Vaibhav Sooryavanshi: 15ನೇ ವರ್ಷದ ವೈಭವ್ ಸೂರ್ಯವಂಶಿ ಭಾರತ ತಂಡಕ್ಕೆ ಎಂಟ್ರಿ ಕೊಡ್ತಾರಾ ಎಂಬ ಚರ್ಚೆ ಶುರುವಾಗಿದೆ. ಐಪಿಎಲ್ 2026ರಲ್ಲಿ ಸಂಚಲನ ಮೂಡಿಸಿದ ಬಿಹಾರದ ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರಾ ಎಂಬ ಚರ್ಚೆ ಶುರುವಾಗಿದೆ. ಹಾಗಾದರೆ ಸತ್ಯ ಏನು?

ಇರ್ಫಾನ್ ಪಠಾಣ್ ಅವರು ಈ ಬಗ್ಗೆ ಮಾತನಾಡಿದಾಗಲೇ, ಅಂತಾರಾಷ್ಟ್ರೀಯ ಆಟಗಾರರು ವೈಭವ್ ಆಟಕ್ಕೆ ಹೆದರುತ್ತಿದ್ದಾರೆ, ಅಂತಾರಾಷ್ಟ್ರೀಯ ಆಟಗಾರರನ್ನೇ ವೈಭವ್ ಟಾರ್ಗೆಟ್ ಮಾಡುತ್ತಿದ್ದಾರೆ. ಈಗ ಅಂತಾರಾಷ್ಟ್ರೀಯ ಆಟಗಾರರು ವೈಭವ್ನನ್ನು ಟಾರ್ಗೆಟ್ ಮಾಡಿ ಎಂದು ಹೇಳಿ ನಕ್ಕಿದ್ದಾರೆ.

ವೈಭವ್ ಎಸೆತದಿಂದ ನಮಗೆ ಏನಾದರೂ ಸಮಸ್ಯೆ ಆಗಲಿದೆಯಾ ಎಂದು ಕೆಲ ಬೌಲರ್ಸ್ ಹೆದರಿದ್ದರಂತೆ. ಇದನ್ನು ಕೂಡ ಜಿತೇಶ್ ಶರ್ಮಾ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ವೈಭವ್ ಸೂರ್ಯವಂಶಿ, ಆರ್ಸಿಬಿ ವಿರುದ್ಧದ ಆಟದಲ್ಲಿ ಕೇವಲ 26 ಎಸೆತಗಳಲ್ಲಿ 78 ರನ್ ಬಾರಿಸಿದ್ದಾರೆ. ಇವರ ಬ್ಯಾಟಿಂಗ್ ವೇಗಕ್ಕೆ ಕ್ರಿಕೆಟ್ ಲೋಕ ಬೆರಗಾಗಿದೆ.

ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಅವರು ವೈಭವ್ ಆಟ ನೋಡಿ, ಈಗಲೇ ಭಾರತೀಯ ಸೀನಿಯರ್ ಟೀಂಗೆ ಸೇರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು 16ನೇ ವಯಸ್ಸಿಗೆ ಟೀಂ ಇಂಡಿಯಾ ಸೇರಿಕೊಂಡಿದ್ದರು. ವೈಭವ್ ಸೇರಿಕೊಂಡರೆ ಸಚಿನ್ ದಾಖಲೆಯನ್ನು ಮುರಿದಂತೆ ಆಗುವುದು.

ವೈಭವ್ ಸೂರ್ಯವಂಶಿಗೆ ಈಗಾಗಲೇ 15 ವರ್ಷ ಆಗಿದೆ. ಐಸಿಸಿ ನಿಯಮಗಳ ಅನ್ವಯ ಈಗ ಅವರು ಅಂತಾರಾಷ್ಟ್ರೀಯ ಆಟ ಆಡಬಹುದು. ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಅವರಂತಹ ಬೌಲರ್ಗಳ ಮೊದಲ ಬಾಲ್ಗೆ ಸಿಕ್ಸರ್ ಹೊಡೆದು, ಐಪಿಎಲ್ನಲ್ಲಿ ‘ಆರೆಂಜ್ ಕ್ಯಾಪ್’ ಧರಿಸಿದ್ದಾರೆ.

Source link
ಟೀಂ ಇಂಡಿಯಾ ಸೇರ್ತಾರಾ ವೈಭವ್ ಸೂರ್ಯವಂಶಿ? BCCIಗೆ ಹೋಯ್ತು ಹೈ ಇನ್ಫ್ಲುಯೆನ್ಸ್ ಮೆಸೇಜ್!