
ಮೀನ ರಾಶಿಯವರೇ, ಪ್ರಸ್ತುತ ರಾಹು ನಿಮ್ಮ ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ ಈ ಗ್ರಹಣ ದೋಷವು ನಿಮ್ಮ ಮೇಲೆ ನೇರ ಪರಿಣಾಮ ಬೀರುತ್ತದೆ. ಮೀನ ರಾಶಿಯಲ್ಲಿ ರಾಹು ಮತ್ತು ಕನ್ಯಾ ರಾಶಿಯಲ್ಲಿ ಕೇತು ಇರುವುದರಿಂದ ಕೆಲವು ಕೆಟ್ಟ ಪರಿಣಾಮಗಳು ಉಂಟಾಗಬಹುದು. ಈ ಅವಧಿಯಲ್ಲಿ ಅನಗತ್ಯ ಭಯ, ನಿದ್ರಾಹೀನತೆ ಮತ್ತು ಭವಿಷ್ಯದ ಬಗ್ಗೆ ಆತಂಕ ಉಂಟಾಗಬಹುದು.
ನಿಮ್ಮ ಕಲ್ಪನಾ ಶಕ್ತಿಯು ನಕಾರಾತ್ಮಕ ಆಲೋಚನೆಗಳತ್ತ ಸಾಗುವ ಸಾಧ್ಯತೆಯಿದೆ. ಏಪ್ರಿಲ್ 13ರ ನಂತರ ಕೆಲಸ ಬದಲಾವಣೆ ಅಥವಾ ಹೊಸ ಆಸ್ತಿ ಖರೀದಿ ಮಾಡುವಾಗ ಚೆನ್ನಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಆರೋಗ್ಯದ ದೃಷ್ಟಿಯಿಂದ ಅಲರ್ಜಿ ಅಥವಾ ಜೀರ್ಣಕಾರಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಆದ್ದರಿಂದ ಆಹಾರದಲ್ಲಿ ಹಿಡಿತವಿರಲಿ.
ಇದನ್ನೂ ಓದಿ: Numerology: ಮೊದಲ ಪ್ರೇಮವೇ ಕೊನೆಯ ಪ್ರೀತಿ: ಈ ದಿನಾಂಕದಂದು ಜನಸಿದವರಿಗೆ ಗಂಡನೇ ಸರ್ವಸ್ವ!