ಫೋನ್‌ನ ಮಾಲೀಕರಿಗೆ ಮತ್ತೆ ಅವರ ಫೋನ್‌ಗಳು ಸಿಗುತ್ತಿರಲಿಲ್ಲ, ಆರೋಪಿಗಳು ಸಿಲ್ವರ್ ಫೋಯಿಲ್ ಬಳಸಿ ಫೋನ್ ಅನ್ನು ಸುತ್ತಿಡುತ್ತಿದ್ದರು. ಹೀಗಾಗಿ ಅವುಗಳ ಸಿಗ್ನಲ್ ತಕ್ಷಣವೇ ಬ್ಲಾಕ್ ಆಗುತ್ತಿತ್ತು. ಹಾಗೂ ಅದನ್ನು ಮತ್ತೆ ಪತ್ತೆ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ಕೆಲವು ತುಂಬಾ ದುಬಾರಿ ಫೋನ್‌ಗಳನ್ನು ಕದ್ದು ಅದರ ಲಾಕ್ ತೆಗೆದು ಕಳ್ಳರು ಮಾರಾಟ ಮಾಡುತ್ತಿದ್ದರು.
ಇದನ್ನೂ ಓದಿ: ಮಗಳ ಕನಸಿಗೆ ರೆಕ್ಕೆ ಕಟ್ಟಿದ ಅಪ್ಪ: ಪೊಲೀಸ್ ಇಲಾಖೆಗೆ ಆಯ್ಕೆಯಾದ ಸಂಭ್ರಮದಲ್ಲಿ ಅಪ್ಪನನ್ನೇ ಹೊತ್ತು ಕುಣಿದ ಸುಮೇಧಾ!
ಹೀಗೆ ಕದ್ದ ಮಾಲನ್ನು ಆರೋಪಿಗಳು ಜಾರ್ಖಂಡ್‌ನಲ್ಲಿ ಮಾರಾಟ ಮಾಡುತ್ತಿದ್ದರು. ಅಥವಾ ಕೆಲವೊಮ್ಮೆ ಅವುಗಳ ಪಾರ್ಟ್‌ಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುತ್ತಿದ್ದರು. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರಘು ಫಕ್ಡಾನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಓಂಕಾರ್ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಆರೋಪಿ ರಘು ಈ ಗ್ಯಾಂಗ್‌ನ ಲೀಡರ್ ಆಗಿದ್ದು, ಕೆಲಸ ಇಲ್ಲದ ಯುವಕರನ್ನು ಈತ ಕಳ್ಳತನಕ್ಕೆ ಸಿದ್ಧಪಡಿಸಿ ಕರೆತರುತ್ತಿದ್ದ. ಆರೋಪಿಗಳೆಲ್ಲರೂ ಜಾರ್ಖಂಡ್‌ನವರಾಗಿದ್ದು, ಜಾರ್ಖಂಡ್‌ನಿಂದ ಅಹ್ಮದಾಬಾದ್‌ಗೆ ಮೊಬೈಲ್ ಕಳ್ಳತನಕ್ಕೆಂದೇ ವಿಮಾನವೇರಿ ಬಂದಿದ್ದರು.
ಇದನ್ನೂ ಓದಿ: ಉದ್ಯೋಗಿಗಳ ಪಾಲಿನ ಕುಬೇರ: ಕೇವಲ 12 ರೂ.ನಿಂದ 15000 ಕೋಟಿ ಮೌಲ್ಯದ ಸಾಮ್ರಾಜ್ಯ ಕಟ್ಟಿದ ಡೈಮಂಡ್ ಕಿಂಗ್
ಪರಾರಿಯಾಗಿರುವ ಮತ್ತೊಬ್ಬರ ಆರೋಪಿ ಓಂಕಾರ್, . ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮತ್ತು 4 ರಂದು ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್‌ನಲ್ಲಿ, ಅದಕ್ಕೂ ಮೊದಲು ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನಲ್ಲಿ ಎರಡು ಫೋನ್‌ಗಳನ್ನು ಕದ್ದಿದ್ದರು ಮತ್ತು 4 ರಂದು ನಡೆದ ಐಪಿಎಲ್‌ನಲ್ಲಿ, ಅವರು ಇಲ್ಲಿಂದ ಎರಡು ಫೋನ್‌ಗಳನ್ನು ಎಬ್ಬಿಸಿದ್ದರು. ಕೇವಲ ಜಾರ್ಖಂಡ್ ಮಾತ್ರವಲ್ಲದೇ ಮುಂಬೈನಲ್ಲೂ ಆರೋಪಿಗಳು ಈ ಕದ್ದ ಮೊಬೈಲ್ ಫೋನ್ ಮಾರಾಟ ಮಾಡುತ್ತಿದ್ದರು.