Headlines

ದಾವಣಗೆರೆ: ಉಪಚುನಾವಣಾ ಪ್ರಚಾರಕ್ಕೆ ಕರೆದಿಲ್ಲ; ಜಬ್ಬಾರ್​ಗೆ ಸಚಿವ ಮಲ್ಲಿಕಾರ್ಜುನ್​​ ಖಡಕ್ ಕೌಂಟರ್

ದಾವಣಗೆರೆ: ಉಪಚುನಾವಣಾ ಪ್ರಚಾರಕ್ಕೆ ಕರೆದಿಲ್ಲ; ಜಬ್ಬಾರ್​ಗೆ ಸಚಿವ ಮಲ್ಲಿಕಾರ್ಜುನ್​​ ಖಡಕ್ ಕೌಂಟರ್


ದಾವಣಗೆರೆ: ಉಪಚುನಾವಣ ಪ್ರಚಾರಕ್ಕೆ ಕರೆದಿಲ್ಲ; ಜಬ್ಬಾರ್‌ಗೆ ಸಚಿವ ಮಲ್ಲಿಕಾರ್ಜುನ್ ಖಡಕ್ ಕೌಂಟರ್

ದಾವಣಗೆರೆ, ಏಪ್ರಿಲ್ 11: ಒಂದು ಚಹಾ ಕುಡಿದರೆ ಋಣ ಇಟ್ಟುಕೊಳ್ಳಬೇಕು. ಎಂಎಲ್ಸಿ ಮಾಡಿದ್ದು ನಾವು. ಕಾಂಗ್ರೆಸ್ ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು ಎಂದು ಸಚಿವ ಎಸ್ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ. ಚುನಾವಣಾ ಪ್ರಚಾರಕ್ಕೆ ಕರೆದಿಲ್ಲ ಎಂಬ ಕಾಂಗ್ರೆಸ್ ಮುಖಂಡ ಅಬ್ದುಲ್ ಜಬ್ಬಾರ್ ಆರೋಪಕ್ಕೆ ಟಾಂಗ್ ನೀಡಿದ್ದಾರೆ. ಅವರು ಮಾಧ್ಯಮದವರೊಂದಿಗೆ ಮಾತನಾಡಿದರು, ಪಕ್ಷದ ಕಾರ್ಯಕರ್ತರಾಗಿ ನಾವು ನಮ್ಮ ಪಾಡಿಗೆ ಕರೆಗಾಗಿ ಕಾಯದೆ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವ ಬಗ್ಗೆ ನಡೆದ ಚರ್ಚೆಗಳು ಅನಗತ್ಯವಾಗಿದ್ದು, ಎಲ್ಲಾ ನಿರ್ಧಾರಗಳನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *