Headlines

ಆಕೆಯೊಟ್ಟಿಗೆ ರೂಮ್​ಗೆ ಹೋದಾಗ ಆದಿತ್ಯ, ಬಟ್ಟೆ ಬಿಚ್ಚಿದಾಗ ಅಬ್ದುಲ್ಲಾ! ಮತಾಂತರಕ್ಕೆ ಯತ್ನಿಸಿದವನಿಗೆ ಪರೇಡ್​ | Aadhaar Card Uncovers Love Jihad Case Dalit Girl After Changing Name Dhar News Suc

ಆಕೆಯೊಟ್ಟಿಗೆ ರೂಮ್​ಗೆ ಹೋದಾಗ ಆದಿತ್ಯ, ಬಟ್ಟೆ ಬಿಚ್ಚಿದಾಗ ಅಬ್ದುಲ್ಲಾ! ಮತಾಂತರಕ್ಕೆ ಯತ್ನಿಸಿದವನಿಗೆ ಪರೇಡ್​ | Aadhaar Card Uncovers Love Jihad Case Dalit Girl After Changing Name Dhar News Suc



ಆಕೆಯೊಟ್ಟಿಗೆ ರೂಮ್​ಗೆ ಹೋದಾಗ ಆದಿತ್ಯ, ಬಟ್ಟೆ ಬಿಚ್ಚಿದಾಗ ಅಬ್ದುಲ್ಲಾ! ಮತಾಂತರಕ್ಕೆ ಯತ್ನಿಸಿದವನಿಗೆ ಪರೇಡ್​ | Aadhaar Card Uncovers Love Jihad Case Dalit Girl After Changing Name Dhar News Suc

ತನ್ನನ್ನು ಆದಿತ್ಯ ಎಂದು ಪರಿಚಯಿಸಿಕೊಂಡ ಅಬ್ದುಲ್ಲ ಎಂಬ ಯುವಕ, ದಲಿತ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಾನೆ. ಸ್ನೇಹದ ಹೆಸರಲ್ಲಿ ಲೈಂಗಿಕ ದೌರ್ಜನ್ಯ ಎಸಗಿ, ಬಳಿಕ ತನ್ನ ನಿಜಬಣ್ಣ ಬಯಲಾಗುತ್ತಿದ್ದಂತೆ ಇಸ್ಲಾಂಗೆ ಮತಾಂತರವಾಗುವಂತೆ ಬೆದರಿಕೆ ಹಾಕಿದ ಆತಂಕಕಾರಿ ಘಟನೆ ಇದು.

ಲವ್​ ಜಿಹಾದ್​, ಮತಾಂತರ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಆತಂಕ ಸೃಷ್ಟಿಯಾಗಿದೆ. ಹುಬ್ಬಳ್ಳಿಯಲ್ಲಿನ ಕೆಲವು ಜಿಮ್​ಗಳು ಲವ್​ ಜಿಹಾದ್​ ಕೇಂದ್ರಗಳಾಗಿದ್ದು, ಇಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಟಾರ್ಗೆಟ್​ ಮಾಡಿಕೊಂಡು ಮೋಸದ ಜಾಲದಲ್ಲಿ ಸಿಲುಕಿಸುತ್ತಿರುವುದು ಬೆಳಕಿಗೆ ಬರುತ್ತಿದ್ದಂತೆಯೇ ಒಂದೊಂದಾಗಿ ಘಟನೆಗಳು ಹೊರಕ್ಕೆ ಬರುತ್ತಿವೆ. ಈಗ ಇಂಥದ್ದೇ ಒಂದು ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಅಬ್ದುಲ್ಲ ಎನ್ನುವ ಯುವಕ, ತಾನು ಆದಿತ್ಯ ಎಂದು ಹೆಸರು ಬದಲಿಸಿಕೊಂಡು ದಲಿತ ಯುವತಿಯ ಜೊತೆ ಸ್ನೇಹ ಬೆಳೆಸಿ, ಮದುವೆಯನ್ನೂ ಆಗಿ ಆಕೆಯನ್ನು ಮತಾಂತರಕ್ಕೆ ಒತ್ತಡ ಹಾಕಿರುವ ಬೆಚ್ಚಿಬೀಳಿಸೋ ಘಟನೆ ನಡೆದಿದೆ.

ಲೈಂ*ಗಿಕ ದೌರ್ಜನ್ಯ

ಮಧ್ಯಪ್ರದೇಶದ ಧಾರ್ ಜಿಲ್ಲೆಯ ಧಮ್ನೋಡ್‌ನಲ್ಲಿ ದಲಿತ ಯುವತಿಯ ಮೇಲೆ ಲೈಂ*ಗಿಕ ದೌರ್ಜನ್ಯ ಮತ್ತು ಅ*ತ್ಯಾಚಾರದ ಪ್ರಕರಣ ಈಗ ದಾಖಲಾಗಿದೆ. ಬುಡಕಟ್ಟು ಪ್ರಾಬಲ್ಯದ ಈ ಜಿಲ್ಲೆಯಲ್ಲಿಯೂ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿರುವುದು ಸುತ್ತಲೂ ಆತಂಕ ಸೃಷ್ಟಿಸಿದೆ. ಆರೋಪಿ ಮೊಬೈಲ್ ಫೋನ್ ಅಂಗಡಿಯಲ್ಲಿ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ. ಸ್ನೇಹ ಮಾಡಿಕೊಳ್ಳುವ ಸಂದರ್ಭದಲ್ಲಿ ತನ್ನ ಹೆಸರು ಆದಿತ್ಯ ಎಂದು ಹೇಳಿಕೊಂಡಿದ್ದ. ಯುವತಿ ಅದನ್ನು ನಂಬಿದ್ದಳು. ಸ್ನೇಹ ಮುಂದುವರೆದಿತ್ತು. ಕೊನೆಗೆ ಹೋಟೆಲ್‌ಗೆ ಕರೆದೊಯ್ದು ಅತ್ಯಾ*ಚಾರ ಮಾಡಿದ.

ಬಿಚ್ಚಿಟ್ಟ ಬಟ್ಟೆಯಲ್ಲಿ ರಹಸ್ಯ

ಈತನ ಈ ನಡವಳಿಕೆ ಯುವತಿಗೆ ಡೌಟ್​ ತರಿಸಿತು. ಆತ ಬಟ್ಟೆ ಬಿಚ್ಚಿಟ್ಟಿದ ಸಂದರ್ಭದಲ್ಲಿ ಆಕೆ ಆತನ ಜೇಬಿನಲ್ಲಿದ್ದ ಆಧಾರ್ ಕಾರ್ಡ್‌ ನೋಡಿದಳು. ಶಾಕ್​ ಆಗಿ ಹೋದಳು. ಅದರಲ್ಲಿ ಆತನ ಹೆಸರು ಅಬ್ದುಲ್ ಹಾದಿ ಪಠಾಣ್, ತಂದೆ ಹುಸೇನ್ ಪಠಾಣ್ ಎಂದು ಇತ್ತು. ತನ್ನ ಸತ್ಯ ಯುವತಿಗೆ ತಿಳಿಯುತ್ತಲೇ ಮಾಡೋದೆಲ್ಲಾ ಮಾಡಿಯಾಗಿದ್ದರಿಂದ ಆತ ಆಕೆಗೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದ.

ನಾನು ದಲಿತ ಎಂದ್ರೂ ಕೇಳಲಿಲ್ಲ

ಹಿಂಸೆ ವಿಪರೀತವಾದಾಗ ಯುವತಿ ಮನೆಯವರಿಗೆ ವಿಷಯ ತಿಳಿಸಿದಳು. ಕೂಡಲೇ ಅವರು ಪೊಲೀಸ್ ಠಾಣೆಗೆ ತೆರಳಿದರು. ಅಲ್ಲಿ ಯುವತಿ ತಮ್ಮ ಸ್ನೇಹ ಆರಂಭವಾದ ಬಗೆಯನ್ನು ತಿಳಿಸಿದ್ದಾಳೆ. ಎರಡು ವರ್ಷಗಳ ಹಿಂದೆ ಮೊಬೈಲ್ ಅಂಗಡಿಯಲ್ಲಿ ಆದಿತ್ಯ ಠಾಕೂರ್ ಎಂಬ ಯುವಕನನ್ನು ಭೇಟಿಯಾದೆ. ಆರೋಪಿ ತನ್ನ ಗುರುತನ್ನು ಮರೆಮಾಡಿ ಸ್ನೇಹ ಬೆಳೆಸಿಕೊಂಡ. ನಾನು ದಲಿತ ಯುವತಿ, ನೀನು ಠಾಕೂರ್​ ಎಂದರೂ ಆತ ಅದೆಲ್ಲಾ ಪರವಾಗಿಲ್ಲ ಬಿಡು ಎಂದು ಹೇಳಿ ಲವ್​ ಮಾಡಿದ. ಬಳಿಕ ಹೋಟೆಲ್, ಲಾಡ್ಜ್‌ ಅಂತೆಲ್ಲಾ ಕರೆದುಕೊಂಡು ಹೋಗಿ ನನ್ನನ್ನು ಬಳಸಿಕೊಂಡ. ಇಬ್ಬರೂ ಬೇಗನೇ ಮದುವೆಯಾಗೋಣ ಎಂದು ಹೇಳುತ್ತಲೇ ನನ್ನ ಮೇಲೆ ರೇ*ಪ್ ಮಾಡುತ್ತಲೇ ಇದ್ದ ಎಂದಿದ್ದಾಳೆ ಯುವತಿ.

ಮತಾಂತರಕ್ಕೆ ಬೆದರಿಕೆ

“ನಾನು ಮುಸ್ಲಿಂ ಆಗಿದ್ದರೆ ಏನು? ಇಸ್ಲಾಂಗೆ ಮತಾಂತರಗೊಂಡು ಇಸ್ಲಾಂ ಆದೆ, ನಿನ್ನನ್ನು ಮದುವೆಯಾಗುತ್ತೇನೆ. ಒಂದು ವೇಳೆ ಈ ವಿಷಯ ಎಲ್ಲಿಯಾದರೂ ಹೇಳಿದರೆ ಕೊಲ್ಲುತ್ತೇನೆ, ನೀನೂ ಇಸ್ಲಾಂಗೆ ಮತಾಂತರವಾಗಬೇಕು, ನಿನ್ನನ್ನು ಬಳಸಿಕೊಂಡಾಗಿದೆ. ವಿಡಿಯೋನೂ ಇದೆ. ಮದುವೆಯಾಗುವುದು ಒಂದೇ ದಾರಿ. ಮತಾಂತರವಾಗದಿದ್ದರೆ ನಿನ್ನ ಜೀವನ ನರಕವಾಗುತ್ತದೆ ಎಂದು ಬೆದರಿಕೆ ಹಾಕಿದ ಎಂದು ಯುವತಿ ಹೇಳಿದ್ದಾಳೆ. ಅಲ್ಲಿ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದರು. ಅಷ್ಟೊತ್ತಿಗೆ ಅಬ್ದುಲ್ಲಾ ಪರಾರಿಯಾಗಿದ್ದ. ಆತನನ್ನು ಹುಡುಕಲು ಒಂದು ತಂಡ ಕೂಡ ಖಾರ್ಗೋನ್‌ಗೆ ಆಗಮಿಸಿದ್ದರೂ ಆತ ಸಿಗಲಿಲ್ಲ.

Scroll to load tweet…



Source link

Leave a Reply

Your email address will not be published. Required fields are marked *